ಮನಸೂರೆಗೊಂಡ ಮೋಹಿನಿ....ಯಕ್ಷತರಂಗಿಣಿ ಯ ನಗು ಮೊಗದ ಚೆಲುವೆ ಮೈತ್ರಿ..... ಏನೆಂದು ಪೇಳಲಿ ...ಬಂದಳಾಗ ಮೋಹಿನಿ ಆನಂದದಿ ...ಪದ್ಯಕ್ಕೆ ಒಯ್ಯಾರದಿಂದ ರಂಗಕ್ಕೆ ಬಂದೆ ಬಂದ ಯಕ್ಷ ಅಭಿಮಾನಿಗಳ ನಿನ್ನ ಆ ಮುಗುಳು ನಗೆಯಲೇ ಎಲ್ಲರ ಚಿತ್ತವನ್ನು ನಿನ್ನತ್ತ ಸೆಳೆದುಕೊಂಡೆ...ನಿನ್ನ ಭಾವಾಭಿನಯನಕ್ಕೆ ನಾ ಮನಸೋತು ಹೋದೆ...ಕುಳಿತಲ್ಲೆ ಮನತುಂಬಿ ಬಂತು....ನಮ್ಮ ಮೈತ್ರಿ ಎಂದು ಕೊಂಡಾಡಿದೆ....ನಿನ್ನ ಈ ರೀತಿಯ ಬೆಳವಣಿಗೆ ಗೆ ನಾ ಸದಾ ಚಿರ ಋಣಿ.....ಎಲ್ಲರ ಮನ ಗೆದ್ದ ಮೋಹಿನಿ...ವನವಿಹಾರಕ್ಕೆ ಹೊರಟೆ ಬಿಟ್ಟಳು ನೋಡು.... ಧರಣಿ ರಮಣಿ ಹಸಿರು ಶಾಲೆಯುಟ್ಟು ನಲಿವಳು....ಮೈ ರೋಮಾಂಚನಗೊಳಿಸುವ ಆ ನಿನ್ನ ಮುಖ ಭಾವನೆ...ಎಷ್ಟೊಂದು ಅದ್ಭುತವಾದ ಅಭಿನಯ....ತುಂಬಾ ಅನುಭವಿಸುತ್ತ ಕುಣಿದೆ...ಕುಪ್ಪಳಿಸಿದೆ....ನಿಜಕ್ಕೂ ಭೇಷ್ ಮಗಳೇ.....ನಾ ಬಾಲ್ಯದಿಂದಲೂ ಕಂಡ ಕನಸು ನನಸು ಮಾಡುತ್ತಿರುವೇ....ನಿನಗೆ ನಾ ಅಭಿಮಾನಿಯಾದೆ....ಸದಾ ಹೀಗೆ ಸಾಗಲಿ ಯಕ್ಷ ಪಯಣ.....ನರ್ತನ.....ಅಭಿನಯ ವಾಕ್ ಚಾತುರ್ಯ ಬಂದವರಿಗೆ ರಸದೌತಣ.....ಮಗಳೇ.....ನಿನ್ನ ಶ್ರೇಯಸ್ಸನ್ನೇ ಸದಾ ಬಯಸುವ...ನಿನ್ನ ಅಣ್ಣಯ್ಯ....ನಂದನ್...💐💐