||ನೀಲಕಂಠ ನಿನ್ನಡಿಗೆ ಎನ್ನಯ ನಮನವಯ್ಯ ನಾಡಬ್ರಹ್ಮ ನಿನ್ನ ನಾಮ ಪಾಡಿ ನಾ ಧನ್ಯನಯ್ಯ|| ||ನಟರಾಜ ನಿನ್ನ ನಾಟ್ಯ ನೋಡಿ ನರ್ತಿಸಿದೆ ತನುವು ನಯನತ್ರಯ ನಿನ್ನ ರೂಪ ನೋಡಿ ತಣಿಯಿತು ಈ ನಯನ ನಿಶಾಕರನ ಜಟೆಯಲ್ಲಿ ಧರಿಸಿರುವ ನೀಲ ಲೋಹಿತ|| ||ನಿಸ್ಸಂಧಿಯಾಗಿ ನಿವೇದಿಸುವೆ ನಾ ನಿನ್ನ ಚರಣದಲಿ ನಿನ್ನ ಸೇವೆಗೈಯ್ಯುತ ಅನವರತ ನಾ ಬಾಳುವೆ ಎಂದೆಂದೂ ನಮನವಿದೋ ಕರುಣಾಮಯ ಶಿವ ಕರುಣಾಮಯ||