Рет қаралды 56
ಅಂಜಿಕೆ ಇನ್ಯಾತಕಯ್ಯ / Anjikinyatakayyaa sajjanarige
Lyrics: ಅಂಜಿಕಿನ್ನಾತಕಯ್ಯ , ಸಜ್ಜನರಿಗೆ
ಅಂಜಿಕಿನ್ನಾತಕಯ್ಯ ||ಪ||
ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ || ಅ.ಪ.||
ಕನಸಿಲಿ ಮನಸಿಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಪಾಪ ||
ರೋಮರೋಮಕೆ ಕೋಟಿ ಲಿಂಗವುದುರಿಸಿದ
ಭೀಮನ ನೆನದರೆ ಬಿಟ್ಟು ಹೋಗದೆ ಪಾಪ ||
ಪುರಂದರವಿಠಲನ ಪೂಜೆಯ ಮಾಡುವ
ಗುರು ಮಧ್ವರಾಯರ ಸ್ಮರಣೆಮಾಡಿದ ಮೇಲೆ ||