Рет қаралды 275
ಅಂದವಾದ ತೋಯಜ ದ ಚಂದವಾದ
ಪಾದದಿಂದ ಓಡಿ ಬಾರೋ ರಂಗ ಸಾಗಿದಾರೋ| ಪ|
ಸುತ್ತಮುತ್ತ ಗುಮ್ಮಗಳು ಎತ್ತಿಕೊಂಡು ಒಯ್ಸುವ ನಿನ್ನ
ಸುತ್ತಿಸುತ್ತಿ ತಾಳಲಾರೆ ಓಡಿ ಬಾರೋ
ಕತ್ತಲಾಯಿತೆನ್ನ ರಂಗಸಾಗಿ ಬಾರೋ||೧||
ನೊರೆಹಾಲು ಮೊಸರು ಬೆಣ್ಣೆ
ಕರೆವತುರುಗಳು ಎಲ್ಲ
ಹರಿ ಎಲ್ಲಿ ಎನ್ನುತಲಿವೆ ಸಾಗಿ ಬಾರೋ ||೨ ||
ಕಂಡ ಕಂಡ ಜನರುನಿನ್ನ ಪಂಡನೆಂದು ಸಾರುತಿರೆ ಪಂಡನೇನೊ ನೀನು ಓಡಿ ಬಾರೋ
ಪ್ರಚಂಡ ಆನಂದವಿಠ್ಠಲ ಸಾಗಿ ಬಾರೋ||೩||