ಇಂದು ಬಾನಿಗೆಲ್ಲ ಹಬ್ಬ ಗಾಳಿ ಗಂಧಕ್ಕೂ ಹಬ್ಬ ಇಂದು ಭೂಮಿಗೆಲ್ಲ ಹಬ್ಬ ಪುಶ್ಪಕುಲಕ್ಕೂ ಹಬ್ಬ ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ ಇಲ್ಲಿ ಓಡುತಿರುವ ವಯಸಿಗೂ ಹಬ್ಬ ಇಂದು ಬಾನಿಗೆಲ್ಲ ಹಬ್ಬ ಗಾಳಿ ಗಂಧಕ್ಕೂ ಹಬ್ಬ ಇಂದು ಭೂಮಿಗೆಲ್ಲ ಹಬ್ಬ ಪುಶ್ಪಕುಲಕ್ಕೂ ಹಬ್ಬ ಈ ಭುವನವೆಲ್ಲ ಅಚ್ಚರಿಗಳ ರಾಶಿ ಅಲ್ಲಿದೆ ಮಳೆಹನಿ, ಇಲ್ಲಿದೆ ಬಿಸಿಲ ಬಿಸಿ ಹೃದಯ ಬಯಸುವ ಸುಖದ ಚಿತ್ರಕೆ ಹೃದಯ ಬಯಸುವ ಸುಖದ ಚಿತ್ರಕೆ ಕಣ್ಗಳೇ ಗಾಜಿನ ಪರದೆಯು ಇಂದು ಉಸಿರಿಗೆ ಹಬ್ಬ ಉಬ್ಬುವೆದೆಗೂ ಹಬ್ಬ ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ ಇಲ್ಲಿ ಓಡುತಿರುವ ವಯಸಿಗೂ ಹಬ್ಬ ಇಂದು ಮರಳಿಗೆ ಹಬ್ಬ ಉಪ್ಪು ಗಾಳಿಗೂ ಹಬ್ಬ ಇಂದು ಕಡಲಿಗೆ ಹಬ್ಬ ಅಪ್ಪೋ ಅಲೆಗೂ ಹಬ್ಬ ಒಳ್ಳೆ ಕ್ಷಣಗಳ ಕೂಡಿಡಬೇಕು ಬದುಕಿನ ನೆನಪಿಗೆ, ಋತುಗಳ ಜೂಟಾಟಕೆ ಸೊಗಸಿನಿಂದಲೇ ಸೊಗಸ ಸವಿಯುವ ಸೊಗಸಿನಿಂದಲೇ ಸೊಗಸ ಸವಿಯುವ ಸೊಗಸಿಗೆ ಚೆಲುವಿನ ಹೆಸರಿದೆ ಇಂದು ಚೆಲುವಿಗೆ ಹಬ್ಬ ಒಳ ಒಲವಿಗು ಹಬ್ಬ ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ ಇಲ್ಲಿ ಓಡುತಿರುವ ವಯಸಿಗೂ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ