Рет қаралды 875
ಕನಕದಾಸರ ಕ್ರಾಂತಿಕಾರಿ ಜೀವನ ಶೈಲಿ ಮತ್ತು ಮಾನವೀಯತೆಯ ಪ್ರತಿಪಾದನೆ | ಅವಧೂತ ಶ್ರೀ ವಿನಯ್ ಗುರೂಜಿ
ಸಂತರ ಜಾತಿಗಿಂತ ಅವರ ಸಾಧನೆ ಮುಖ್ಯವಾಗಿರುತ್ತದೆ. ಪ್ರಪಂಚದ ಅನುಭವದಿಂದ ಸಾಧಿಸಿರುವವರು ತುಂಬಾ ಜನರಿದ್ದರೂ ಅವರಲ್ಲಿ ಅಗ್ರ ಗಣ್ಯರೆಂದರೆ ಅದು ಕನಕದಾಸರು. ಬುದ್ದ, ಕಬೀರ, ಮಹಾವೀರರು ಅನುಭವದ ಸಾಧನಾ ಮಾರ್ಗದಲ್ಲಿ ಹೋದವರು. ಅವರಿಗೆ ಮಡಿವಂತಿಕೆಯ ಅಂಟು ಇರಲಿಲ್ಲ. ಆದರೆ ಕನಕದಾಸರು ಮಡಿವಂತಿಕೆಯ ಆಚೆ ಇರುವ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡವರು. ಮಾನವೀಯತೆಯು ದೈವತ್ವಗಿಂತ ಹಿರಿದು ಅನ್ನುವುದನ್ನು ಕನಕದಾಸರು ಸೇರಿದಂತ ಸಂತರು ಹೇಳುವುದರ ಜೊತೆಗೆ ಅದನ್ನು ನಿರೂಪಿಸಿದವರು. ಪ್ರತಿಯೊಂದು ತತ್ವಗಳ ಮೂಲ ನೆಲೆ ಮನುಷ್ಯತ್ವ ಆಗಿರುತ್ತದೆ. ಕನ್ನಡದಲ್ಲಿ ಬಹಳ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಹೆಚ್ಚು ಕೀರ್ತನೆಗಳನ್ನು ಹಾಗೂ ವಚನಗಳನ್ನು ಕೊಟ್ಟವರು ಕನಕದಾಸರಾಗಿದ್ದಾರೆ. ಭಗವಂತ ಜಾತಿಗಿಂತ ಭಕ್ತಿ ಪ್ರಿಯ ಅನ್ನುವುದನ್ನು ಕನಕದಾಸರು ನಿರೂಪಿಸಿದ್ದಾರೆ. ಕಂಬಳಿಯ ಪಾವಿತ್ರ್ಯತೆಯನ್ನೂ ಜಗತ್ತಿಗೆ ತೋರಿಸಿಕೊಟ್ಟವರೂ ಕನಕದಾಸರಾಗಿದ್ದಾರೆ.