ಬಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನಲ್ಲಿ ಇರಲಾಗಿ ಶಿಶುಮೋಹ ಸತಿಮೋಹ ಜನನಿ ಜನಕರ ಮೋಹ ರಸಿಕಬ್ರಾತರ ಮೋಹ, ರಾಜಮೋಹ ಪಶುಮೋಹ ಭೂಮೋಹ ಬಂಧುವರ್ಗದ ಮೋಹ ಅಸುರಾರಿ ನಿನ್ನ ಮರೆತೆ ನಕಟಕಟ ಕಾಯೋ ಅನಮದ ಅರ್ಥಮದ ಅಖಿಲ ವೈಭವದ ಮದ ಮುನ್ನ ಪ್ರಾಯದ ಮದವು ರೂಪ ಮದವು ತನ್ನ ಸತ್ವದ ಮದ ಧಾತ್ರಿ ವಶವಾದ ಮದ ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರು ಮತ್ತಷ್ಟರಾಸೆ ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟ ಜೀವನದಾಸೆ ಪುರಂದರವಿಠಲ