Рет қаралды 487,520
ಉತ್ತರ ಕನ್ನಡ: ಹೊಸದಿಲ್ಲಿಯ ಸಂಸತ್ ಭವನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಸಂಸತ್ ಉತ್ಸವದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಕಾರವಾರದ ಯುವತಿ ಚೇತನಾ ಕೊಲ್ವೇಕರ್ ಕೆಚ್ಚೆದೆಯ ಭಾಷಣ ಮಾಡಿದ್ದಾರೆ. ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಆಯೋಜನೆಯ 4ನೇ ಆವೃತ್ತಿಯ ರಾಷ್ಟ್ರೀಯ ಯುವ ಸಂಸತ್ ಉತ್ಸವ ಹೊಸದಿಲ್ಲಿಯ ಸಂಸತ್ ಭವನದಲ್ಲಿ ನಡೆಯುತ್ತಿದ್ದು, ಪ್ರತಿ ರಾಜ್ಯಗಳಿಂದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಮೂರು ಸ್ಥಾನ ಪಡೆದ ಸ್ಪರ್ಧಿಗಳು ಭಾಗವಹಿಸಿದ್ದರು.
ಕರ್ನಾಟಕದಿಂದ ಮೂವರು ಭಾಗವಹಿಸಿದ್ದು, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕಾರವಾರದ ಚೇತನಾ ಕೊಲ್ವೇಕರ್ ಎಲ್ಲರ ಗಮನ ಸೆಳೆಯುವಂತೆ ಭಾಷಣ ಮಾಡಿದ್ದಾರೆ. ಚೇತನಾ ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಳೆ. ಈ ಹಿಂದೆ ಕೂಡ ಯುವ ಸಂಸತ್ ಉತ್ಸವದಲ್ಲಿ ಸಭಿಕಳಾಗಿ ಸಂಸತ್ ಭವನದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದ ಈಕೆ, ಈ ಬಾರಿ ತಾನೇ ಭಾಷಣ ನೀಡಲು ಅವಕಾಶ ಪಡೆಯುವ ಮೂಲಕ ಯುವಜನತೆಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡಿದ್ದಾರೆ.
Uttara Kannada: Chetana Kolvekar, a young woman from Karwar, gave a brave speech as the representative of Karnataka at the National Youth Parliament Festival being held at Parliament House, New Delhi. The 4th edition of the National Youth Parliament Festival organized by the Union Ministry of Youth Affairs and Sports is being held at Parliament House, New Delhi, where the top three runners-up in the state level competition from each state participated.
#chetanakolvekar #karwar #nationalyouthparliamentfestival
Our Website : Vijaykarnataka...
Facebook: / vijaykarnataka
Twitter: / vijaykarnataka