Рет қаралды 235
#bhaktigeete
ದೇಹ ಜೀರ್ಣವಾಯಿತು
ಧನದಾಹ ಜೀರ್ಣವಾಗದು ಕೃಷ್ಣಾ ||ದೇಹ||
ಅಯ್ಯಾ ಕಣ್ಣು ಕಿವಿ ಮಂದವಾದವು ಹೆಣ್ಣು ಮಣ್ಣಿನಾಸೆ |
ಮಂದವಾಗದು ಕೃಷ್ಣಾ
ಕಾಲು ಕೈ ಜವಗುಂದಿದವು ||
ಭೋಗಲೋಲತೆ ಜವಗುಂದವು ಕೃಷ್ಣಾ
ಜರೆ ರೋಗದಿಂದ ನೆರೆಹೊರೆ ಹೇಸಿತು |
ಈ ಶರೀರದಲ್ಲಿ ಹೇಸಿಕೆ ಇನಿತಿಲ್ಲ ||
ನನ್ನ ದೇಹ ಪಾಪಕೋಟಿಗಳ ಮಾಡಿದರಿನ್ನು |
ತಾಪ ಮನದೊಳಗೆ ಇನಿತಿಲ್ಲ ||
ಹೀಗೆ ಸಂದು ಹೋಯಿತು ಕಾಲವೆಲ್ಲವು |
ಮುಂದಣಗತಿ ದಾರಿ ತೋರದು ಕೃಷ್ಣಾ ||
ಅನಾದಿಯಿಂದ ನಿನ್ನವನೆನಿಸಿದೆ |
ಎನ್ನ ಕುಂದು ನಿನ್ನದಲ್ಲವೆ ಕ್ರಷ್ಣಾ ||
ಇನ್ನಾದರು ದಯೆಯಿಂದೆನ್ನ ನೋಡಿ |
ಮನ್ನಿಸಬೇಕಯ್ಯ ಸಿರಿಕೃಷ್ಣಾ ||