Рет қаралды 248
ಎಷ್ಟು ಹೇಳಲಿ ವೆಂಕಟಗಿರಿಯ | Balaji| Yshtu helali venkatagiriya | Dasara Padagalu | Devaranama | ಹರಪನಹಳ್ಳಿಭೀಮವ್ವ | ಚಿರಾಗ್
ರಚನೆ : ಹರಪನಹಳ್ಳಿಭೀಮವ್ವ
ಗಾಯನ - ಸಂಗೀತ ಸಂಯೋಜನೆ - ಚಿರಾಗ್
Music composition and sung by : Chirag L
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ, ದಾಸರಪದ
Bhajane, Dasara Hadugalu, Padagalu, Dasa Sahitya
ಎಷ್ಟು ಹೇಳಲಿ ವೆಂಕಟಗಿರಿಯ
ದೃಷ್ಟಿಗೆ ಬಹು ಸಿರಿಯ
ಬೆಟ್ಟವನೆ ಮನಸಿಟ್ಟೇರಲು ಬೇಡಿದ
ಇಷ್ಟಾರ್ಥಗಳ ಈಡಾಡುವ ದೊರೆಯ ಪ
ಚಿತ್ರ ವಿಚಿತ್ರದ ಮಹಾದ್ವಾರ | ಚಿನ್ನದ ಗೋಪುರ
ಸ್ವಚ್ಛವಾದ ಸ್ವಾಮಿ ಪುಷ್ಕರಣಿ ತೀರ
ಸುತ್ತಲು ಪ್ರಾಕಾರ | ಹೆಚ್ಚಿನ ತೀವ್ರತವೆ ಮನೋಹರ
ಮಾರುವ ವಿಸ್ತಾರ | ಚಿತ್ತಜನಯ್ಯನ ಶೈಲವೆ ದೂರದಿಂ-
ದ್ಹತ್ತಿ ಬರುವುದೀತನ ಪರಿವಾರ 1
ರತ್ನ ಮಾಣಿಕ್ಯದ ಕೇಯೂರ | ಕಟ್ಟಿದ ಉಡಿದಾರ
ಉಟ್ಟಿದ್ದ ನಿರಿಜರಪೀತಾಂಬರ | ಕೌಂಸ್ತುಭ ಮಣಿಹಾರ
ಗಟ್ಟಿ ಕರಕಂಕಣ ಕುಂಡಲಧರ | ಚತುರ್ಭುಜದಲಂಕಾರ
ವಕ್ಷಸ್ಥಳದಲ್ಲಿ ಹೊಂದಿದ ಶ್ರೀ ಮಹಾ-
ಲಕ್ಷ್ಮಿದೇವಿಯರಿಂದೊಲಿವ ಶೃಂಗಾರ 2
ಆಕಾಶರಾಜನ ಕಿರೀಟ | ಚಿತ್ರವು ಬಹುಮಾಟ ಹಾಕಿದ್ದ ಹರಿ
ಕಡೆಗಣ್ಣಿನ ನೋಟ | ಭಕ್ತರ ಕುಣಿದಾಟ
ಭವ ಪಡಿಪಾಟ | ಬಿಡಿಸುವ ಯಮಕಾಟ
ಕೋಟಿ ಜನರ ಓಡ್ಯಾಟವೆ ನಮ್ಮ ಕಿ-
ರೀಟಿಯ ಸಖ ಕೇಶವನ ಮಂದಿರದೊಳ್ 3
ತಪ್ಪುಗಾಣಿಕೆಯ ಬೇಡುವ | ಸರ್ಪ ಶೈಲದ ತಿಮ್ಮಪ್ಪ
ಕಪ್ಪವ ಕಾಸು ಕವಡೆ ಮುಡುಪು | ಹಾಕದೆ ತಾನೊಪ್ಪ
ಜಪ್ಪಿಸಿ ನೋಡುವ ಜನರ ತಪ್ಪ | ಹುಡಿಕ್ಯಾಡುತಲಿಪ್ಪ
ಅಪ್ಪ ಮಹಿಮಾನಂತ ಮೂರುತಿ ತಾ-
ನೊಪ್ಪಿದರೊಲಿದು ಕೊಡುವ ಸಾರೂಪ್ಯ 4
ದೇಶದೇಶದೊಳು ಈತನ ವಾರುತೆಯು | ತುಂಬಿದ ಕೀರುತಿಯು
ಆಸೆಯ ದೈವ ಈ ಮೂರುತಿಯು | ಫಲ್ಗುಣ ಸಾರಥಿಯು
ಲೇಸಾಗಿ ಜನರ ನೋಡುವ ರತಿಯು | ಕರ್ಪುರದಾರತಿಯು
ವಾಸವಾಗಿರುವ ಈ ಶೇಷಾದ್ರಿಯಲಿ ಭೀ-
ಮೇಶ ಕೃಷ್ಣ ಶ್ರೀನಿವಾಸ ಕೃಪಾಳು 5
***
Yshtu helali venkata giriya srushtige bahu siriya || p ||
bettavane manasu itteralu bedidishtartha gala idaduva doreya || ap||
Chitra vichitrada mahadwaara chinnada gopura | swachchavaada swami pushkarani teera suttalu praakara || hecchina teeratha ve manohara maaruva vistara| chittajanayyana shailave dooradind hatti baruvudeetana parivaara || 1||
Ratna manikyada keyoora kattida udidaara| uttidda neelijari peetambara koustubha manihaara || gatti kara kankana kundaladhara chaturbhujadalankara | vaksha sthaladalli hondida Shri Mahalaxmideviyarindoliva shringara || 2 ||
Aakasha raajana keerita chitravu bahumaata| haakidda hari kadegannina nota bhaktara odanaata | bekaada bhajakara bhava paripaata bidisuva yamakaata| koti janara odyaatave namma kireetiya sakha keshavana mandiradol ||3 ||
Kappu kaanikeya beduva sarpa shailada timmappa | kappu kasu kavadeya mudupu haakade tanoppa| oppisi noduva janara tappu hudukyadutalippa | appa mahima ananta muruti tanoppidarolidu koduva samipya || 4 ||
Desha deshadolu eetana vaarteyu tumbida keerutiyu | aaseya daiva ee murutiyu phalguna sarathiyu || lesaagi janara noduva ratiyu karpuradaratiyu | vasavaagiruva ee sheshadriyali bheemesha krishna shrinivasa krupalo || 5 ||
*****
ಎಷ್ಟು ಪೇಳಲಿ ವೆಂಕಟಗಿರಿಯ ankita bheemesha krishna