ಗಣಪತಿ ದೇವರು ನೆಲೆಸಿರುವ ಕಲ್ಲಿನ ಕೊಳದಲ್ಲಿ ಈವರೆಗೆ ನೀರು ಬರಿದಾದ ಇತಿಹಾಸವಿಲ್ಲ😱Maha Ganapathi Temple Kolankal

  Рет қаралды 161

Browngirl04_

Browngirl04_

3 ай бұрын

ಕೊಳನಕಲ್ ಗಣಪತಿ ದೇವಸ್ಥಾನ ಬಿಟ್ಕಲ್ ಕಟ್ಟೆ ಕುಂದಾಪುರ
ಶಿಲಾಮಯ ಕೊಳದಲ್ಲಿ ಎಂದೂ ಬತ್ತದ ನೀರು !
ಹಲವೆಡೆ ನದಿ, ಕೆರೆ, ಮದಗ ಬತ್ತಿ ಬಸವಳಿದಿವೆ. ವಾರಾಹಿ
ಕಾಲುವೆ ಹಾದುಹೋಗುವಲ್ಲಿ ನೀರಿನ ಸಮೃದ್ಧತೆ ಕಣ್ಣಿಗೆ
ಕಟ್ಟುತ್ತಿದ್ದರೆ ಉಳಿದೆಡೆ ನೀರಿಗೋಸ್ಕರ ಅಂಡಲೆಯುವ ನೋಟ
ಕಂಡುಬಂದಿದೆ. ಕೃಷಿಭೂಮಿ, ತೋಟಗಳು ಬಾಡಿ
ಬಸವಳಿದಿರುವ ನಡುವೆ ಇಲ್ಲಿನ ಶಿಲೆಯ ಕೊಳದಲ್ಲಿ ನೀರು
ತುಂಬಿಕೊಂಡಿದೆ. ಎಂದಿಗೂ ಬತ್ತದ ಕೊಳ ಎಂಬ ನಂಬಿಕೆಗೆ
ಪುಷ್ಟಿ ನೀಡುವಂತೆ ಕೊಳದಲ್ಲಿ ನೀರು ಹಾಗೆನೆ
ಉಳಿದುಕೊಂಡಿದೆ. ಇದು ತಾಲೂಕಿನ ಬಿಟ್ಕಲ್‌ಕಟ್ಟೆ ಸಮೀಪದ
ಕೊಳನಕಲ್ ಮಹಾಗಣಪತಿ ದೇಗುಲ ಕೊಳದ ವಿಶೇಷತೆ.
ಅಂದಾಜು 20 ಅಡಿ ಎತ್ತರದ ಶಿಲಾ ಪರ್ವತದ ನಡುವಿನಲ್ಲಿ
ಕೊಳವಿದೆ. ಇಲ್ಲಿ ನೀರು ಒಂದೊಮ್ಮೆ ಕಡಿಮೆಯಾದಲ್ಲಿ
ಗಣಪತಿಗೆ ಅಭಿಷೇಕ ಮಾಡುವ ಸಂಪ್ರದಾಯವಿದೆ.
ಕೊಳನಕಲ್ ಪರಿಸರದ ಪ್ರತಿಯ ಮನೆಯ ಭಕ್ತರು
ಅಭಿಷೇಕದಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಹವನ
ನಡೆಸಿದಾಗ ವರ್ಷಧಾರೆ ಆಗಿ ಕೊಳ ತುಂಬುವ ಪರಿಪಾಠ
ನಡೆದುಕೊಂಡು ಬಂದಿದೆ. ಕೊಳದ ನೀರನ್ನು ದೇವರ
ಅಭಿಷೇಕಕ್ಕೆ ಮಾತ್ರ ಬಳಕೆ ಮಾಡಲಾಗುತ್ತದೆ.
ಈ ಕೊಳದಲ್ಲಿ ಇಂದಿಗೂ ನೀರು ಬತ್ತುವುದಿಲ್ಲ ಈ ವಿಸ್ಮಯ
ವೀಕ್ಷಣೆಗೆ ಹಲವು ಕಡೆಗಳಿಂದ ಭಕ್ತಾದಿಗಳು ಬರುತ್ತಾರೆ .
ಕುಂದಾಪುರ ತಾಲ್ಲೂಕಿನ ಬಿಟ್ಕಲ್ ಕಟ್ಟೆಯಿಂದ ಸುಮಾರು 5
ಕಿ.ಮೀ ದೂರದಲ್ಲಿರುವ ಕೊಳನಕಲ್ ಮಹಾಗಣಪತಿ ದೇಗುಲ
ವಿಸ್ಮಯ ಮೂಡಿಸುವ ಕ್ಷೇತ್ರ .ಎಂದೂ ಬತ್ತದ ಬಂಡೆಯ
ಮೇಲಿನ ಕೊಳದಲ್ಲಿ ಐಕ್ಯವಾಗಿರುವ ಇಲ್ಲಿನ ಗಣಪತಿ
ಇಷ್ಟಾರ್ಥಗಳನ್ನು ನೆರವೇರಿಸುವನು ಎಂಬ ನಂಬಿಕೆ
ಇದೆ.ಬ್ರಹತ್ ಬಂಡೆಯ ಮೇಲೆ ಇಲ್ಲಿ ಗಣಪತಿ ಉದ್ಭವಿಸಿದ್ದಾನೆ
ಎಂಬ ನಂಬಿಕೆ ಭಕ್ತರದ್ದು.
ಕಡುಬೇಸಗೆಯಲ್ಲೂ ಇಲ್ಲಿನ ಕೊಳದ ನೀರು ಬತ್ತದೆ ಇರುವುದು
ಇಲ್ಲಿನ ವಿಶೇಷತೆ.ಕುಂದಾಪುರದಿಂದ ಸರಿಸುಮಾರು 15 ಕಿಲೋ
ಮೀಟರ್ ದೂರದಲ್ಲಿರುವ ಸನ್ನಿಧಿಯ ವಠಾರ ಪ್ರಕೃತಿಯ
ರಮ್ಯತೆಗೆ ಹೆಸರುವೆತ್ತಿದೆ.
This video is about a little known temple on a rock some 33kms off Udupi.
Kolankal is a a name formed by joining 2 Kannada words- Kola (Pond) and Kal (Rock). Essentially it is about a pond located on top of a rock.
Despite being on a rock, the pond will have water all through the year. A temple is situated adjacent to it, where devotees worship lord Ganesha.
One climbs about 50 steps to reach on top of the rock. The location had many other rocks nearby, most of which have been blasted using dynamite and taken away by quarrying. Only the current rock is left, mainly due to presence of temple.
This place is around 33km from Udupi,one can reach here with their own vehicle .
Maha Ganapathi Temple, Kolankal, Shri Mahaganapati Temple, Kolanakallu, Karnataka
📍Google Map: maps.app.goo.gl/mTnPe36n9UpW5...
🌸subscribe‪@browngirl04_‬ for more updates🌼
#viral #youtube #2024 #foryou #bts #trendingsong #temple #unexplored #kundapura #viral #udupi #touristplace #explorepage #blogger

Пікірлер: 4
@user-wb4fp8rm3u
@user-wb4fp8rm3u 3 ай бұрын
🙏😍👍
@nischithanaik130
@nischithanaik130 3 ай бұрын
Intersting ❤️
@user-jp3ys4xe1p
@user-jp3ys4xe1p 3 ай бұрын
😍🙏
@foodiejournal994
@foodiejournal994 3 ай бұрын
🙏🏼🙏🏼
MISS CIRCLE STUDENTS BULLY ME!
00:12
Andreas Eskander
Рет қаралды 16 МЛН
КОМПОТ В СОЛО
00:16
⚡️КАН АНДРЕЙ⚡️
Рет қаралды 30 МЛН
DEFINITELY NOT HAPPENING ON MY WATCH! 😒
00:12
Laro Benz
Рет қаралды 61 МЛН
Beach facing Resort in Kundapura gives Goa vibes | Best beach resort
13:19
Between This and Thatt
Рет қаралды 29 М.
Sri Durgaparameshwari Temple, Mandarthi | Daiva Darshana | ದೈವ ದರ್ಶನ
6:33
Sri Durga Matha Jyothishya Peetam
Рет қаралды 6 М.
MISS CIRCLE STUDENTS BULLY ME!
00:12
Andreas Eskander
Рет қаралды 16 МЛН