Gadag Fakkireshwar Math Fair:ಹಿಂದೂ ಮುಸ್ಲಿಂ ಭೇದ ಇಲ್ಲ: ಇಲ್ಲಿ ಅಣ್ಣ ತಮ್ಮಂದಿರೇ ಎಲ್ಲಾ | Vijay Karnataka

  Рет қаралды 33,116

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಐತಿಹಾಸಿಕ ಫಕ್ಕಿರೇಶ್ವರ ಮಠದ ಜಾತ್ರೆ ದೇಶದ ಸೌಹಾರ್ದ ಪರಂಪರೆಯ ಇತಿಹಾಸದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತದೆ. ಪ್ರತಿ ವರ್ಷದಂತೆ ಆಗಿ ಹುಣ್ಣಿಮೆಯಂದು ಜಾತ್ರೆ ಸಂಭ್ರಮದಿಂದ ನಡೆಯಿತು. ಮಠದ ಅಂಗಳದಲ್ಲಿಯೇ ಒಂದು ಭಾಗದಲ್ಲಿ ಗರ್ಭಗುಡಿಯಲ್ಲಿ ಹಿಂದೂ ಧರ್ಮದ ಪ್ರಕಾರ ಪೂಜೆ, ಪುನಸ್ಕಾರಗಳು ನಡಿತಿದ್ರೆ, ಮತ್ತೊಂದೆಡೆ ದರ್ಗಾ ಕೂಡ ನಿರ್ಮಿಸಲಾಗಿದ್ದು, ಇಸ್ಲಾಂ ಧರ್ಮದ ಪ್ರಕಾರ ಸಾಂಪ್ರದಾಯದಂತೆ ಆಚರಣೆ ಮಾಡುವುದು ಇಲ್ಲಿನ ವಿಶೇಷ.
ಈ ಹಿಂದೆ ಬಿಜಾಪುರದ ಸೂಫಿ ಸಂತ ಖಾಜಾ ಅಮೀನುದ್ದೀನ್ ಅವರ ಅನುಗ್ರಹದಿಂದ ಜಂಗಮ ದಂಪತಿಗಳಾದ ಶಿವಯ್ಯ ಅವರಿಗೆ ಗಂಡು ಮಗು ಜನಿಸಿರುತ್ತೆ. ಖ್ವಾಜಾ ಅವರ ಆದೇಶದಂತೆ ಹುಟ್ಟಿದ ಮಗುವನ್ನು ದರ್ಗಾಕ್ಕೆ ಬಿಡುತ್ತಾರೆ. ಆ ಮಗುವಿಗೆ ಚನ್ನವೀರನೆಂದು ನಾಮಕರಣಮಾಡಿ, ಮುಂದೆ ಫಕ್ಕೀರ ಚನ್ನವೀರನೆಂಬ ಅಭಿದಾನ ನೀಡಿದ್ರು. ತಮ್ಮ ಸೌಹಾರ್ದ ಸಂದೇಶದ ಜೊತೆಗೆ ಹಲವು ಪವಾಡಗಳನ್ನು ಮಾಡಿ ಫಕ್ಕಿರೇಶ್ವರರೆಂದು ಪ್ರಸಿದ್ಧಿ ಪಡೆದು ಫಕ್ಕಿರ ಚನ್ನವೀರರು ಶಿರಹಟ್ಟಿಗೆ ಬಂದು ನೆಲಸಿದ್ರು ಅನ್ನೋದು ಶ್ರೀಮಠದ ಇತಿಹಾಸ. ಹೀಗಾಗಿ ಸಧ್ಯ ಎಂಟನೇ ಪೀಠಾಧಿಪತಿಗಳಿದ್ರು, ಮಠದ ಪರಂಪರೆಯಂತೆ ಒಂದೇ ಅಂಗಳದಲ್ಲಿ ಎರಡು ಧರ್ಮದ ಆಚರಣೆ ಮಾಡುತ್ತ ಜೀವನ ಸಾಗಿಸೋದ್ರ ಜೊತೆಗೆ ಜಾತ್ರಾ ಮಹೋತ್ಸವವನ್ನು ವಿಶಿಷ್ಟವಾಗಿ ಆಚರಿಸ್ತಾರೆ.
ಶ್ರೀಮಠದ ಇತಿಹಾಸ 15 ನೇ ಶತಮಾನದಲ್ಲೆ ಆರಂಭವಾಗಿದೆ. ಶತಮಾನಗಳು ಉರುಳಿದ್ರು ಪರಂಪರೆ ಮಾತ್ರ ಈ ಭಾಗದ ಜನ್ರು ಜೀವಂತವಾಗಿ ಜೋಪಾನ ಉಳಿಸಿಕೊಂಡಿದ್ದಾರೆ. ಇಂದು ಜಾತಿಯ ವಿಷಯವಾಗಿ ಮನಸುಗಳ ಮಧ್ಯೆ ಕಂದಕ ನಿರ್ಮಾಣವಾಗ್ತಿದೆ. ಹಿಜಾಬ್ ಪ್ರಕರಣದ ಬಳಿ ನಿತ್ಯವೂ ಒಂದಿಲ್ಲೊಂದು ವಿಷಯದಲ್ಲಿ ಧರ್ಮ ಯುದ್ದ ನಡೆಯುತ್ತಿದೆ. ಈ ಧರ್ಮ ದಂಗಲ್ ಮಧ್ಯೆಯೂ ಇಂದು ನಡೆದ ಫಕೀರೇಶ್ವರ ಜಾತ್ರೆಯಲ್ಲಿ ಹಿಂದೂ ಮುಸ್ಲಿಂ ಸಮುದಾಯದ ಜನ್ರು ಒಂದಾಗಿ ಜಾತ್ರೆ ಆಚರಣೆ ಮಾಡಿದ್ರು.
ಶಿರಹಟ್ಟಿ ಫಕೀರೇಶ್ವರ ಮಠದ ಜಾತ್ರೆಯಲ್ಲಿ ಮಾತ್ರ ಹಿಂದೂ ಮುಸ್ಲಿಂ ಜಾತಿ ಬೇಧವಿಲ್ಲದೇ ಸರ್ವಜನಾಂಗದ ಜನ್ರು ಜಾತ್ರೆ ಸಡಗರದಲ್ಲಿ ತೊಡಗಿದ್ರು. ಇಂತಹ ಜಾತಿಯ ಕಂದಕಕ್ಕೆ ಫಕ್ಕಿರೇಶ್ವರ ಮಠದ ಕಾರ್ಯ ಮಾದರಿಯಾಗಿದೆ. ಇಂದು ಸಾವಿರಾರು ಜನ್ರು ಫಕ್ಕಿರೇಶ್ವರ ಮಠದ ಜಾತ್ರೆಯ ಭಕ್ತಿಯಲ್ಲಿ ಮಿಂದೆದ್ರು. ವಿಜ್ರಂಭಣೆಯಿಂದ ನಡೆದ ರಥೋತ್ಸವಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಮೆರೆದ್ರು. ಕಾಯಿ ಕರ್ಪುರ ನೈವೇದ್ಯ ನೀಡಿ ಪೂಜೆ ಒಂದೆಡೆಯಾದ್ರೆ, ಸಕ್ಕರೆ, ಊದಬತ್ತಿ ಬೆಳಗೋ ಸಂಪ್ರದಾಯ ಒಂದೆಡೆ. ಎರಡು ಸಂಪ್ರದಾಯಗಳು ಒಂದೇ ಮಠದ ಅಂಗಳದಲ್ಲಿ ಅನಾವರಣಗೊಳ್ಳುತ್ತಿರೋದು ಸಾಮರಸ್ಯೆ ಬಯಸೋ ಪ್ರತಿ ಜೀವದ ಹಿಗ್ಗಿಗೆ ಕಾರಣವಾಗಿದೆ.
#Gadag #FakkireshwarMathFair #HinduMuslim
Our Website : Vijaykarnataka...
Facebook: / vijaykarnataka
Twitter: / vijaykarnataka

Пікірлер: 6
@maheshamahesha8432
@maheshamahesha8432 Жыл бұрын
ಅವರು ಕಡಿಮೆ ಸಂಖ್ಯೆ ಕಡಿಮೆ ಇದ್ದಾಗ ಮಾತ್ರ ಸೌಹಾರ್ದತೆಯಿಂದ ಇರ್ತರೆ ಅವರ ಸಂಖ್ಯೆ ಹೆಚ್ಚಾದರೆ ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರ ಮಾಡಿಕೂಳ್ಳುತಾರೆ ಹಿಂದೂಗಳೆ ಈ ಜಾತ್ಯತೀತ ಮನೋಭಾವ ಬಿಟ್ಟು ಹೋರಬಂದೂ ಯೋಚನೆ ಮಾಡಿ ಕಾಶ್ಮೀರ ಹಿಂದೂಗಳನ ಓಡಿಸಿದು ಯಾರು ಕರ್ನಾಟಕದಲ್ಲಿ ಹಲವಾರು ಹಿಂದೂ ಕಾರ್ಯಕರ್ತರನ ಕೊಲೆ ಮಾಡಿದ್ದು ಯಾರು ಎಂಬುದನ್ನ ಅದ್ಯಯನ ಮಾಡಿದ ನಂತರ ಈ ನಾಟಕವನ್ನ ಆಡಿ
@y.m.mahadeva3706
@y.m.mahadeva3706 7 ай бұрын
Exactly your statement is correct. Should not trust them.
@Sikhari973
@Sikhari973 4 ай бұрын
Dingalu Swamy ge karedu kondu hogi ella Masjid alli Ganesh puje madli nodona,
@Sikhari973
@Sikhari973 4 ай бұрын
Dingalu swamy nimmathava rige, Nachike yaga beku nivu turk rannu matte hogaluttiri hydrabad Nijam ru Rajakra Havali history oodi tilidu heli estu jana hindugala hatte madidru gotta ? T.....Undru Turk ra Sahavasa beda endidru, hirikru gotta ?
@pavithrashetty960
@pavithrashetty960 11 ай бұрын
ಇದು ಏಕೆ ಮಸೀದಿಯಲ್ಲಿ ಇಲ್ಲ😂😂😂
@Sikhari973
@Sikhari973 4 ай бұрын
Correct agi heliddu, masjid galalli 1 day ganesh puje madli nodonaa
Shirahatti Phakireshwara Namadyana || Juke Box || Namadyana
40:04
Ashwini Recording Co
Рет қаралды 57 М.
💩Поу и Поулина ☠️МОЧАТ 😖Хмурых Тварей?!
00:34
Ной Анимация
Рет қаралды 1,6 МЛН
Секрет фокусника! #shorts
00:15
Роман Magic
Рет қаралды 117 МЛН
💩Поу и Поулина ☠️МОЧАТ 😖Хмурых Тварей?!
00:34
Ной Анимация
Рет қаралды 1,6 МЛН