ನಿಮ್ಮ ಮನೆಯನು ಬೆಳಗಲು ಒಪ್ಪಿಸುವೆವು ಮಗಳನು ಏನು ಅರಿಯದ ಅಬಲೆಯ ಪ್ರೀತಿ ಯಿಂದಲೆ ಕಾಣಿರಿ|| ಪ|| ಹೊತ್ತು ಹೆತ್ತಿಹ ಮಗಳನು ನಿಮ್ಮ ಮಡಿಲಿಗೆ ಹಾಕುವೆ ನೀವೆ ತಂದೆ ತಾಯಿ ಯು ತಿಳಿದು ಅವಳನು ಸಾಕಿರಿ||೧|| ಪತಿಯೆ ದೈವತವೆಂದು ತಿಳಿದು ಬಿಟ್ಟು ಬಂದಿಹ ಮಗಳನು ಕಣ್ಣು ರೆಪ್ಪೆ ಯ ತೆರದಲಿ ಸಾಕಿ ಸಲಹಿರಿ ಇವಳೇನು||೨|| ನಮ್ಮ ಕರುಳಿನ ದೀಪವು ನಿಮ್ಮ ಮನವನು ತುಂಬಲಿ ಆರದಿರಲಿ ಎಂದಿಗೂ ಹರಸಿ ತುಂಬು ಹೃದಯದಿ||೩|| ಪತಿಯ ಜೊತೆ ಯಲಿ ಬಾಳು ನೀ ನೂರು ವರುಷ ಹರುಷದಿ ನಿಮ್ಮ ವಂಶವು ಬೆಳೆಯಲಿ ಇದುವೆ ತಾಯಿಯ ಆಸೆಯು||೪||