Рет қаралды 20,912
ಕನ್ನಡ ಒಗಟುಗಳು ಭಾಗ - 1 | Kannada Ogatugalu Part - 1
1. ನೀರಲ್ಲೆ ಹುಟ್ಟುತ್ತೆ ! ನೀರಲ್ಲೆ ಬೆಳೆಯುತ್ತೆ ! ನೀರು ಕಂಡ ಕೂಡಲೆ ಕರಗಿ ಹೋಗುತ್ತೆ !
ಉಪ್ಪು
2. ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ
ದೀಪ
3. ಅಪ್ಪನ ದುಡ್ಡು ಎಣಿಸೋಕಾಗಲ್ಲ , ಅವ್ವನ ಸೀರೆ ಮಡಿಸೋಕಾಗಲ್ಲ
ನಕ್ಷತ್ರ ಆಕಾಶ
4. ಊರಿಗೆಲ್ಲ ಒಂದೇ ಕಂಬ್ಳಿ
ಆಕಾಶ
5. ಮರದೊಳಗೆ ಮರ ಹುಟ್ಟಿ , ಭೂ ಚಕ್ರದ ಹಣ್ಣಾಗಿ , ತಿನ್ನಬಾರದ ಹಣ್ಣು ಬಲು ಚಂದ
ಎಳೇ ಕೂಸು
6. ಊರಿನಲ್ಲಿ ಕುರಿ ಕೂಗಿದರೆ ಮೈಯೆಲ್ಲಾ ತೂತು
ಒಂದರಿ
7. ನೀಲಿ ಕೆರೇಲಿ ಬಿಳಿ ಮೀನು
ಚಂದ್ರ
8. ಒಳ್ಳೆ ಕೋಳಿ ಮುಳ್ಳಲಿ ಮೊಟ್ಟೆ ಇಕ್ಕದೆ
ನಿಂಬೆಹಣ್ಣು
9. ತಂದವರೊಬ್ಬರು ! ಹಿಡಿದವರೊಬ್ಬರು ! ಹೊತ್ತವರೊಬ್ಬರು
ಬಳೆ
10. ಬಿಳಿ ಹುಡುಗನಿಗೆ ಕರಿಟೋಪಿ
ಬೆಂಕಿ ಕಡ್ಡಿ
11. ಮೂವತ್ತೆರಡು ಜನ ಅಗಿತಾರೆ, ಒಬ್ಬ ರುಚಿ ನೋಡ್ತಾನೆ
ಹಲ್ಲು, ನಾಲಿಗೆ
12. ಬಂಡೆಯ ಮೇಲೆ ಮಲಗುತ್ತೆ , ತಂತಿ ಮೇಲೆ ಕುಣಿಯತ್ತೆ
ಒಣಗಲು ಹಾಕಿದ ಬಟ್ಟೆ
13. ಬಿಳೀ ಕಲ್ಮೇಲೆ ಕರಿಕಲ್ಲು, ಕರೀ ಕಲ್ಮೇಲೆ ರಂಗೋಲೆ
ಕಣ್ಣು
14. ಸಾಸಿವೆ ಗಾತ್ರದ ಕಲ್ಲು ಬಿದ್ದರೆ, ಸಾವಿರ ರೂಪಾಯಿನ ತೋಟ ಹಾಳು !
ಕಣ್ಣು
15. ಸುತ್ತಮುತ್ತ ಗರಿಕೆ, ನಡುವೆ ಕುಡಿಕೆ
ಕಣ್ಣು
16. ಅಂಕು ಡೊಂಕಿನ ಮರ, ಕಚ್ಚಿದವರ ಬಾಯಿಗೆ, ಉಚ್ಚಿ ಹುಯ್ಯುವ ಮರ
ಕಬ್ಬು
17. ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು
ಕಲ್ಲಂಗಡಿ
18. ಕರಿ ಮಂಚದ ಮೇಲೆ, ಹಾಕುವ ಹಾಸಿಗೆ, ತೆಗೆಯುವ ಹಾಸಿಗೆ
ಕಾವಲಿ ದೋಸೆ
19. ತೂತಿಲ್ಲದ ಒಡವೆ
ಕುಂಕುಮ
20. ಕಿರಿ ಮನೆಗೆ ಚಿನ್ನದ ಬೀಗ
ಮೂಗುತಿ
21. ಯಾರೂ ಹತ್ತಲಾರದ ಮರಕ್ಕೆ ಸರಗೂರು ಕರಿಯಪ್ಪ ಹತ್ತುತ್ತಾನೆ
ಇರುವೆ
22. ಎಷ್ಟೇ ಮಳೆ ಬಂದರೂ ನೆನೆಯುವುದಿಲ್ಲ
ಎಮ್ಮೆ ಕೆಚ್ಚಲು
23. ನೀರುಂಟು ಬಾವಿಯಲ್ಲ, ಜುಟ್ಟುಂಟು ಪೂಜಾರಿಯಲ್ಲ, ಮೂರು ಕಣ್ಣುಂಟು ಶಿವನಲ್ಲ
ತೆಂಗಿನಕಾಯಿ
24. ಒಂದೇ ಕುಪ್ಪಿಲಿ, ಎರಡು ತರಾ ತುಪ್ಪ !
ಮೊಟ್ಟೆ
25. ಒಬ್ಬಣ್ಣ ಇಳಿತಾನೆ ಒಬ್ಬಣ್ಣ ಹತ್ತುತ್ತಾನೆ
ರೊಟ್ಟಿ
26. ಹೊಕ್ಕುವಾಗ ಒಂದು ಹೊರಟಾಗ ನೂರು
ಶ್ಯಾವಿಗೆ
27. ನಿಂಗಕ್ಕ ನೀರಕ್ಕ, ಹಾಕುವವರುಂಟು ತೆಗೆಯುವವರಿಲ್ಲ, ಅದೇನಕ್ಕ ?
ಹಚ್ಚೆ
28. ಸಾಯೋವರೆಗೂ ಹೂವಿಲ್ಲ, ಹಣ್ಣು ಮಾತ್ರ ಬಿಡತ್ತೆ
ಹತ್ತಿಹಣ್ಣು
29. ಕಪ್ಪುಂಟು ಕಸ್ತೂರಿಯಲ್ಲ, ಬಿಳ್ಪುಂಟು ಸುಣ್ಣವಲ್ಲ, ನೀರುಂಟು ಬಾವಿಯಲ್ಲ, ರೆಕ್ಕೆಯುಂಟು ಪಕ್ಷಿಯಲ್ಲ.
ಕಣ್ಣು
30. ಅಟ್ಟದ ತುಂಬಾ ಹಗ್ಗ ಹಾಸೈತೆ, ಅದರ ಮೇಲೆ ಭೂತ ಕೂತವ್ನೆ
ಕುಂಬಳ ಕಾಯಿ