ಮೋಚಿ ಕಥೆ - ಭಾರತೀಪ್ರಿಯ॥ Mochi - Bharatheepriya॥ ಕನ್ನಡ ಚೈತ್ರ ೪॥

  Рет қаралды 26,426

BTV KANNADA CLASS

BTV KANNADA CLASS

Күн бұрын

Пікірлер: 24
@btvkannadaclass
@btvkannadaclass Жыл бұрын
*ಮೋಚಿ - ಭಾರತೀಪ್ರಿಯ* *ಆಶಯ:-* ಪ್ರಸ್ತುತ ಪಠ್ಯವನ್ನು ಭಾರತೀಪ್ರಿಯರವರ *'ರುದ್ರವೀಣೆ'* ಎಂಬ ಕಥಾ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. 'ಮೋಚಿ' ಕನ್ನಡ ಕಥನ ಕಣಜದಲ್ಲೊಂದು ಅಪರೂಪದ ತೆನೆ. ಮೌಲ್ಯಗಳು ಮತ್ತು ಆದರ್ಶಗಳು ಗರಿಗಟ್ಟುತ್ತಿದ್ದ ಕಾಲದ ಅಭಿವ್ಯಕ್ತಿ, ಪುನರುಜ್ಜಿವನದ ಅನೇಕ ಆಶಯಗಳಲ್ಲಿ ಉದಾರತೆ, ಕರುಣೆ, ಅನುಕಂಪ ಮೊದಲಾದ ಭಾವಗಳ ಅಭಿವ್ಯಕ್ತಿಯೂ ಒಂದು. ಸ್ವಾಭಿಮಾನ ಮತ್ತು ಆತ್ಮ ಗೌರವವನ್ನು ಉಳಿಸಿಕೊಂಡು ಬಾಳುವೆಯನ್ನು ಕಟ್ಟಬೇಕೆಂಬ ಸ್ವಾತಂತ್ರ್ಯ ಪೂರ್ವದ ಬದುಕಿನ ಆಶಯ ಈ ಕಥೆಯಲ್ಲಿ ಬಿಂಬಿತವಾಗಿದೆ. ಸಮಾಜದ ಅಂಚಿನಲ್ಲಿರುವ ಕೆಳವರ್ಗದ ಮೋಚಿಯೊಬ್ಬ ಶ್ರಮರಹಿತ ಬದುಕಿಗೆ ಕೇವಲ ಕರುಣೆಯಿಂದ ಬರುವ ಸಂಪತ್ತನ್ನು ನಿರಾಕರಿಸಿ ಬದುಕಿನ ಅರ್ಥವನ್ನು ಎತ್ತಿ ಹಿಡಿಯುವ ನಡಾವಳಿಯೊಂದನ್ನು ಪ್ರಕಟಿಸುತ್ತಾನೆ. ಹಣದ ಹಮ್ಮುಬಿಮ್ಮುಗಳೆಲ್ಲ ಆತ್ಮಗೌರವದ ಮುಂದೆ ಹೇಗೆ ಕರಗಿ ನೀರಾಗಿ ಬಿಡುತ್ತವೆಂಬ ಜಿಜ್ಞಾಸೆಯನ್ನು ಈ ಕಥೆ ಮಂಡಿಸುತ್ತದೆ. *ಕಥೆಯ ಸಾರಾಂಶ:-* ಮೋಚಿ ಎಂಬ ಚಪ್ಪಲಿ ಹೊಲಿಯುವ ವ್ಯಕ್ತಿ ಪ್ರಮಾಣಿಕವಾಗಿ ಸೇವೆಯನ್ನು ಮಾಡುತ್ತಿರುತ್ತಾನೆ. ಈ ಕಥೆಯಲ್ಲಿ ಮೋಚಿಯ ಹೆಸರು ರಾಚ ಒಂದು ದಿನ ದಾರಿಯಲ್ಲಿ ಕೆಲಸವಿಲ್ಲದೆ ಕುಳಿತು ತನ್ನ ಸಣ್ಣ ಹಾಗೆಗಳನ್ನು ಒಂದಕ್ಕೊಂದು ಬಡಿದು ತಾಳದಂತೆ ಕುಟ್ಟುತ್ತಿದ್ದನು, ಅಲ್ಲಿಗೆ ನಿರೂಪಕ ಶೂ ಪಾಲೀಶ್ ಮಾಡಿಸಲು ಅಗಮಿಸುತ್ತಾನೆ. ತನ್ನ ಕೆಲಸ ಆದ ಕೂಡಲೇ ಹೆಚ್ಚಿನ ಹಣವನ್ನು ಮೋಚಿಗೆ ನೀಡಿದ, ಆದರೆ ಮೋಚಿ ಅದನ್ನು ನಿರಾಕರಿಸಿದ, ತನ್ನಕೆಲಸಕ್ಕೆ ತಗಲುವ ಬೆಲೆಯನ್ನು ಅವರಿಂದ ಪಡೆದ ನಿರೂಪಕರಿಗೆ ಮೋಚಿಯ ಪ್ರಮಾಣಿಕತೆಯ ಬಗ್ಗೆ ಮೆಚ್ಚುಗೆಯಾಯಿತು. ಹೀಗೆ ಪ್ರತಿ ನಿತ್ಯ ಮೋಚಿ ತನ್ನ ಕಾಯಕ ನಿಷ್ಠೆ ಮೆರೆಯುತ್ತಿದ್ದನು. ನಿರೂಪಕರಿಗೆ ಅವನ ಮನೆಯ ಸ್ಥಿತಿಗತಿಯನ್ನು ಅರಿಯಲು ಮನಸ್ಸಾಗಿ ವಿಳಾಸವನ್ನು ಕೇಳಿದನು. ನಿರೂಪಕರು ಮೋಚಿಯ ಮನೆಯ ವಿಳಾಸವನ್ನು ಹುಡುಕಿಕೊಂಡು ಹೋದಾಗ ಕಾದಿತ್ತು. ಆಶ್ಚರ್ಯ, ಅರಕಲು ಗುಡಿಸಲು ಮನೆಯ ಮುಂದಿನ ಚರಂಡಿ, ಗುಡಿಸಲಿನ ಅವ್ಯವಸ್ಥೆ, ಮನೆಯ ಬಡತನ ಇವೆಲ್ಲವೂ ನಿರೂಪಕರಿಗೆ ಕಂಬನಿಯನ್ನು ಹರಿಸಿದವು. ಇಂತಹ ಪರಿಸ್ಥಿತಿಯಲ್ಲಿಯೂ ಮೋಚಿಯ ಪ್ರಾಮಾಣಿಕತೆಯನ್ನು ನೆನೆದು ಹೃದಯ ಹಿಂಡಿಬಿಟ್ಟಿತು. ಬಹು ದೂರದಲ್ಲೆಲ್ಲೋ ವಿಪ್ಲವವಾಗುತಿರುವಂತರ ಭೋದೆಯಾಗುತ್ತಿತ್ತು. ಅಂತಃಕರಣ ಕರಗಿತು, ಕೊನೆಗೆ ಒಳಗೊಂದು ಚಿತ್ರ ಹೊರಗೊಂದು ಚಿತ್ರ ಒಂದಕ್ಕೊಂದು ವಿರುದ್ಧ ತನ್ನ ಹೆಂಡತಿಯ ಮುಖವನ್ನು ನೋಡಿ ಮೆಲ್ಲನೇ ನುಡಿದ ಎಲ್ಲಾ ಅವನ ಲೀಲೆ..!
@KalammaBevinakatti
@KalammaBevinakatti Жыл бұрын
👏👏
@sudarshanasm9704
@sudarshanasm9704 Жыл бұрын
Supper explain ❤sir🎉 👏👏
@dahuddahudibrahim161
@dahuddahudibrahim161 6 ай бұрын
ಸರ್ ಧನ್ಯವಾದ ಗಳು
@LaxmiLaxmi-se2gs
@LaxmiLaxmi-se2gs 4 ай бұрын
Super Sir
@rameshsangamesh1267
@rameshsangamesh1267 Жыл бұрын
Super classs sir🔥🔥🔥🔥🔥🙏🙏🙏🙏🙏🙏🙏🙏🙏👍👍👍
@HoleyammaEliger
@HoleyammaEliger 4 ай бұрын
Sir 🙏🙏
@praveenpeddanavar4076
@praveenpeddanavar4076 4 ай бұрын
🙏🙏👌ಸರ್
@vasanthkumarHNvasantha-j2c
@vasanthkumarHNvasantha-j2c 5 ай бұрын
super sir 😍
@Amrutha.A-n4g
@Amrutha.A-n4g 6 ай бұрын
Thank you so much sir supar teaching 🎉🎉🎉🎉
@DivyaGS-y2q
@DivyaGS-y2q 5 ай бұрын
Super sir tq. ❤❤
@Mahiblog1413
@Mahiblog1413 7 ай бұрын
Thank you so much sir ❤❤
@shivumv711
@shivumv711 Жыл бұрын
ಸರ್ ಕಾಲ ನಿಲ್ಲುವುದಿಲ್ಲ, ತುತ್ತಿನ ಚೀಲ ಪಾಠ ಮಾಡಿ
@nikhita2255
@nikhita2255 Жыл бұрын
Thank you so much sir
@nikkiworldnikkiworld6551
@nikkiworldnikkiworld6551 Жыл бұрын
ಧನ್ಯವಾದಗಳು 🙏🏻
@devarajb2003
@devarajb2003 Жыл бұрын
ಸರ್ ಚೆನ್ನಾಗಿತ್ತು ಆದ್ರೆ ಸ್ಲೈಡ್ ಮೇಲೆ ಹಾಕಬೇಕಿತ್ತು . ಸರ್ ಹಾಗೆ ಇನ್ನೂ ಉಳಿದ NEP ಪಾಠಗಳನ್ನು ಮಾಡಿ.
@prashantpatil4783
@prashantpatil4783 Жыл бұрын
Yava college bro
@VandanaVandu-ku2gp
@VandanaVandu-ku2gp 6 ай бұрын
Thank you sir
@anupallavimanupallavim8057
@anupallavimanupallavim8057 7 ай бұрын
Sir kala nilluvudilla and thutthina chila nu video madi sir plz
@AnitaAnita-m3l
@AnitaAnita-m3l 5 ай бұрын
Tqs sir net lesson maadi sir
@anupallavimanupallavim8057
@anupallavimanupallavim8057 7 ай бұрын
Mabbininda mabbige nu video madi sir plz
@nageshhe2086
@nageshhe2086 Жыл бұрын
Sir plz telmi that lesson question and answer
@btvkannadaclass
@btvkannadaclass Жыл бұрын
೧.ಮೋಚಿ ಕಥೆಯಲ್ಲಿ ವ್ಯಕ್ತವಾಗುವ ರಾಚನ ನಿಸ್ವಾರ್ಥ ಬದುಕನ್ನು ಕುರಿತು ಬರೆಯಿರಿ?
@akshataKalal-q9h
@akshataKalal-q9h 5 ай бұрын
Thank you sir
黑天使只对C罗有感觉#short #angel #clown
00:39
Super Beauty team
Рет қаралды 36 МЛН
We Attempted The Impossible 😱
00:54
Topper Guild
Рет қаралды 56 МЛН
Cheerleader Transformation That Left Everyone Speechless! #shorts
00:27
Fabiosa Best Lifehacks
Рет қаралды 16 МЛН
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
黑天使只对C罗有感觉#short #angel #clown
00:39
Super Beauty team
Рет қаралды 36 МЛН