Рет қаралды 388
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು... ಸಾಧನೆಯ ಶಿಖರವೇರಿದ ಪುಟ್ಟ ಬಾಲಕಿ..!!
ಕೊಪ್ಪಳ 05 ಸೆ. ಜಿಲ್ಲೆಯ ಮುನಿರಾಬಾದ್ ಗ್ರಾಮದ ಒಂದು ಚಿಕ್ಕ ಬಡಬಾಲಕಿಯ ಕೂಗು,
ಅಪಾರ ಬದ್ಧತೆ, ಸಾಧನೆಯ ತವಕ ಮತ್ತು ಶ್ರದ್ಧೆಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಪಾಠವನ್ನು ಹೊತ್ತು ತರುತ್ತಿದ್ದಾಳೆ.
ಪುರಾಣಗಳಲ್ಲಿ ನಚಿಕೇತ ಎಂಬ ಬಾಲಕಿ ಕೇವಲ ಐದು ವರ್ಷ ವಯಸ್ಸಿನಲ್ಲಿಯೇ ಬಹಳಷ್ಟು ಹೆಣ್ಣಿನ ಒಂದು ಅರ್ಥ,ಪ್ರಕೃತಿ ಬಗ್ಗೆ ಒಲವು ಕರಾರುವಾಕ್ಕಾಗಿ ಪಠಿಸುತ್ತಿದ್ದ ಮತ್ತು ತಂದೆಯ ಆಣತಿಯ ಮೇರೆಗೆ ಸಶರೀರನಾಗಿ ಕೆಲ ದಿನಗಳ ಕಾಲ ಅಂಜದೆ ಅಳುಕದೇ, ಹೆಣ್ಣು ಭ್ರೂಣ ಹತ್ಯೆ ಸಂವಾದ ನುಡಿ ಮಾಡಿದ ಐದರ ಪುಟ್ಟ ಬಾಲಕಿ ನಚಿಕೇತನ ಧೈರ್ಯ ಸಾಹಸ ಮತ್ತು ಜ್ಞಾನ,ಬದುಕಿನ ಅಸ್ತಿತ್ವದ ಕುರಿತು ಕೇವಲ ಐದು ವರ್ಷ ವಯಸ್ಸಿನಲ್ಲಿ ಜ್ಞಾನವನ್ನು ಪಡೆದುಕೊಂಡು ಎಂಬುದನ್ನು ಪುರಣ,ಪುಸ್ತಕಗಳಲ್ಲಿ ಓದಿದಾಗಲೂ,ಕೇಳಿದಾಗಲೂ ಸಂದೇಹ ವ್ಯಕ್ತಪಡಿಸುವ ನಮಗೆ ನಾವು ಮಾಡುತ್ತಿರುವ ಕೆಲಸದ ಕುರಿತಾದ ಅಸೀಮ ಶ್ರದ್ಧೆ, ಆತ್ಮವಿಶ್ವಾಸ ಮತ್ತು ದೃಢ ಮನಸ್ಕತೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈ ಪುಟ್ಟ ಬಾಲಕಿ ಎ ಫೌಜಿಯಾ ಸಾಧಕರ ಬದುಕಿನ ಪುಟಗಳಿಂದ ಅರಿಯಬಹುದು.
ಈ ಹಿಂದೆ ಒಂದು ಘಟನೆ*: ರಾಜ್ಯ ದಂತಹ ಕೊವಿಡ ಸಂದರ್ಭದಲ್ಲಿ ಯಾವುದೇ ಹಬ್ಬ ಹರಿದಿನಗಳಿಗೆ ಅವಕಾಶವಿರಲಿಲ್ಲ ಆದರೆ ಲಾಕಡೌನ್ ನಂತರ ಮೊಟ್ಟಮೊದಲ ಬಾರಿಗೆ 2021 ರಲ್ಲಿ ಅಂಬೇಡ್ಕರರ ಜಯಂತಿ ಎಂದು ಹೋರಾಟಗಾರರ, ಮುಖಂಡರ, ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ವೇದಿಕೆಯನ್ನು ಏರಿ ಅಂಬೇಡ್ಕರರ ಕ್ರಾಂತಿ ಗೀತೆಗಳು ಹಾಡುವ ಮೂಲಕ ಜನರ ಪ್ರೀತಿ ವಿಶ್ವಾಸ ಗೆಲ್ಲುವ ಮೂಲಕ ಬೆಳೆದ 5ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಎ. ಫೌಜಿಯ, ಇವರು 24.01.2024ರ ಹೆಣ್ಣು ಮಕ್ಕಳ ದಿನಾಚರಣೆಯ ಒಂದು ತುಣುಕು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿದೆ.
ಹೆಣ್ಣು ಮಗುವಿನ ಬಗ್ಗೆ ಬಹಳ ಚೆನ್ನಾಗಿ ತಿಳಿಸಿಕೊಟ್ಟಿರುವ ಈ ಬಾಲಕಿ, ಹೆಣ್ಣು ಮಗುವನ್ನುಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ, ಹೆಣ್ಣು ಮತ್ತು ಗಂಡು ಮಗುವಿನ ನಡುವೆ ತಾರತಮ್ಯ ಉಳಿಸಿ ಬೆಳೆಸಿ ಗೌರವಿಸಿ, ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ, ಹೆಣ್ಣು ಮತ್ತು ಗಂಡು ಮಗುವಿನ ನಡುವೆ ತಾರತಮ್ಯ ಬೇಡ, ಕತ್ತಲಲ್ಲಿ ಬೆಳಕು ಎಷ್ಟು ಮುಖ್ಯವೋ ಬದುಕಿನಲ್ಲಿ ಹೆಣ್ಣು ಅಷ್ಟೇ ಮುಖ್ಯ, ಮಗಳಿಲ್ಲದೆ ಮುಂದಿನ ಪೀಳಿಗೆ ಇಲ್ಲ,ಹೆಣ್ಣೆಂದರೆ ಪ್ರಕೃತಿ ಹೆಣ್ಣಂದ್ರೆ ಸಂಸ್ಕೃತಿ, ಪ್ರಕೃತಿಯನ್ನು ಉಳಿಸೋಣ ಸಂಸ್ಕೃತಿಯನ್ನು ಬೆಳೆಸೋಣ ಎಂದು ವಿಡಿಯೋ ಮಾಡಿದ್ದನ್ನು ಸಮಾಜದ ಜಾಲತಾಣದಲ್ಲಿ ತನ್ನದೇ ಆದ ಒಂದು ಗುರುತನ್ನು ನೀಡಿದ್ದಾಳೆ.
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತನ್ನೈ ಶ್ರೀ ಗುರುವೇ ನಮಃ
ನಮಗೆಲ್ಲ ಮೇಲಿನ ಶ್ಲೋಕ ನೆನಪಿದೆ ಆದರೆ ಆಳವಾಗಿ ನೋಡಿದಾಗ ಗುರು ಬ್ರಹ್ಮ.. ಬ್ರಹ್ಮ ಎಂದರೆ ಸೃಷ್ಟಿಕರ್ತ, ಗುರು ವಿಷ್ಣು ಅಂದರೆ ಸ್ಥಿತಿ ಕರ್ತ, ಗುರುದೇವೋ ಮಹೇಶ್ವರ ಎಂದರೆ ಲಯ ಕರ್ತನಾದ ಮಹಾದೇವ ಮತ್ತು ಗುರು ಸಾಕ್ಷಾತ್ ಆ ಪರ ಬ್ರಹ್ಮನೇ ಹೌದು ಎಂಬ ಅರ್ಥವನ್ನು ಮೇಲಿನ ಶ್ಲೋಕ ಹೊಂದಿದ್ದರು ಅ೦ದರೆ ಗುರು ನಮ್ಮಲ್ಲಿ ಈ ಮೂರು ಕೆಲಸಗಳನ್ನು ಮಾಡುತ್ತಾನೆ.
ಗುರುವಿನ ಅರಿವಿಗೆ ನಿಲುಕದ ಯಾವುದೇ ವಸ್ತುವಿಲ್ಲ. ಈ ಅಖಂಡ ಬ್ರಹ್ಮಾಂಡ ಮಂಡಲದ ಪ್ರತಿಯೊಂದು ವ್ಯಾಪ್ತಿಯು, ಪ್ರತಿಯೊಂದು ಚರಾಚರ ಜೀವಿಗಳು ಗುರುವಿನ ದೃಷ್ಟಿಯಿಂದ ಹೊರತಲ್ಲ. ಎಲ್ಲೆಲ್ಲೂ ಅಜ್ಞಾನದ ಕತ್ತಲೆ ತುಂಬಿದಾಗ ಜ್ಞಾನದ ಸ್ಪಟಿಕದ ದೀಪಜ್ಯೋತಿಯನ್ನು ಹಿಡಿದು ಬಂದಾತನೆ ಗುರು ಎಂದು ಶ್ಲೋಕ ಮುಂದುವರೆಯುತ್ತದೆ. ಹೀಗೆ ಗುರುವಿನ ಮಹಿಮೆಯನ್ನ ನಮ್ಮ ಹಿರಿಯರು ಹಾಡಿ ಹೊಗಳಿದ್ದಾರೆ.
ಓರ್ವ ವೈದ್ಯ ತಪ್ಪು ಮಾಡಿದರೆ ಒಬ್ಬ ರೋಗಿ ತನ್ನ ಜೀವವನ್ನ ಕಳೆದುಕೊಳ್ಳಬಹುದು. ಒಬ್ಬ ಇಂಜಿನಿಯರ್ ತಪ್ಪು ಮಾಡಿದರೆ ಹಲವಾರು ಜನ ದಾರಿ ತಪ್ಪಬಹುದು. ಓರ್ವ ಶಿಕ್ಷಕ ತನ್ನ ಮೌಲ್ಯಗಳನ್ನು ಬಿಟ್ಟುಕೊಟ್ಟು ನಡೆದರೆ ಒಂದಿಡಿ ಜನಾಂಗವೇ ಹಾದಿ ತಪ್ಪಬಹುದು. ಶಿಕ್ಷಕನ ಮೇಲೆ ಅತ್ಯಂತ ಹೆಚ್ಚಿನ ಜವಾಬ್ದಾರಿ ಇದೆ. ಹಾಗೂ ಆ ಜವಾಬ್ದಾರಿಯನ್ನು ಹೊರುವ ಗಟ್ಟಿತನವು ಆತನಲ್ಲಿ ಇರುತ್ತದೆ
ಅರಿತವ, ಅವುಗಳ ಒಳಿತು ಕೆಡುಕುಗಳನ್ನ ತಿಳಿದವ, ಹಂಸಕ್ಷಿರ ನ್ಯಾಯದಂತೆ ಒಳ್ಳೆಯದನ್ನು ಮಾತ್ರ ತೆಗೆದುಕೊಂಡು ಕೆಟ್ಟದ್ದನ್ನು ತೆಗೆದುಹಾಕುವವ, ಪ್ರೀತಿಯಿಂದ ತಿಳಿ ಹೇಳುವ, ಸಮಯ ಬಂದರೆ ತಿದ್ದಿ ಬುದ್ದಿ ಹೇಳುವ ತಂದೆ ತಾಯಿಯರ ನಂತರದ ಸ್ಥಾನದಲ್ಲಿರುವ ವ್ಯಕ್ತಿ ಗುರು. ಗು ಎಂದರೆ ಕತ್ತಲು, ರು ಅಂದರೆ ಕಳೆಯುವವ. ಹೀಗೆ ನಮ್ಮ ಬದುಕಿನ ಕತ್ತಲು ಕಳೆಯುವ ಏಕೈಕ ವ್ಯಕ್ತಿ ಗುರು.
ಅಂದರೆ ಶ್ರೀ ಗುರುವನ್ನು ನೆನೆದರೆ ವಿಪತ್ತು ಬಾರದು, ಗುರುವನ್ನು ನೋಡಿದರೆ ಭವಗಳು ತೊಲಗುವವು, ಪಾದದಲ್ಲಿ ಶರಣಾದರೆ ಸುಖವಾಗುವುದು ಎಂಬ ಎ. ಫೌಜಿಯ ನುಡಿಯಂತೆ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಅರಿವನ್ನು ಹೊಂದಿ ಗುರುಗಳನ್ನು ಗೌರವಿಸುವ ಈ ದಿನ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳ ಕೋರುತ್ತಾಳೆ.
ಇಂತಹ ಗ್ರಾಮೀಣ ಭಾಗದ ಮಕ್ಕಳನ್ನು ಜಿಲ್ಲಾಡಳಿತ ಮತ್ತು ವಿಷೇಶವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಗುರುತಿಸಿ ಇಂತಹ ಪ್ರತಿಭಾವಂತ ಮಕ್ಕಳಿಗೆ ಆದಷ್ಟು ಅವಕಾಶಗಳನ್ನು ಕಲ್ಪಿಸಿ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವಂತಹ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡಬೇಕಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿಧಿಗಳು, ಸದಸ್ಯರು, ಮುಖಂಡರು, ಶಿಕ್ಷಕರು,ಜಿಲ್ಲಾ ಅಂಗವಿಕಲ ಚೇತನರು ಮತ್ತು ವಿಶೇಷವಾಗಿ ಹೆಣ್ಣು ಸಬಲೀಕರಣ ಸಂಘ- ಸಂಸ್ಥೆಗಳು ಕೋರಿಕೆ.