Рет қаралды 38,478
ಮನೆ ಅಂದರೆ ಕೇವಲ building ಅಲ್ಲ, ಇದು 'ಕಲ್ಪವೃಕ್ಷ'. ಡಾ:ನಟರಾಜ್-ಭಾರ್ಗವಿರವರ ಕನಸಿನ ಮನೆಯ Home Tour
#artistic #beautiful #dreamhouse
ಡಾ:ಎಸ್.ಎನ್.ನಟರಾಜ್ ಮತ್ತು ಶ್ರೀಮತಿ ಭಾರ್ಗವಿ ನಟರಾಜ್ ರವರು ತಮ್ಮ ಕನಸಿನ ಮನೆ 'ಕಲ್ಪವೃಕ್ಷ'ವನ್ನು ಜೀವಂತಿಕೆ ತುಂಬಿರುವ ಸಂಗ್ರಹಯೋಗ್ಯವಾದ ಪುರಾತನ ಕಲಾಕೃತಿಗಳಿಂದ ಅಲಂಕರಿಸಿದ್ದಾರೆ. ಇಷ್ಟೇ ಅಲ್ಲದೆ ಪ್ರತಿನಿತ್ಯ ಉಪಯೋಗಿಸುವ ಪಾತ್ರೆ-ಪಡಗ, ಪರಿಕರಗಳೆಲ್ಲವೂ ತಾಮ್ರ, ಹಿತ್ತಾಳೆ ಮತ್ತು ಕಂಚಿನ ವಸ್ತುಗಳೇ ಆಗಿದ್ದು, ಸಾಂಪ್ರದಾಯಿಕ ತೊಟ್ಟಿಮನೆ ಶೈಲಿಯ ಸುಂದರವಾದ ಮನೆಯನ್ನು ಮತ್ತೂ ಸುಂದರವಾಗಿಸಿವೆ.
ನಟರಾಜ್ ದಂಪತಿಗಳ ಪುತ್ರ ನಿಧೀಶ್ ಸಹ ಮನೆಯನ್ನು ಸುಂದರವಾಗಿಸುವ ಕಾಯಕದಲ್ಲಿ ಭಾಗಿಯಾಗಿದ್ದು, ಮನೆಯ ಪ್ರತಿಯೊಂದು ಭಾಗವೂ ಕಣ್ಮನಗಳನ್ನು ಸೂಜಿಗಲ್ಲಿನಂತೆ ಸೆಳೆಯುವುದಲ್ಲದೆ ನಟರಾಜ್ ದಂಪತಿಗಳ ಕನಸಿನ ಮನೆ 'ಕಲ್ಪವೃಕ್ಷ'ವನ್ನು ನಾವು ಸಹ ಮನಸಾರೆ ಇಷ್ಟಪಡುವಂತೆ ಮಾಡುತ್ತವೆ. ಈ ವೀಡಿಯೊ ಸರಣಿಯನ್ನು ನೋಡಿದ ನೀವು ಸಹ ಈ ಮಾತನ್ನು ಸಮ್ಮತಿಸುವಿರೆಂಬುದು ನಮ್ಮ ದೃಢವಾದ ನಂಬಿಕೆ.