No video

ಮನೆತನಕ್ಕೆ ದಾರಿದ್ರ್ಯಬರಲು ಶಾಪ ಇರುತ್ತೆ ಇಷ್ಟು ಮಾಡಿ ಕಳೆದುಕೊಳ್ಳಿ ಒಂದು ಮುಷ್ಟಿ ಅವಲಕ್ಕಿ ಸುಧಾಮನ ಕಥೆ ಇಷ್ಟೇ

  Рет қаралды 42,279

Veena Joshi

Veena Joshi

Күн бұрын

#ಸುಧಾಮನ_ಹಾಡು
ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ | ಸುತಗೆ
ವಂದನೆಯ ಮಾಡಿದಳು ||
ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ ಸ- |
ದ್ಗತಿಯಾಗಲೆನುತ ಪೇಳಿದಳು || ೧ ||
ಸುಧಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ |
ಹೊದಿಯಲಿಕ್ಕಿಲ್ಲ ಆಶನವಿಲ್ಲ ||
ಗದಗದ ನಡುಗುತ ಮಧುರ ಮಾತಾಡುತ |
ಸದನದೊಳಿರುತಿದ್ದನಾಗ || ೨ ||
ಪ್ರಾತಃ ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ | ನಾಥನ
ಧ್ಯಾನ ಮಾಡುತಲಿ ||
ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ | ಗ್ರಾಸ
ತರುವನು ಮುಷ್ಟಿ ತುಂಬ || ೩ ||
ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕೆಂದು | ಹಿತದಿಂದ
ಪಾಕ ಮಾಡುವಳು ||
ಅತಿ ಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ | ಮತಿವಂತಿ
ಉಳಿದದ್ದುಂಬುವಳು || ೪ ||
ಹಸಿವೆ ತೃಷೆಗಳಿಂದ ಅತಿಕ್ಲೇಶವಾಗಿದ್ದು | ಪತಿಕೂಡೆ
ಮಾತನಾಡಿದಳು ||
ಗತಿಯೇನು ನಮಗಿನ್ನು ಹಿತದವರ‍್ಯಾರಿಲ್ಲ ಸ- |
ದ್ಗತಿಯೇನೆನುತ ಪೇಳಿದಳು || ೫ ||
ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ | ಒಡನೆ
ಆಡಿದ ಗೆಳೆಯರಿಲ್ಲೆ ||
ಕರೆದು ಕೂಡಿಸಿಕೊಂಡು ಬಿರುಸು ಮಾತ್ಹೆಳುವ | ಹಿರಿಯರು
ದಾರಿಲ್ಲೆ ನಿಮಗೆ || ೬ ||
ಚಿಕ್ಕಂದಿಲ್ಲೋದಿಲ್ಲೆ ಹೆತ್ತವರ‍್ಹೆಳಿಲ್ಲೆ | ಉತ್ತಮ ಗುರುಗೋಳಿಲ್ಲೆನು
||
ಹೊತ್ತು ವೇಳೆಗಾಗೋ ಮಿತ್ರರು ಯಾರಿಲ್ಲೆ ಮತ್ತೆ ಕೇಳಿದಳು
ಕ್ಲೇಶದಲಿ || ೭ ||
ಮಡದಿ ಮಾತನು ಕೇಳಿ ಮನದಲಿ ಯೋಚಿಸಿ |
ಹುಡುಗನಾಗಿರಲಿಕ್ಕೆ ಹೋಗಿ ||
ಗುರುಕುಲ ವಾಸದಲಿ ಹರಿ ನಾವು ಓದಿದ್ದು | ಹರಿ ಹೊರ್ತು
ಮತ್ತೊಬ್ಬರಿಲ್ಲಾ || ೮ ||
ಇನ್ನೊಬ್ಬರೇತಕೆ ಅನ್ಯರಪೇಕ್ಷೇಕೆ | ಮನ್ನಿಸಿ ಹೋಗಿ
ಬರ‍್ರೆಂದಳು ||
ಇನ್ನೇನು ಕೊಡತಿಯೆ ಹರಿ ಮುಂದೆ ಇಡಲಿಕ್ಕೆ | ಚೆನ್ನಾಗಿ
ಕೇಳಿದನಾಗ || ೯ ||
ಗಾಬರಿಯಾದಳು ಸಾಗಿ ತಾ ನಡೆದಳು | ಬೇಗ ತಂದಳು
ಅವಲಕ್ಕಿ ||
ಬಾಗಿ ವಸ್ತ್ರದೊಳು ಬೇಗ ಕಟ್ಟಿಕೊಟ್ಟು | ಹೋಗಿ ಬರ‍್ರೆನುತ
ಪೇಳಿದಳು || ೧೦ ||
ಅಂಗಳವನು ಬಿಟ್ಟು ಮುಂದಕೆ ಬಂದನು | ಹಂಗ
ಹಾರುವುದು ಎಡಕೆ ||
ಮಂಗಳವಾಗುವುದು ರಂಗನ ದರುಶನ |
ಸಂದೇಹವಿಲ್ಲದಾಗುವುದು || ೧೧ ||
ಬಾಗಿಲವನು ಬಿಟ್ಟು ಸಾಗಿ ಮುಂದಕೆ ಬರಲು | ಕಾಗಿ
ಹಾರ‍್ಹೋದವು ಬಲಕೆ ||
ಆಗುವುದು ನಮಗಿನ್ನು ಆಗುವುದು ಶುಭ ಚಿನ್ಹ |
ಆಗುವುದು ಹರಿ ಕೃಪೆಯಿಂದ || ೧೨ ||
ಹೀಗೆಂದ ಬ್ರಾಹ್ಮಣ ಮುಂದಕೆ ನಡೆದನು | ಕಂಡನು
ಕಮಲ ಪುಷ್ಪಗಳ ||
ರಂಗನ ಹೆಂಡರಿಗೆ ಹೆರಳಿಗೆ ಬೇಕೆಂದು |
ತೆಗೆದುಕೊಂಡನು ಕಮಲ ಪುಷ್ಪಗಳ || ೧೩ ||
ಹರಿಯುವ ಜಲವೆಲ್ಲ ಹರಿಯಭಿಷೇಕವೆಂ- | ದ್ಹರುಷದಲಿ
ತುಂಬಿಕೊಂಡು ||
ಕರದಲ್ಲಿ ಹಿಡಕೊಂಡು ಪುರದ ಬಾಗಿಲ ಮುಂದೆ | ಹರಿ
ಹ್ಯಾಗೆ ದೊರಕುವ ನೆಂದ || ೧೪ ||
ನಿಂತನು ಬ್ರಾಹ್ಮಣನ ಅನಂತ ರೂಪದಿ ಧ್ಯಾನ | ಅಂತ
ರಂಗದಲಿ ಮಾಡುತಲಿ ||
ಸಂತೋಷದಿಂದಲಿ ಧರಿಸಿದ ದಶರೂಪ- |ದಿಂದ
ಬಂದೆನ್ನ ಕಾಯೆಂದ || ೧೫ ||
ಹರಕು ವಸ್ತ್ರವನುಟ್ಟು ಹರಿ ಧ್ಯಾನ ಮಾಡುವ | ವಿಪ್ರನ
ಕಂಡು ಚಾರಕರು ||
ಬರಬೇಡಿರೊಳಗೆ ಹಿರಿಯರಪ್ಪಣೆಯಿಲ್ಲ | ತಿರುಗಿ ಹೋಗೆನುತ
ಹೇಳಿದರು || ೧೬ ||
ಅಂದ ಮಾತನು ಕೇಳಿ ಅಂಜಿದ ಬ್ರಾಹ್ಮಣ |
ಇಂದಿರಾರಮಣಗ್ಹೇಳೆಂದ ||
ಹೆಸರು ಸುಧಾಮನಂತೆ ಹಸಿದು ಬಂದಾರೆಂದು |
ವಸುದೇವ ತನಯಗ್ಹೇಳಿದರು || ೧೭ ||
ಕೇಳಿದ ಹರಿಯೆದ್ದು ಬಹಳ ಹರುಷದಿಂದ | ಬೇಗನೆ
ಕರೆತನ್ನಿರವನ ||
ಹೋಗು ಹೋಗೆಂದರೆ ಸಾಗಿ ಮುಂದಕೆ ಬರಲು | ಬಾಗಿಲಿಗೆ
ಬಂದ ಸುಧಾಮ || ೧೮ ||
ಬಂದ ಭಕ್ತನ ನೋಡಿ ಆನಂದದಿಂದೆದ್ದು | ವಂದಿಸಿ
ಆಸನವ ಹಾಕಿದರು ||
ಚಂದದಿಂದಲಿ ಕರವ ಹಿಡಿದು ಮಾತಾಡುತ | ಬಂದ
ಕಾರಣವ ಕೇಳಿದರು || ೧೯ ||
ಮಂದಗಮನೆ ಸಹಿತ ತಂದ ಉದಕದಿಂದ |
ಚಂದದಿಂದಲಿ ಪಾದ ತೊಳೆದು ||
ಗಂಧ ಕೇಶರ ಹಚ್ಚಿ ಚೆಂದ ಚಾಮರದಿಂದ | ಅಂದದಿ
ಗಾಳಿ ಬೀಸಿದರು || ೨೦ ||
ಹಸಿದು ಬಂದಾರೆಂದು ಹಸಿವೆಗೆ ತಕ್ಕಂಥ | ಹಸನಾದ
ಹಣ್ಣು ಸಕ್ಕರೆಯು ||
ಕುಸುಮ ನಾಭನು ತಾನು ಪನ್ನೀರು ತಂದೀಡೆ | ಉಂಡು
ಕೈತೊಳೆದ ಸುಧಾಮ || ೨೧ ||
ಮಂದರಧರಗಿನ್ನು ಸುಂದರ ಸತಿಯರು | ತಂದರು ತಬಕ
ವಿಳ್ಯವನು ||
ಇಂದಿರೆರಮಣನು ಬಂದ ಸುಧಾಮನು | ಚಂದದಿ
ಮೆಲೆದರು ವಿಳ್ಯವನು || ೨೨ ||
ಶ್ರಮ ಬಹಳವಾಗಿದೆ ಶ್ರಮಿಸಿಕೊಳ್ಳಿರೆಂದು | ಸೆಳೆ
ಮಂಚ ತಂದ್ಹಾಕಿದರು ||
ಶಾಲು ಸಕಲಾತಿಯು ಮೇಲಾದ ಹಾಸಿಗೆ | ಮೇಲೆ ಮಲಗಿದನು
ಸುಧಾಮ || ೨೩ ||
ಅಂದಿನ ರಾತ್ರಿಯಲಿ ಮಂದಗಮನೇಯರ ಬಿಟ್ಟು | ಬಂದು
ಮಲಗಿದನು ಶ್ರೀಹರಿಯು ||
ಹಿಂದಿನ ವೃತ್ತಾಂತ ಒಂದೊಂದು ಸ್ಮರಿಸುತ | ಆನಂದದಿ
ಹರಿಯು ಸುಧಾಮ || ೨೪ ||
ಅಂದಿನ ಸ್ನೇಹವು ಇಂದೇಕೆ ನೆನಪಾಯ್ತು | ಬಂದೀರಿ
ಬಹುದಿನಕೆಂದ ||
ಹೆಂಡತಿ ಮಕ್ಕಳು ಇಹರೇನು ನಿಮಗೆಂದು | ಇಂದಿರೆ ರಮಣ
ಕೇಳಿದನು || ೨೫ ||
ಹೆಂಡತಿ ಕಳುಹಿದಳು ರಂಗನ ದರುಷನ | ಕೊಂಡು
ಬಾರೆನುತ ಪೇಳಿದಳು ||
ತಂದದ್ದು ಕೊಡಲಿಕ್ಕೆ ಸಂದೇಹವೇತಕ್ಕೆ | ತಂಡುಲ ಹಿಡಿದು
ಜಗ್ಗಿದನು || ೨೬ ||
ಮುಷ್ಟಿತುಂಬವಲಕ್ಕಿ ಮುಕ್ಕಿದ ಹರಿ ಬೇಗ | ನಕ್ಕರು
ಸತಿಯರೆಲ್ಲ ||
ಇಷ್ಟೇ ಸಾಕು ಎಂದು ಗಟ್ಯಾಗಿ ಕೈ ಹಿಡಿಯೆ | ಕೊಟ್ಟನು
ಭಕ್ತನಿಗೆ ಐಶ್ವರ್ಯ || ೨೭ ||
ಹದಿನಾರು ಸಾವಿರ ಚದುರೆಯರ ಕರೆಸಿದ | ಕೊಡಿಸಿದೆಲ್ಲರಿಗೆ
ತಂಡುಲವ ||
ಉಳಿಸಿದ ಅವಲಕ್ಕಿ ಉಣಲಿಕ್ಕೆ ಮಾರ್ಗಕ್ಕೆ | ಬೇಕೆಂದು ಬಿಗಿದು
ಕಟ್ಟಿದರು || ೨೮ ||
ರನ್ನದ ಬಾಗಿಲಿಗೆ ಚಿನ್ನದ ಚೌಕಟ್ಟು | ಹೊನ್ನ
ಹೊಸ್ತಲವ ನಿರ್ಮಿಸಿದ ||
ರನ್ನ ಮಾಣಿಕ ಬಿಗಿದ ತೊಲಿ ಕಂಬ ಗಿಳಿಬೋದು |
ಪನ್ನಗಶಯನ ನಿರ್ಮಿಸಿದ || ೨೯ ||
ಇರಿರಿ ನಾಲ್ಕುದಿವಸ ತ್ವರೆ ಯಾಕೆ ಮಾಡುವಿರಿ | ಇರಲಿಕ್ಕೆ
ಬಾರದೆಯೆಂದಾ ||
ನೆರೆ ಹೊರೆ ಯಾರಿಲ್ಲ ತರುಣಿಯೊಬ್ಬಳಿಹಳು | ಇರಲಿ ನಾ ಹೇಗೆ
ಪೇಳೆಂದ || ೩೦ ||
ಪಾದಕೆ ಎರಗಿ ತಾ ಸಾಗಿ ಮುಂದಕೆ ಬಂದ | ಬಾಗಿಲಿಗೆ
ಬಂದ ಸುಧಾಮ ||
ಹೋಗಿರಿ ಹಿಂದಕೆ ಹೋಗಿ ಬರುತೇನೆನಲು | ಬಾಗಿ ಕೈ ಮುಗಿದ
ಶ್ರೀಹರಿಯು || ೩೧ ||
ಮುಂದಕೆ ಬಂದನು ಇಂದೇನು ಕೊಡಲಿಲ್ಲ | ಹೆಂಡತಿಗೆ
ಹೇಳಲೇನೆಂದ ||
ನಿಂತನು ಒಣಿಯಲಿ ಮಂದಿರ ಸಿಗಲಿಲ್ಲ | ಹೆಂಡತಿಯ ಕಂಡ
ಸುಧಾಮ || ೩೨ ||
ಮಂದಿರವನ್ನೆಲ್ಲ ಕಂಡನು ಐಶ್ವರ್ಯ |
ಚಂದದಿಂದಾಭರಣ ಕಂಡ ||
ಇಂದಿರಾಪತಿಯನ್ನು ಕಂಡು ಬಂದುದರಿಂದ | ಬಂದಿತು
ಸಕಲ ಸಂಪತ್ತು || ೩೩ ||
ರವಿವಾರ ಹಾಡಿದರೆ ರಾಜಕಾರ್ಯವಾಗುವುದು | ಬಂಜೆಗೆ
ಮಕ್ಕಳಾಗುವವು ||
ಬರಡೆಮ್ಮೆ ಕರೆಯೋದು ಬಡತನ ಹಿಂಗುವುದು |
ಗುರುವಾರ ಹಾಡಿದವರಿಗೆ || ೩೪ ||
ಶ್ರೀನಿವಾಸನ ಧ್ಯಾನ ಮೌನದಿಂದಲಿ ಮಾಡಿ | ನಾನಾ
ಸಂಪತ್ತು ಪಡೆದರು ||
ಅದರ ವಿಷಯ ತಿಳಿದು ಗತಿ ಮೋಕ್ಷ ಇರಲೆಂದು | ಶ್ರೀ ಹರಿ
ಕೊಡು ದೇವ ಸಿರಿಯ || ೩೫ ||
ಇದು ಭಾಗವತವೆನ್ನಿ ಇದು ಭಾಗವತವೆನ್ನಿ | ಇದು
ಭಾಗವತಕೆ ಕೀಲಗಳು |
ಇದಕೆ ಪ್ರಿಯನು ನಮ್ಮ ಪುರಂದರವಿಠ್ಠಲ | ಇದರಿಂದ
ಮುಕ್ತಿ ಕೊಡುವನು || ೩೬ ||

Пікірлер: 348
@kavithamanu797
@kavithamanu797 5 ай бұрын
ಅಮ್ಮ ರಾಘವೇಂದ್ರ ಸ್ವಾಮಿಗಳ ಪರಿಮಳ ಗ್ರಂಥದ ಬಗ್ಗೆ ಹೇಳಿಕೊಡಿ
@pravenikumari4455
@pravenikumari4455 4 ай бұрын
Parimala grantha you tube channel nodi sis
@vijayasg3810
@vijayasg3810 2 ай бұрын
ಮೇ ಮಾಡಿ,ಸುದಾಮನ ಕತೆ ಕೇಳಿ ಕಣ್ಣು ತುಂಬಿ ಬಂತು ದನ್ಯವಾದಗಳು, ನಮಸ್ಕಾರಗಳು,
@VeenaJoshi
@VeenaJoshi 2 күн бұрын
Thanks to all
@wv3217
@wv3217 5 ай бұрын
ವೀಣಾ ಅಮ್ಮ ಕಥೆ ತುಂಬಾ ಚೆನ್ನಾಗಿತ್ತು .. ಗೆಳೆತನ ಅಂತ ಅಂದ್ರೆ ನೆನಪಾಗೋದೇ ದ ಸುಧಾಮ ಕೃಷ್ಣರ ಗೆಳೆತನ ..ಚಿಕ್ಕಂದಿನಿಂದ ಕೇಳಿ ಪಟ್ಟಿದ್ದು ಮತ್ತೊಮ್ಮೆ ನಿಮ್ಮಿಂದ ತಿಳಿದುಕೊಂಡು ಮನಸ್ಸಿಗೆ ತುಂಬಾ ಸಂತೋಷವಾಯಿತು🙏🏻🙏🏻
@user-ui3br4vt5j
@user-ui3br4vt5j 5 ай бұрын
ನಮಸ್ತೆ ಅಮ್ಮ ಉತ್ತರದ ಕಡೆ ಬಾಗಲಿದ್ದವರು ಏನು ಮಾಡಬೇಕು ಎಂದು ತಿಳಿಸಿ ದಯವಿಟ್ಟು. ❤️🙏🏻🙏🏻
@bettadammagaanalahari6421
@bettadammagaanalahari6421 5 ай бұрын
ನಿಮ್ಮ ಬಾಯಿಂದ ಕಥೆಗಳು ಕೇಳೋದೇ ಖುಷಿ ಅಮ್ಮಾ
@mangalanaik4199
@mangalanaik4199 5 ай бұрын
ಪ್ರತಿದಿನ ಹರಿಸೇವೆ ಮಾಡುತ್ತಾ ಪಾಮರರ ಅಭ್ಯುದಯಕ್ಕೆ ಶ್ರಮಿಸುತ್ತಿರುವ ನಿಮಗೆ ಧನ್ಯವಾದ ತಾಯಿ
@prathapsr6896
@prathapsr6896 5 ай бұрын
Amma ಭೂ ವರಾಹ ಸ್ವಾಮಿ ashothra ಹೇಳಿದರೆ ಮನೆ ಕೊಂಡುಕೊಳ್ಳಬಹುದು ಅಮ್ಮ
@premaramkrishnapr212
@premaramkrishnapr212 Ай бұрын
ಕಥೆ ತುಂಬಾ ಚನ್ನಾಗಿ ಹೇಳಿದಿರ ಧನ್ಯವಾದಗಳು 🙏
@shobhagowda8410
@shobhagowda8410 5 ай бұрын
ಕಥೆ ತುಂಬಾ ಚನ್ನಾಗಿದೆ ಅಮ್ಮ
@shashikalashashi6207
@shashikalashashi6207 5 ай бұрын
🙏ಅಮ್ಮ ನಿಮ್ಮ ಆಶೀರ್ವಾದ ನಮ್ಮ ಮತ್ತು ನಮ್ಮ ಮಕ್ಕಳ ಮೇಲೆ ಸದಾ ಇರಲಿ ಅಮ್ಮ 🙏🙏🌹
@USHAMGOWDRU
@USHAMGOWDRU 5 ай бұрын
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
@sudhan371
@sudhan371 5 ай бұрын
ಈ ಕಥೆ ನಾನು ಓದುತ್ತಿರುತ್ತೀನಿ ಇದು ಸಣ್ಣ ಕಥೆ ಎರಡು ತರಹ ಇದೆ ನನ್ನ ಹತ್ತಿರ ಹಾಡು ತರಹನೂ ಹೇಳಬಹುದು ನಿಮ್ಮ ಬಾಯಿಯಿಂದ ಕೇಳಿ ಖುಷಿ ಆಯ್ತು ಧನ್ಯವಾದಗಳು ವೀಣಾ ರವರೆ ಶುಭ ಸಾಯಂಕಾಲ 🪔🪔🪔
@user-ry7hr2bi8d
@user-ry7hr2bi8d 5 ай бұрын
ಅಮ್ಮ ನಮಸ್ಕಾರ ನಿಮ್ಮ ಮಾತು ಕೇಳಿ ಬಹಳ ಸಮಾಧಾನ ಆಯ್ತು
@shankargoudapatil5405
@shankargoudapatil5405 5 ай бұрын
ಅಮ್ಮ ನಿಮ್ಮ ಆಶೀರ್ವಾದ ಸದಾಕಾಲ ಎಲ್ಲರಮೇಲೆ ಇರಲಿ ಇವತ್ತಿನ ಕೃಷ್ಣ ಸುಧಾಮರ ನಡೆದಕಥೆ ತುಂಬಾ ಸುಂದರವಾಗಿತ್ತು ಹರೆ ಕೃಷ್ಣ 🙏🙏🙏🙏🙏
@sumanv3984
@sumanv3984 5 ай бұрын
🙏amma ಈ ಕಥೆನ ಸ್ಕೂಲ್ ಪಾಠ ಪುಸ್ತಕ ದಲ್ಲಿ ಅವಾಗ ಕೇಳಿದೆ ನಾವು ಸ್ಕೂಲ್ಗೇ ಹೋಗುವಾಗ ತುಂಬಾ ಚೆನಾಗಿದೆ ಕಥೆ 🙏 💐💐
@SahasranamaSeva
@SahasranamaSeva 5 ай бұрын
ಹರೇ ಕೃಷ್ಣ. ಕಥೆಯನ್ನು ಬಹಳ ಚೆನ್ನಾಗಿ ಹೇಳಿದಿರಿ ಅಮ್ಮಾ. ಸುಧಾಮ ಬಡತನದ ಜೀವನ ಹೇಗೆ ಮಾಡಿರಬೇಕು ಎಂದು ನೆನಪು ಮಾಡಿಕೊಂಡರೆ ಕಣ್ಣೀರು ಬರುತ್ತದೆ. ಧನ್ಯವಾದಗಳು 🙏🏻🙏🏻
@vijayalaxmiAjay60
@vijayalaxmiAjay60 5 ай бұрын
ಅಮ್ಮ ನಿಜ್ವಾಗ್ಲೂ ಹೇಳ್ತಿನಿ.... ವೀಣಾ ಅಮ್ಮ ಯಾಕೋ ಇವತ್ತು ಯಾವ ವಿಡಿಯೋ ನು ಹಾಕ್ಲಿಲ್ಲ ಅಂತ ಅನ್ನುಕೊಳ್ಳುವಷ್ಟ್ರಲ್ಲಿ ಥಟ್ ಅಂತ ನಿಮ್ಮ ವಿಡಿಯೋ ಬಂತು...... ನೆನದವರ ಮನದಲ್ಲಿ ಅಮ್ಮ ನೀವು..... ನಿಮ್ಮಿಂದ ನನ್ನ ಜೀವನದ ಎಷ್ಟೋ ಕಷ್ಟಗಳು ದೂರಾಗ್ತಿವೆ ಕೋಟಿ ವಂದನೆಗಳು ಅಮ್ಮ ನಿಮಗೆ 🙏🏻🙏🏻ದೇವರು ನಿಮಗೂ ಆರೋಗ್ಯ, ಆಯಸು , ಸುಖ, ಶಾಂತಿ,ನೇಮದಿ ಕೊಡ್ಲಿ 🙏🏻🙏🏻
@VeenaJoshi
@VeenaJoshi 5 ай бұрын
🙏
@pratibhavasanth5402
@pratibhavasanth5402 5 ай бұрын
ಅದ್ಭುತವಾಗಿದೆ ಅಕ್ಕಾ 🙏🙏🙏🙏🙏🥰🙏🙏🙏🙏
@poornima20099
@poornima20099 5 ай бұрын
ಅಮ್ಮ ಧನ್ಯವಾದ 🙏 ಇಷ್ಟು ವಿವರವಾಗಿ ಸುಂದರವಾಗಿ ಕೃಷ್ಣ ಸುಧಾಮರ ಕಥೆ ಹೇಳಿದ್ದು ❤❤❤
@shakutahala7384
@shakutahala7384 4 ай бұрын
ನಿಮ್ಮ ಆಶೀರ್ವಾದ ಇರಲಿ ಅವ್ವಾ
@Adithi-lz3gk
@Adithi-lz3gk 4 ай бұрын
Dhanyosmi veena akka. Haresrinivaasa. Nanagaagi bhagavantha e vidiyo kottiddaane.,,
@subhasnara2827
@subhasnara2827 5 ай бұрын
ತಾಯಿ ನಿಮಗೆ ಅನಂತ್ ಧನ್ಯವಾದಗಳು ಈ ಕಥೆ ಕೇಳಿ ನಾವು ಪುಣ್ಯವಂತರು
@savithabm2946
@savithabm2946 5 ай бұрын
ಕಥೆ ಕೇಳೋದೆ ಚೆಂದ ವೀಣಾಮ್ಮ ❤️🙏
@mamatha5732
@mamatha5732 5 ай бұрын
Namaste Amma. ಕಥೆ ಕೇಳಿ ಆನಂದ ಭಾಷ್ಪ ಬರ್ತಿದೆ ಅಮ್ಮ. ರಂಗೋಲಿ ತುಂಬಾ ಚೆನ್ನಾಗಿದೆ. ರಂಗೋಲಿ ವಿವರವಾಗಿ ಹೇಳಿ.🙏🏻🙏🏻
@amruthamurugesh7149
@amruthamurugesh7149 5 ай бұрын
ಅಮ್ಮ ನಮಸ್ಕಾರ ❤ ಕೃಷ್ಣ ಸುಧಾಮ ಸ್ನೆಹಿತರ ಕಥೆ ಕೇಳಿ ತುಂಬಾ ಸಂತೋಷವಾಯಿತು ಅಮ್ಮ ❤❤❤❤❤❤🎉🎉
@Chaya-ej9lf
@Chaya-ej9lf 5 ай бұрын
ಜೈ ಶ್ರೀ ಕೃಷ್ಣ 🙏🌹ಜೈ ವಾಸುದೇವ 🙏ಜೈ ಸುಧಾಮ್ 🙏🌹
@user-xs7gp7lz8j
@user-xs7gp7lz8j 5 ай бұрын
ಧನ್ಯವಾದಗಳು ಅಮ್ಮ . ಕಥೆ ತುಂಬಾ ಚೆನ್ನಾಗಿತ್ತು.🙏
@rachanarach2251
@rachanarach2251 5 ай бұрын
ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ 🙏🙏🙏
@madhuridixit3313
@madhuridixit3313 5 ай бұрын
👌👌🙏🙏 thannk your so much ma'am ❤❤ ನಮ್ಮ ಅಮ್ಮಾನು ಹಾಡುತ್ತಿದ್ದರು ಈಗ ಅಮ್ಮ ಇಲ್ಲ ಇಂದು ತಮ್ಮಿಂದ ಕೇಳಿ ತುಂಬ ಸಂತೋಷ ಆಯ್ತು ರೀ❤🙏
@user-dd9jq7mt6h
@user-dd9jq7mt6h 5 ай бұрын
ಅಮ್ಮ ನಮಸ್ತೆ 🙏 ತುಂಬಾ ಚೆನ್ನಾಗಿದೆ ಕಥೆ 🙏 ನಿಮ್ಮ ರಂಗೋಲಿ ನೋಡುವುದೇ ನಮ್ಮ ಭಾಗ್ಯ 😍
@rajanivenkatesh3208
@rajanivenkatesh3208 5 ай бұрын
ತುಂಬಾ ಧನ್ಯವಾದಗಳು 🙏
@shrinivassullad7115
@shrinivassullad7115 4 ай бұрын
Shri Krishna sudhama 🙏🏾🙏🏾
@vaibhavij.m.4693
@vaibhavij.m.4693 5 ай бұрын
Nimma padagalige nanna namaskaragalu Amma
@sandhyag5467
@sandhyag5467 5 ай бұрын
ತುಂಬಾ ಚೆನ್ನಾಗಿದೆ ಕಥೆ ಅಮ್ಮ ತುಂಬಾ ಧನ್ಯವಾದಗಳು🌹🙏🙏🙏🙏
@Khawsar-mu6yx
@Khawsar-mu6yx 5 ай бұрын
Amma yeshtu chennagi mathanadtheera.nimma channel Andre thumba ishta.devaru nimmannu nimma kutumbavannu chennagittirali.love you mam from kausar🙏
@PriyankaPatil-zw4qg
@PriyankaPatil-zw4qg 2 күн бұрын
🙏🙏🙏🙏
@sunandagolabhavi1015
@sunandagolabhavi1015 5 ай бұрын
Nimma vandondu kathe galnnu nimminda keluvaedu bhal Kushi yagitade ❤❤👌👌👌🙏🙏🙏
@radhakhandate2211
@radhakhandate2211 5 ай бұрын
ಹರೇ ಶ್ರೀನಿವಾಸ ಅಕ್ಕಾ
@user-ff6uj5xo8l
@user-ff6uj5xo8l 5 ай бұрын
E kathe kelta kelasa nanna ge Kannagi niruthumbibartide amm❤🙏🤲
@chethanb4385
@chethanb4385 5 ай бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏 ಕೃಷ್ನಾರ್ಪನಮಸ್ಥು 🌺
@swethasswethas3040
@swethasswethas3040 5 ай бұрын
ಕಥೆ ತುಂಬಾ ಚೆನ್ನಾಗಿತ್ತು ಮೇಡಂ ಥ್ಯಾಂಕ್ಯು🙏
@kiranaradhya3141
@kiranaradhya3141 5 ай бұрын
🙏🏻🙏🏻ಧನ್ಯವಾದಗಳು ಅಕ್ಕ
@vijayalaxmiAjay60
@vijayalaxmiAjay60 5 ай бұрын
First comment first like.... ಧನ್ಯವಾದಗಳು ಅಮ್ಮ 🙏🏻🙏🏻
@guttalveena1562
@guttalveena1562 5 ай бұрын
Bahala chennagi vivarisiddiri, bhakti tumbida katheyanna danyavadagalu mami ravarige🙏🙏🙏
@savithasavisavi2148
@savithasavisavi2148 5 ай бұрын
ಧನ್ಯವಾದಗಳು ಅಮ್ಮ 🙏♥️♥️♥️🌹
@tusharbg2073
@tusharbg2073 5 ай бұрын
☘️ JaiMaShakthi 🌸 🕉️ ಶುಭೋದಯ ಅಮ್ಮಾ 💐 🤍 ☺️
@tusharbg2073
@tusharbg2073 5 ай бұрын
🌺 JaiMaShakthi 🙏 🌸 ಶುಭೋದಯ ಅಮ್ಮ 🌹☺️ ❤️
@Sumasongs
@Sumasongs 5 ай бұрын
Namskaram Madam my mom sing it everyday since so many years we have high regard for it.
@mamathahr3106
@mamathahr3106 4 ай бұрын
Amma namaskar
@vaijayanthirao6066
@vaijayanthirao6066 4 ай бұрын
Hare srinivasa namaskara
@yeshuk8332
@yeshuk8332 5 ай бұрын
❤annath danyevaadagalu nimge amma nim aashrivaada sadha eirali namge happy holi maa🌹🌹🌹🌹🙏🙏🥰🤗🤗🤗
@vjorganicfarming794
@vjorganicfarming794 5 ай бұрын
Tq amma kathe bhal chenditri maa namg idar bagge mahiti ne irlilla shubharatri 🙏❤️
@chetanamayannanavar
@chetanamayannanavar 3 ай бұрын
ಅಮ್ಮ ಈ ಕಥೆ ಕೇಳ್ತಾ ಕೇಳ್ತಾ ನನ್ನ ಕಣ್ಣಲ್ಲಿ ನೀರು ಹರೀತ ಇತ್ತು 😢🙏ಸುಧಾಮನ ಭಕ್ತಿ ನಿಷ್ಠೆ ಭಗವಂತ ನ ಕರುಣೆ ಪ್ರೀತಿ 🙏🙏🙏🙏🥹🥹
@mangalamangala1984
@mangalamangala1984 5 ай бұрын
Amma thumba dhanyavaadgalu 🙏🙏🙏Amma
@vaishalidesai7938
@vaishalidesai7938 5 ай бұрын
ಅಮ್ಮ ನಾಳೆ ನನ್ನ ಮಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆಯುತ್ತಿದ್ದಾಳೆ ಅವಳಿಗೆ ಆಶೀರ್ವದಿಸಿ🙏🏻
@VeenaJoshi
@VeenaJoshi 5 ай бұрын
ಒಳ್ಳೆಯದಾಗಲಿ ಕಂದ
@rajeshwariputti6350
@rajeshwariputti6350 5 ай бұрын
All the best
@geethadevi8921
@geethadevi8921 5 ай бұрын
Good luck
@saviraj.2008
@saviraj.2008 5 ай бұрын
Madam nanna maga Raghav V. ನಾಳೆ s s l c exam ಹೋಗ್ತಾ ಇದ್ದಾನೆ ಆಶೀರ್ವದಿಸಿ 🙏🙏🙏🙏
@lakshmivinayak9321
@lakshmivinayak9321 5 ай бұрын
ತುಂಬ ಚೆನ್ನಾಗಿ ದೇ ಅಮ್ಮ.
@dgupaday2383
@dgupaday2383 5 ай бұрын
ಅಮ್ಮ ನಮಸ್ತೆ.. ನಿಜ ಅಮ್ಮ namge ಸ್ತ್ರೀ ಶಾಪ ಇದೆಯೆಂತೆ. ಗೋಕರ್ಣ ಕೆ ಹೋಗಿ ಪೂಜೆ ಮಾಡಿಸಿ ಬಂದೇವಿ. ಇದನ ಕೇಳಿ ತುಂಬಾ ಸಂತೋಷ್ ಆಯ್ತು ಅಮ್ಮ. ನಾನು ಹೇಳತೇನಿ.
@kingofpop7765
@kingofpop7765 5 ай бұрын
Nija amma namagu shap ide idannu tilisi kottiddakke tumba tumba dhanyawadagalu amma 🙏🙏🙏
@laxmigaddigoudra369
@laxmigaddigoudra369 5 ай бұрын
ನಮಸ್ಕಾರ ಅಮ್ಮ ತುಂಬಾ ಸುಂದರವಾದ ಸುಧಾಮ ಮತ್ತು ಕೃಷ್ಣನ ಗೆಳೆತನದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ತುಂಬಾ ಸಂತೋಷವಾಯಿತು ಅಮ್ಮ ಅಮ್ಮ ಕೈಯಲ್ಲಿ ಹಂಚಿಬಟ್ಟು ಹಾಕಿಸಿಕೊಳ್ಳುವುದು ದೇವರ ಚಿಹ್ನೆಗಳು ಮಕ್ಕಳ ಹೆಸರು ಹೇಗೆ ಹಾಕಿಸಿಕೊಳ್ಳುತ್ತಾರೆ ಇದರ ಬಗ್ಗೆ ಹೇಳಿ ಅಮ್ಮ
@nagarathnaprasad1051
@nagarathnaprasad1051 5 ай бұрын
Ammanamasthe. Nimvlags nodidathkksna like. Madthni. N. C.. L. T. B. Ista n. G nimjothemathdbeku. Amma
@YamunaPatil1
@YamunaPatil1 5 ай бұрын
Amma story n song very nice sweet voice thanks Amma
@arunkumarjoshi4324
@arunkumarjoshi4324 5 ай бұрын
Namma ammanu ede dhateyalli haduthidaru. Nimma hadu keli tumba Santoshvayetu. Dhanyavadagu
@yashodhakudagol6924
@yashodhakudagol6924 5 ай бұрын
ಅಮ್ಮ ನಮಸ್ಕಾರ ನೀವು ಹಾಕಿದ ರಂಗೋಲಿ ತುಂಬಾ ಚೆನ್ನಾಗಿ ದೆ🙏🙏🙏🙏🙏🌹🌹🌹🌹🌹
@renukamadiwalar778
@renukamadiwalar778 5 ай бұрын
Amma first viwa and like amma namaste ri
@VeenaJoshi
@VeenaJoshi 5 ай бұрын
Thanq
@latatalawar1618
@latatalawar1618 Ай бұрын
❤ 12:15
@SarojaGajapathy
@SarojaGajapathy 5 ай бұрын
Very very beautiful full story that I heard for the first time !! Thank you so much
@devakin3744
@devakin3744 5 ай бұрын
Amma thumba thumba thumba Dhanyawadagalu ❤❤❤😊
@rajuprema5679
@rajuprema5679 3 ай бұрын
🙏🙏🙏ಕ್ರಷ್ಣಂ ವಂದೇ ಜಗದ್ಗುರು
@SavitreSutar-md2wx
@SavitreSutar-md2wx Күн бұрын
🙏🙏🌷
@ashaparamesh9689
@ashaparamesh9689 5 ай бұрын
🙏ತಾಯಿ. ಮೃತ್ಯುಂಜಯ ಹೋಮ ಮಾಡ್ಸೋಕೆ ವಾರ ತಿಥಿ ತಿಳಿಸಿ ಅಮ್ಮ.
@shreehayagreeva1356
@shreehayagreeva1356 5 ай бұрын
Haakiro prati rangoli deatail aagi torisi explain maadi amma 😊
@chanduravikumarn2232
@chanduravikumarn2232 5 ай бұрын
Namasthe amma
@ShailaShaila-yg3qw
@ShailaShaila-yg3qw 4 ай бұрын
ಅಮ್ಮ ರಾಘವೇಂದ್ರ ಸ್ವಾಮಿಗಳ ಪರಿಮಳ ಗ್ರಂಥದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಅಮ್ಮ ದಯವಿಟ್ಟು 🙏🙏🙏
@GayathriHiremathaudiobook
@GayathriHiremathaudiobook 5 ай бұрын
ಅಮ್ಮ ಧನ್ಯವಾದಗಳು
@rohinisaroor5045
@rohinisaroor5045 5 ай бұрын
ಜೈ ಕೃಷ್ಣ ಸುಧಾಮ🙏🙏
@Mala-nt8cc
@Mala-nt8cc 5 ай бұрын
Amma nimage danyavadagalu
@user-op6hj1vy8n
@user-op6hj1vy8n 5 ай бұрын
ಅಮ್ಮ ನಾಳೆ ನಮ್ಮ ಮನೆ ದೇವರು ಮಯ್ಯಲಾರಕೆ ಹೊಗಬಹುದಾ ಅಮ್ಮ ಪ್ಲೀಸ್ ಪ್ಲೀಸ್ ಹೇಳಿ ರೀ ಅಮ್ಮ.. 🙏🙏
@preetagi1199
@preetagi1199 5 ай бұрын
ಅಮ್ಮ ನಮಸ್ತೆ 🙏🙏🙏🙏🙏
@shailasg2822
@shailasg2822 5 ай бұрын
ಅಮ್ಮಾ ನಮಸ್ತೆ ನನ್ನದೂಂದು ಪ್ರಶ್ನೆ ಅಮ್ಮಾ ಸಂಬಂದಿಕರ ತಿರಿಹೋದವರ ವರ್ಷದ ಪೂಜೆ ಗೆ ಹೋದಾಗ ಅಲ್ಲಿ ನಾವು ಉಳಿದುಕೊಂಡು ಆಮೇಲೆ ನಮ್ಮ ದೇವರ ಹರಕೆ ಮತ್ತು ದೇವರ ಅಭಿಷೇಕ ಮಾಡಿಸಬಹುದಾ ಅಮ್ಮಾ ಇದರ ಬಗ್ಗೆ ತಿಳಿಸಿ ಅಮ್ಮಾ ಏಕೆಂದರೆ ನಾವು ಹೋಗುವದು ಮೊದಲು ಅವರ ಪೂಜೆ ಗೆ ಆಮೇಲೆ ನಾವು ನಮ್ಮ ಒಳ್ಳೆ ಕೆಲಸ ಮಾಡಬಹುದಾ ಅಮ್ಮಾ ನಮ್ಮ ಊರು ದೂರ ಇದೆ 🙏🙏
@VeenaJoshi
@VeenaJoshi 5 ай бұрын
ಬೇಡ
@shailasg2822
@shailasg2822 5 ай бұрын
Ok ma Tq 🙏🙏
@latavpujar4224
@latavpujar4224 5 ай бұрын
Amma 💐🙏🙏🙏🙏🙏💐nale nanna magana s s l c pariksha ede ashirvad madi amma ❤
@anithaanu2655
@anithaanu2655 5 ай бұрын
Namasthe amma nima Aashirwad erile amma
@varshabhaskar8044
@varshabhaskar8044 5 ай бұрын
ಧನ್ಯವಾದಗಳು ಅಮ್ಮ 🙏🙏🙏🙏🙏🙏
@jamunakumarijamuna5272
@jamunakumarijamuna5272 5 ай бұрын
Amma ty so much amma katy channagetu amma❤
@harshuharshitha2277
@harshuharshitha2277 5 ай бұрын
Thumba dhanyavadagalu Amma ❤❤❤❤
@savitahalemani3277
@savitahalemani3277 4 ай бұрын
Veena Sister 🙏
@VeerendraGB
@VeerendraGB 5 ай бұрын
ಧನ್ಯವಾದಗಳು mam 🙏🏽🙏🏽
@drakshayaniharihar6481
@drakshayaniharihar6481 5 ай бұрын
ದಯವಿಟ್ಟು ತಿಳಿಸಿ 🙏🙏🙏🙏🙏
@akshatabirajdarakshata3695
@akshatabirajdarakshata3695 5 ай бұрын
Akka plz tulza bhavani devi bage pooje tilisi kodi plz Akka 🙏 😊
@lakshmi.h7657
@lakshmi.h7657 5 ай бұрын
ಧನ್ಯವಾದಗಳು ಅಮ್ಮ 🙏🙏🙏
@maheshgouda5418
@maheshgouda5418 5 ай бұрын
Namaskargalu tayi
@AnjaneyaH-nb4wy
@AnjaneyaH-nb4wy 5 ай бұрын
🙏🙏 Jay Krishna Sudama🙏🙏💐💐
@Khawsar-mu6yx
@Khawsar-mu6yx 5 ай бұрын
Neevu hakida rangoli suuuper amma🙏
@bettadammagaanalahari6421
@bettadammagaanalahari6421 5 ай бұрын
Abha ಎಂಥ ಕಥೆ ❤❤....
@rammyaganesh6730
@rammyaganesh6730 5 ай бұрын
First comment ಅಮ್ಮ love you ma
@VeenaJoshi
@VeenaJoshi 5 ай бұрын
Thanq
@arpuswathi8597
@arpuswathi8597 5 ай бұрын
Thank u madam for writing in words in description
@binduravi5342
@binduravi5342 5 ай бұрын
Guru sandeepanalli odikonda vivaranella heluthiddanu anrha ethu adare edara artha ega thilithu tq maa...🙏
@sujathapatil6717
@sujathapatil6717 5 ай бұрын
Thanks amma
@user-yw8ip4lg6p
@user-yw8ip4lg6p 5 ай бұрын
Mam ತುಂಬಾ ಧನ್ಯವಾದ
@somashekhartalawar3608
@somashekhartalawar3608 5 ай бұрын
ಅಮ್ಮ ನಿಮಗೆ ನಮ್ಮ ನಮಸ್ಕಾರ ಳು ಅಮ್ಮ ನಾವು ನಮನೆಬಗ್ಗೆ ನಿಮಗೆ ತಿಳಿಸಿದೇವೆ ಆದರೆ ನಿವೇನು ಉತ್ತಾನೇಕೊಡಲಲ್ಲಮ್ಮ ನಾವು ಮನೆಗೊಂಡವ ಮೇಲೆ ತುಂಬಾ ಪ್ರಾಬ್ಲಮ್ ಆದೆಮ್ಮ ಬಬ್ಬನ್ ಮಗ ಮನೆ ಮಾರಿ ಬಿಡೇ ದಾ ಇದೇ ದಾ ಗೊತ್ತಗುತ್ತಿಲ್ಲಮ್ಮ ದಯಾಮಾಡಿ ಲೆಳಸಿ ಕೊಡಿಮ್ಮ ಪುಣ್ಯ ಬರುತ್ತದೆ ಇಂತ ನಿರಾಶ್ರಿತ್ ಜಿವಿಗಳು
wow so cute 🥰
00:20
dednahype
Рет қаралды 29 МЛН
Dad Makes Daughter Clean Up Spilled Chips #shorts
00:16
Fabiosa Stories
Рет қаралды 1,9 МЛН
Before VS during the CONCERT 🔥 "Aliby" | Andra Gogan
00:13
Andra Gogan
Рет қаралды 10 МЛН
wow so cute 🥰
00:20
dednahype
Рет қаралды 29 МЛН