Рет қаралды 158,607
Mangalarathi thandu belagire,gowri,aarathi song
Raaga: Madhyamavathi
English Lyrics:
Maṅgaḷārati tandu beḷagire ambujākṣana (ambujāsana) rāṇige
ambege jagadāmbege mūkāmbege śaśi bimbege ||
śud'dha snānava māḍi nadiyali vajrapīṭhadi nelesire
tiddi tilakava tīḍidantha muddu maṅgaḷa gaurige ||
eredu pītāmbaravanuḍisi sarvābharaṇava racisida
haraḷinōle vajramūguti varamahālakṣmi dēvige ||
huṭṭubaḍaveya kaṣṭakaḷedu koṭṭaḷarasana siriyanu
hetta kumarana tōridantha śukravārada lakṣmige ||
nigama vēdyaḷe ninna guṇagaḷa bagebageyali varṇipe
tegedu bhāgyava nīḍu ēnuta jagadoḍeyana bhīmēśa kr̥ṣṇana rāṇige ||
Kannada Lyrics:
ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ (ಅಂಬುಜಾಸನ) ರಾಣಿಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ ಶಶಿ ಬಿಂಬೆಗೆ ||
ಶುದ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ ||
ಎರೆದು ಪೀತಾಂಬರವನುಡಿಸಿ ಸರ್ವಾಭರಣವ ರಚಿಸಿದ
ಹರಳಿನೋಲೆ ವಜ್ರಮೂಗುತಿ ವರಮಹಾಲಕ್ಷ್ಮಿ ದೇವಿಗೆ ||
ಹುಟ್ಟುಬಡವೆಯ ಕಷ್ಟಕಳೆದು ಕೊಟ್ಟಳರಸನ ಸಿರಿಯನು
ಹೆತ್ತ ಕುಮರನ ತೋರಿದಂಥ ಶುಕ್ರವಾರದ ಲಕ್ಷ್ಮಿಗೆ ||
ನಿಗಮ ವೇದ್ಯಳೆ ನಿನ್ನ ಗುಣಗಳ ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಏನುತ ಜಗದೊಡೆಯನ ಭೀಮೇಶ ಕೃಷ್ಣನ ರಾಣಿಗೆ ||