Рет қаралды 7,531
ತೆಂಕುತಿಟ್ಟು ಯಕ್ಷಗಾನದ ರಂಗಸ್ಥಳದ ಮಿಂಚು, ಪ್ರಖರ ಪ್ರತಿಭೆಯ ರಂಗವಿಹಾರಿ ಸುಬ್ರಾಯ ಹೊಳ್ಳ ಕಾಸರಗೋಡು ಕಂಡ ಯಕ್ಷಗಾನದ ಬದುಕು ಸ್ವಾರಸ್ಯಪೂರ್ಣ. 32 ವರ್ಷಗಳ ತಿರುಗಾಟದ ಅಪಾರ ಅನುಭವ ಹೊಂದಿರುವ ಹೊಳ್ಳರು ಯುವಕಲಾವಿದರಿಗೆ ಆದರ್ಶಪ್ರಾಯರು. ಸುಬ್ರಾಯ ಹೊಳ್ಳರು ಕೇವಲ ಒಬ್ಬ ವೇಷಧಾರಿ ಕಲಾವಿದ ನಲ್ಲ. ಯಾವುದೇ ಪಾತ್ರವಿದ್ದರೂ ಅದರ ಸಮಗ್ರವನ್ನರಿತು ರಂಗನಿರ್ವಹಿಸುವ, ಪ್ರೇಕ್ಷಕನ ಮನತಟ್ಟುವ ಅನನ್ಯ ಕಲಾವಿದ. ಕಿರೀಟ ಪಾತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ ಹೊಳ್ಳರ ಪಾತ್ರಗಳ ಮೇಲೆ ಪ್ರಭಾವ ಪ್ರಚೋದನೆ ಬೀರಿದವರು ಅನೇಕರು. ಹಿರಿ ಕಲಾವಿದರಾದ ಹೊಸ ಹಿತ್ಲು ಮಾಲಿಂಗ ಭಟ್ಟ, ಕೋಳ್ಯೂರು ರಾಮಚಂದ್ರ ರಾವ್, ಪೆರುವೋಡಿ ಹಾಸ್ಯಗಾರರು, ಬಲಿಪ-ತೆಂಕಬೈಲು ಭಾಗವತರು ಒಡನಾಟದೊಂದಿಗೆ ತನ್ನ ಅನುಭವವನ್ನು ವಿಸ್ತರಿಸಿಕೊಂಡವರು