ನಮ್ಮೊಳಗೆ ವಾಸಿಸುವ ಪವಿತ್ರಾತ್ಮನೇ ಈ ದಿನ ನಿನ್ ಚಿತ್ತದಂತೆ ನಡೆಸಬೇಕಯ್ಯಾ ಪವಿತ್ರಾತ್ಮನೇ ಪವಿತ್ರಾತ್ಮನೇ ಪರಿಶುದ್ಧ ದೇವರಾತ್ಮನೇ ಹೇಗೆ ನಾನು ಪ್ರಾರ್ಥಿಸಲಿ ಏನೆಂದು ಪ್ರಾರ್ಥಿಸಲಿ ಕಲಿಸಿ ಕೊಡಿ ಪವಿತ್ರಾತ್ಮನೇ ವೇದವಚನ ಅರಿತುಕೊಂಡು ಗೂಡಾರ್ಥ ತಿಳಿಯಲು ಬೆಳಕನ್ನು ನೀಡಿ ಆತ್ಮನೇ ಚಿಂತೆಯನ್ನು ಮರೆಯಲು ಕರ್ತನನ್ನೇ ಸ್ತುತಿಸಲು ಕಲಿಸಿಕೊಡಿ ಪವಿತ್ರಾತ್ಮನೇ ಉಪಕಾರ ಸ್ಮರಿಸಲು ಕೃತಜ್ಞತೆ ಮಾಡಲು ಕಲಿಸಿಕೊಡಿ ಪವಿತ್ರಾತ್ಮನೇ ಎಲ್ಲಿಗೆ ನಾ ಹೋಗಲಿ ಏನನ್ನು ಮಾಡಲಿ ದಾರಿ ನಡೆಸಿ ಪವಿತ್ರಾತ್ಮನೇ ನಿನ್ ಚಿತ್ತ ಇಲ್ಲದ ಸ್ಥಳಗಳಿಗೆ ಹೋಗದಂತೆ ಸಹಾಯವ ಮಾಡಿ ಆತ್ಮನೇ ನಮ್ಮೊಳಗೆ ವಾಸಿಸುವ ಪವಿತ್ರಾತ್ಮನೇ ಈ ದಿನ ನಿನ್ ಚಿತ್ತದಂತೆ ನಡೆಸಬೇಕಯ್ಯಾ ಪವಿತ್ರಾತ್ಮನೇ ಪವಿತ್ರಾತ್ಮನೇ ಪರಿಶುದ್ಧ ದೇವರಾತ್ಮನೇ