ಯಕ್ಷಕೌಮುದಿ ಅತ್ಯಂತ ಸುಂದರವಾಗಿ ಮೂಡಿ ಬಂತು. ಮೊದಲ ಪ್ರಸಂಗದಲ್ಲಿ ಕೊಂಡದಕುಳಿಯವರ ರೋಷಾವೇಶದ ಹಿರಣ್ಯ ಕಶ್ಯಪು, ಯಲಗುಪ್ಪರವರ ಸೌಮ್ಯ ಸ್ವಭಾವದ ಕಯಾದು ಭವಿಷ್ಯದ ಭರವಸೆಯ ಕಲಾವಿದ ಭುವಿಶ್ ಕನ್ನಡಿಕಟ್ಟೆಯವರ ಪ್ರಹ್ಲಾದ ಚೆನ್ನಾಗಿ ಮೂಡಿ ಬಂತು. ನೀಲಧ್ವಜ ಪ್ರಸಂಗದಲ್ಲಿ ಕಾರ್ತಿಕ್ ಚಿಟ್ಟಾಣಿ ಹಾಗೂ ಸುಧೀರ್ ಉಪ್ಪೂರರ ನಾಟ್ಯ ಮನಸ್ಸಿಗೆ ಮುದ ನೀಡಿತು. ನಂತರ ಜಲವಳ್ಳಿಯವರು ಹಾಗೂ ಶಶಿಕಾಂತರ ಜೋಡಿ ನೀಲಧ್ವಜ ಜ್ವಾಲೆಯಾಗಿ ಪ್ರೇಕ್ಷಕರನ್ನು ನವಿರಾದ ಹಾಸ್ಯದಿಂದ, ಗಂಭೀರತೆಯಿಂದ ಹಿಡಿದಿಟ್ಟುಕೊಂಡರು.ಚಿಕ್ಕ ಹುಡುಗ ಅತ್ರೇಯ ಬಹಳ ಚೆನ್ನಾಗಿ ಪಾತ್ರ ನಿರ್ವಹಿಸಿದ. ನಂತರದ್ದು ನೀಲ್ಕೋಡರ ಅಭ್ಬರದ ಅಶ್ವತ್ತಾಮ. ಬೆಳಗಿನ ಜಾವದಲ್ಲಿ ಅತ್ಯಂತ ಅಮೋಘವಾಗಿ ನಟಿಸಿದ ನೀಲ್ಕೋಡರು ತಮ್ಮ ಅಭಿಮಾನಿಗಳಿಗೆ ರಸದೂಟವನ್ನೇ ಉಣಬಡಿಸಿದರು. ಕಡಬಾಳರ ದುರ್ಯೋಧನ ಅತ್ಯುತ್ತಮ ವಾಗಿತ್ತು. ಹಿಮ್ಮೇಳದಲ್ಲಿ ಜನ್ಸಾಲೆಯವರು ಕನ್ನಡಿಕಟ್ಟೆಯವರಾದಿಯಾಗಿ ಎಲ್ಲರೂ ಅತ್ಯುತ್ತಮವಾಗಿ ತಮ್ಮ ಕಾರ್ಯ ನಿರ್ವಹಿಸಿದರು. ಒಟ್ಟಿನಲ್ಲಿ ಹಿಮ್ಮೇಳ,ಮುಮ್ಮೇಳದ ಎಲ್ಲಾ ಕಲಾವಿದರೂ ಒಗ್ಗಟ್ಟಿನಿಂದ ದುಡಿದ ಪರಿಣಾಮವೇ ಯಕ್ಷ ಕೌಮುದಿಯ ಗೆಲುವಿಗೆ ಕಾರಣವಾಯಿತು. ಪ್ರಸಂಗದ ಆಯ್ಕೆ ಹಾಗೂ ಅದಕ್ಕೆ ತಕ್ಕಂತೆ ಪಾತ್ರದಾರಿಗಳ ಆಯ್ಕೆಯಲ್ಲೇ ನೀಲ್ಕೋಡರು ಗೆದ್ದಾಗಿತ್ತು. ಈ ಗೆಲುವನ್ನು ನೀಲ್ಕೋಡರು ಅಭಿಮಾನಿ ಪ್ರೇಕ್ಷಕರಿಗೆ ಅರ್ಪಿಸಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ ಇಡೀ ಒಂದು ರಾತ್ರಿ ಮನಸ್ಸಿಗೆ ಆಹ್ಲಾದಕರವಾದ ಖುಷಿ ನೀಡಿತು. ಒಂದು ಉತ್ತಮ ಪ್ರದರ್ಶನದ ಮೂಲಕ ಪ್ರೇಕ್ಷಕರಿಗೆ ಮೃಷ್ಟಾನ್ನ ಭೋಜನ ಉಣ ಬಡಿಸಿದ ನೀಲ್ಕೋಡರಿಗೆ ಧನ್ಯವಾದಗಳು.
@geethak86392 ай бұрын
Sooper explanation
@ShailaTD2 ай бұрын
Supper God bless you🎉
@guruMurthy14092 ай бұрын
ನಾನು ನಿನ್ನೆಯ ದಿನ ಆಟಕ್ಕೆ ಹೋಗಿದ್ದೆ. ಎಲ್ಲರು ಚೆನ್ನಾಗಿ ಮಾಡಿದ್ದರು. ಬಾಲ ಪ್ರತಿಭೆಗಳ ಅಭಿನಯ ಹೃನ್ಮನ ತಣಿಸಿತು. ಶುಭವಾಗಲಿ ಎಲ್ಲರಿಗು.