ನಿಪ್ಪಾಣಿ ತಾಲೂಕಿನ ಒಂದೇ ಗ್ರಾಮ ಪಂಚಾಯಿತಿ ಕಟ್ಟಡ; ಎರಡು ಬಾರಿ ಉದ್ಘಾಟನೆ

  Рет қаралды 8

GBN7 News

GBN7 News

Күн бұрын

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯರನಾಳ ಗ್ರಾಮ ಪಂಚಾಯಿತಿ ಕಟ್ಟಡವನ್ನು ಒಂದೇ ಸಮಯದಲ್ಲಿ ಎರಡು ಬಾರಿ ಉದ್ಘಾಟನೆ ಮಾಡಲಾಗಿದೆ. ಮೊದಲ ಬಾರಿ, ನಾಲ್ಕು ದಿನಗಳ ಹಿಂದೆ, ಸ್ಥಳೀಯ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಉದ್ಘಾಟನೆ ಮಾಡಿದ್ದರು. ಈ ಸಂದರ್ಭ, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು, ಇದರಿಂದ ದೊಡ್ಡ ಹೈಡ್ರಾಮ ಉಂಟಾಯಿತು. ನಂತರ, ಪ್ರಕ್ರಿಯೆಯನ್ನು ಮುಗಿಸಿ, ಶಶಿಕಲಾ ಜೊಲ್ಲೆ ಅವರು ಉದ್ಘಾಟನೆ ಮಾಡಿದರು.
ಇಂದು, ಮತ್ತೊಮ್ಮೆ, ಈ ಗ್ರಾಮ ಪಂಚಾಯಿತಿ ಕಟ್ಟಡವನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ‌ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿನ ಕಾರ್ಯಕ್ರಮವು ನಡೆದಿದೆ. ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಪಿಡಿಒ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮರಾಠಿಮಯವಾಗಿ ಮಾಡುವ ಮೂಲಕ ಕನ್ನಡವನ್ನು ಮರೆತು ಸ್ಥಳೀಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಿರುವುದಾಗಿ ವರದಿಯಾಗಿದೆ. ಶಾಸಕಿ ಶಶಿಕಲಾ ಜೊಲ್ಲೆ ಅವರು ಈ ಕಾರ್ಯಕ್ರಮವನ್ನು ಅಧ್ಯಕ್ಷರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಡೆಸಿದ್ದರು ಎಂಬ ಆಕ್ರೋಶ ವ್ಯಕ್ತವಾಗಿದೆ. ಇತ್ತ ಇಂದು, ಅಧ್ಯಕ್ಷರ ನೇತೃತ್ವದಲ್ಲಿ ಮತ್ತೊಮ್ಮೆ ಕಟ್ಟಡವನ್ನು ಉದ್ಘಾಟಿಸಿರುವುದಾಗಿ ಪ್ರಿಯಾಂಕಾ ಜಾರಕಿಹೊಳಿ‌ ಅವರು ಹೇಳಿಕೆ ನೀಡಿದ್ದಾರೆ.

Пікірлер
Dad gives best memory keeper
01:00
Justin Flom
Рет қаралды 21 МЛН
Will A Guitar Boat Hold My Weight?
00:20
MrBeast
Рет қаралды 143 МЛН
The Digital Edge: Igniting The Future Of Business | N18M
2:32:19
LATEST KANNADA COMEDY 2024|ಕನ್ನಡ ಸೀರಿಯಲ್ ಫೇಮಸ್ ಯಾವದು? |GADAG PROGRAM|GANGAVATI PRANESH COMEDY|PART 1
17:42
PRANESH PARYATANE ಪ್ರಾಣೇಶ್ ಪರ್ಯಟನೆ
Рет қаралды 1,5 МЛН