ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಕುರಿತು ಜಾಗೃತಿ ಮೂಡಿಸಲು ನೋವಾ ಐವಿಎಫ್ ಫರ್ಟಿಲಿಟಿಯಿಂದ ಸೈಕ್ಲೋಥಾನ್

  Рет қаралды 150

BharathNewstv.in

BharathNewstv.in

Күн бұрын

Nandini reporter Mysore
ನಂದಿನಿ ಮೈಸೂರು
ಪಿಸಿಓಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಕುರಿತು ಜಾಗೃತಿ ಮೂಡಿಸಲು ಸೈಕ್ಲೋಥಾನ್ ಆಯೋಜಿಸಿPದ ನೋವಾ ಐವಿಎಫ್ ಫರ್ಟಿಲಿಟಿ
• ಸೈಕ್ಲೋಪೀಡಿಯಾ ಸೈಕ್ಲಿಂಗ್ ಕ್ಲಬ್ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 60+ ಮಂದಿ ಭಾಗವಹಿಸಿದ್ದರು.
ಮೈಸೂರು: ಪಿಸಿಓಎಸ್ ಜಾಗೃತಿ ಮಾಸ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ರಂದು ಮೈಸೂರಿನ ನೋವಾ ಐವಿಎಫ್ ಫರ್ಟಿಲಿಟಿ ಸೈಕ್ಲೋಥಾನ್ ಅನ್ನು ಆಯೋಜಿಸಿತ್ತು. ಪಿಸಿಓಎಸ್‌ ಕಾರಣದಿಂದ ಮಕ್ಕಳಾಗದಿರುವಿಕೆ ಸಮಸ್ಯೆ ಹೆಚ್ಚುತ್ತಿರುವ ಕುರಿತು ಜಾಗೃತಿ ಮೂಡಿಸುವ ಮತ್ತು ಅದಕ್ಕೆ ಸಂಬಂಧಿಸಿದ ಚಿಕಿತ್ಸೆಯ ಆತಂಕವನ್ನು ತೊಡೆಯುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸೈಕ್ಲೋಪೀಡಿಯಾ ಸೈಕ್ಲಿಂಗ್ ಕ್ಲಬ್‌ ಜೊತೆಗಿನ ಸಹಭಾಗಿತ್ವದಲ್ಲಿ ನಡೆಸ ಈ ಸೈಕ್ಲೋಥಾನ್ ನಲ್ಲಿ 60+ ಮಂದಿ ಮೈಸೂರಿಗರು ಉತ್ಸಾಹದಿಂದ ಪಾಲ್ಗೊಂಡರು. ಸುಮಾರು 19 ಕಿಮೀನಷ್ಟು ದೂರವನ್ನು ಸೈಕಲ್ ಮೂಲಕ ಕ್ರಮಿಸಿದರು. ಈ ಸೈಕ್ಲೋಥಾನ್ ಅನ್ನು ಮೈಸೂರಿನ ನೋವಾ ಐವಿಎಫ್ ಫರ್ಟಿಲಿಟಿಯ ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ ಪ್ರಕಾಶ್ ಬಿ ಸವಣೂರು ಮತ್ತು ಎಂಓಜಿಎಸ್ ನ ಅಧ್ಯಕ್ಷೆ ಡಾ. ಸುನಂದಾ ಎನ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರಿನ ನೋವಾ ಐವಿಎಫ್ ಫರ್ಟಿಲಿಟಿಯ ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ ಪ್ರಕಾಶ್ ಬಿ ಸವಣೂರ್ ಅವರು ಪಿಸಿಓಎಸ್‌ನಿಂದ ಮಕ್ಕಳಾಗದೇ ಇರುವ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಸಂಖ್ಯೆ ಏರಿಕೆಯಾಗುತ್ತಿರುವುದರ ಕುರಿತು ಮಾತನಾಡಿದರು. ಆ ಕುರಿತು ಅವರು, "ಮಕ್ಕಳಾಗದೇ ಇರುವ ಸಮಸ್ಯೆ ಆತಂಕಕಾರಿಯಾಗಿದೆ. ಈ ಸಮಸ್ಯೆಗೆ ಮಹಿಳೆಯರ ಮತ್ತು ಪುರುಷರ ಕಾರಣಗಳು ಸಮಾನಾಂತರವಾಗಿ ಕಂಡುಬರುತ್ತದೆ. ಮಹಿಳೆಯರ ಕರಣಗಳಲ್ಲಿ ಪಿಸಿಓಎಸ್ ಶೇ 40% ನಷ್ಟು ಕಾಣಲಾಗುತ್ತೆದೆ.
ಇನ್ನೊಂದು ಕಡೆ ಮಹಿಳೆಯರಲ್ಲಿ ಕಡಿಮೆ ಅಂಡಗಳು ಉತ್ಪತ್ತಿ ಆಗುವುದು ಮತ್ತೊಂದು ಸಾಮಾನ್ಯ ಸಮಸ್ಯೆಯಾಗಿದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಸಿಪಿಓಎಸ್) ಎನ್ನುವುದು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಕಂಡು ಬರುವ ಹಾರ್ಮೋನು ಸಂಬಂಧಿತ ಸಮಸ್ಯೆಯಾಗಿದೆ. ಇದರಿಂದ ಅನಿಯಮಿತ ಮುಟ್ಟಿನ ಸಮಸ್ಯೆ, ಆಂಡ್ರೊಜನ್ ಮಟ್ಟ ಏರಿಕೆಯಾಗುವುದು ಮತ್ತು ಅಂಡಾಶಯದಲ್ಲಿ ಚೀಲಗಳು ಉಂಟಾಗುವುದು ಇತ್ಯಾದಿ ಸಮಸ್ಯೆಗಳು ಉಂಟಾಗಬಹುದಾಗಿದೆ. ಪಿಸಿಓಎಸ್ ಸಾಮಾನ್ಯವಾಗಿ ಅಂಡೋತ್ಪತ್ತಿಗೆ ಅಡ್ಡಿ ಮಾಡುತ್ತದೆ. ಅದರಿಂದಲೇ ಬಂಜೆತನ ಅಥವಾ ಮಕ್ಕಳಾಗದಿರುವ ಸಮಸ್ಯೆ ಉಂಟಾಗುತ್ತದೆ. ಪಿಸಿಓಎಸ್ ನಲ್ಲಿ ಇನ್ಸುಲಿನ್ ಪ್ರತಿರೋಧದ ಮೂಲ ಕಾರಣದಿಂದ ಹಾರ್ಮೋನ್ ಅಸಮತೋಲನ ಹಾಗೂ ಇತರ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ” ಎಂದು ಹೇಳಿದರು.
ಮಕ್ಕಳಾಗದಿರುವಿಕೆ ಸಮಸ್ಯೆಯ ನೀಡಲಾಗುವ ಚಿಕಿತ್ಸೆಗಳ ಕುರಿತು ಬಹಳಷ್ಟು ತಪ್ಪು ಅಭಿಪ್ರಾಯಗಳು ಮತ್ತು ತಪ್ಪು ಗ್ರಹಿಕೆಗಳಿವೆ. ಹಾಗಾಗಿ ಸಾರ್ವಜನಿಕರಿಗೆ ಈ ಕುರಿತು ಹೆಚ್ಚು ಅರಿವು ಮೂಡಿಸಬೇಕಾಗಿದೆ. ಪಿಸಿಓಎಸ್ ಹೊಂದಿರುವ ಯುವತಿಯರು/ಮಹಿಳೆಯರು ಬಹಳಷ್ಟು ಆತಂಕಗಳನ್ನೂ ಹೊಂದಿರುತ್ತಾರೆ. ಈ ಕುರಿತು ವಿವರಿಸುವ ಪ್ರಕಾಶ್ ಬಿ ಸವಣೂರು ಅವರು, "ಪಿಸಿಓಎಸ್ ಹೊಂದಿರುವ ಕೆಲವರು ಮಹಿಳೆಯರು ಮುಖದಲ್ಲಿ ಕೂದಲು ಬೆಳೆಯುವ ಸಮಸ್ಯೆ ಎದುರಿಸುತ್ತಾರೆ. ಮತ್ತೆ ಕೆಲವರಲ್ಲಿ ತೂಕ ಹೆಚ್ಚಾಗುತ್ತದೆ. ಇದರಿಂದ ಅವರ ಆತ್ಮವಿಶ್ವಾಸ ಕಡಿಮೆ ಆಗಬಹುದು. ಅಲ್ಲದೇ ಖಿನ್ನತೆಗೂ ಒಳಗಾಗಬಹುದು. ನಮ್ಮ ಸಮಾಜ ಪಿಸಿಓಎಸ್ ಹೊಂದಿರುವ ಮಹಿಳೆಯರು/ ಹುಡುಗಿಯರ ಮೇಲೆ ಸಹಾನುಭೂತಿ ತೋರುವ ಅಗತ್ಯವಿದೆ. ಅವರಿಗೆ ಬಾಡಿ ಶೇಮಿಂಗ್ ಮಾಡುವುದು ಕೂಡ ಸಲ್ಲದು. ಅದರಿಂದ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದಾಗಿದೆ. ಪಿಸಿಓಎಸ್ ಹೊಂದಿದ್ದು ಮಕ್ಕಳಾಗದಿರುವ ಸಮಸ್ಯೆಯ ವಿರುದ್ಧ ಹೋರಾಡುತ್ತಿರುವ ಮಹಿಳೆಯರು ಮುಂದೆ ಬಂದು ಫರ್ಟಿಲಿಟಿ ಸ್ಪೆಷಲಿಸ್ಟ್ ರನ್ನು ಭೇಟಿ ಮಾಡಬೇಕು. ಪಿಸಿಓಎಸ್ ಇರುವವರು ಗರ್ಭಿಣಿಯರಾಗುವುದು ಸಾಧ್ಯವಿದೆ. ಅಲ್ಲದೇ ಪಿಸಿಓಎಸ್ ಅನ್ನು ಸೂಕ್ತವಾಗಿ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಪಿಸಿಓಎಸ್ ಇರುವವರು ಆದಷ್ಟು ಬೇಗ ವೈದ್ಯರನ್ನು ಭೇಟಿ ಆಗಬೇಕು ಮತ್ತು ಗರ್ಭಧಾರಣೆಯನ್ನು ವಿಳಂಬಗೊಳಿಸುವುದನ್ನು ತಪ್ಪಿಸಬೇಕು” ಎಂದು ಹೇಳಿದರು.
ಮೈಸೂರಿನ ಸೈಕ್ಲೋಪೀಡಿಯಾದ ಮುಖ್ಯಸ್ಥರಾದ ಶ್ರೀ ಲೋಕೇಶ್ ಮತ್ತು ಶ್ರೀಮತಿ ಫರಿಯಾಲ್ ಅವರು ದೈಹಿಕವಾಗಿ ಫಿಟ್ ಆಗಿರುವುದರ ಪ್ರಾಮುಖ್ಯತೆಯನ್ನು ತಿಳಿಸಿದರು. ಈ ಕುರಿತು ಅವರು, “ಸೈಕ್ಲಿಂಗ್ ಕೇವಲ ಸುಸ್ಥಿರತೆ ಕ್ರಮ ಮಾತ್ರವೇ ಇಲ್ಲ, ಸೈಕ್ಲಿಂಗ್ ದೈಹಿಕ ಚಟುವಟಿಕೆಯ ಒಂದು ಸಂತೋಷದಾಯಕ ರೂಪವಾಗಿದೆ. ಸೈಕ್ಲಿಂಗ್ ಸಮುದಾಯದ ಭಾಗವಾಗಿ ನಾವು ಹೆಚ್ಚು ಮಹಿಳೆಯರು ದೈಹಿಕವಾಗಿ ಆರೋಗ್ಯವಾಗಿರಲು ಮತ್ತು ಮಾನಸಿಕವಾಗಿ ಕ್ಷೇಮವಾಗಿರಲು ಸೈಕ್ಲಿಂಗ್ ಮಾಡಲು ಪ್ರೋತ್ಸಾಹಿಸುತ್ತೇವೆ. ಈ ನಿಟ್ಟಿನಲ್ಲಿ ಪಿಸಿಓಎಸ್‌ ನಂತಹ ಆರೋಗ್ಯ ಸಮಸ್ಯೆ ಕುರಿತು ಹೆಚ್ಚು ಜಾಗೃತಿ ಮೂಡಿಸುವ ವಿಚಾರದಲ್ಲಿ ನೋವಾ ಐವಿಎಫ್‌ ಜೊತೆಗೆ ಕೈಜೋಡಿಸಲು ನಮಗೆ ಸಂತೋಷವಾಗಿದೆ” ಎಂದು ಹೇಳಿದರು.
ಮೈಸೂರಿನಲ್ಲಿರುವ ನೋವಾ ಐವಿಎಫ್ ಫರ್ಟಿಲಿಟಿ ಕೇಂದ್ರವು ಅತ್ಯಾಧುನಿಕ ತಂತ್ರಜ್ಞಾನಗಳಿಂದ ಸುಸಜ್ಜಿತವಾಗಿರುವ ಲ್ಯಾಬ್‌ಗಳನ್ನು ಹೊಂದಿರುವ ಸಮಗ್ರ ಫರ್ಟಿಲಿಟಿ ಚಿಕಿತ್ಸಾ ಕೇಂದ್ರವಾಗಿದೆ. ಈ ಕೇಂದ್ರವು ಫರ್ಟಿಲಿಟಿ ಚಿಕಿತ್ಸೆಯಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತದೆ.
ನಿಮ್ಮ ಗಮನಕ್ಕೆ-
• ಪಿಸಿಓಎಸ್ ನ ದೀರ್ಘ ಕಾಲೀನ ಪರಿಣಾಮಗಳು - ಗರ್ಭಾವಸ್ಥೆಯಲ್ಲಿ ಮಧುಮೇಹ, 40-50ರ ವಯಸ್ಸಿನಲ್ಲಿ ಮಧುಮೇಹ ಉಂಟಾಗುವುದು ಹಾಗೂ ನಂತರದ ಜೀವನದಲ್ಲಿ ಎಂಡೋಮೆಟ್ರಿಯಲ್ ಕ್ಯಾನ್ಸರ್ (ಗರ್ಭಕೋಶದ ಪದರದ ಕ್ಯಾನ್ಸರ್) ಉಂಟಾಗುವ ಅಪಾಯ ಇದೆ.
• ಪಿಸಿಓಎಸ್ ಹೊಂದಿರುವ ಬಹುತೇಕ ಮಹಿಳೆಯರು ಸರಳ ಚಿಕಿತ್ಸೆಯಿಂದಲೇ ಗರ್ಭಧಾರಣೆ ಮಾಡುತ್ತಾರೆ. ಕೆಲವು ಮಹಿಳೆಯರಿಗೆ ಮಾತ್ರ ಐವಿಎಫ್ ಅಗತ್ಯ ಬೀಳುತ್ತದೆ.

Пікірлер
when you have plan B 😂
00:11
Andrey Grechka
Рет қаралды 64 МЛН
Самое неинтересное видео
00:32
Miracle
Рет қаралды 2,8 МЛН
Girl, dig gently, or it will leak out soon.#funny #cute #comedy
00:17
Funny daughter's daily life
Рет қаралды 66 МЛН
Quizz program | #ArifHussain #IslamicSpeech
20:01
Arif Hussain Theruvath
Рет қаралды 20 М.
when you have plan B 😂
00:11
Andrey Grechka
Рет қаралды 64 МЛН