Рет қаралды 1,060
#Pandarapura #ವಿಠ್ಠಲ #vittala
ಪಂಢರಪುರ (ಮರಾಠಿ: पंढरपूर) ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯಲ್ಲಿ ಭೀಮಾ ನದಿಯ ತಟದಲ್ಲಿರುವ ಒಂದು ಪ್ರಮುಖ ಹಿಂದೂ ಪವಿತ್ರ ಸ್ಥಾನ. ಪಂಢರಪುರದಲ್ಲಿ ಭೀಮಾ ನದಿಯು ಅರ್ಧಚಂದ್ರಾಕಅರದಲ್ಲಿ ಹರಿಯುವುದರಿಂದ ಅದನ್ನು ಚಂದ್ರಭಾಗಾ ನದಿ ಎಂದೂ ಕರೆಯುತ್ತಾರೆ. ಇಲ್ಲಿರುವ ವಿಠ್ಠಲನ ದೇವಾಲಯ ಆಶಾಢ ಮಾಸದಲ್ಲಿ ನಡೆಯುವ ಯಾತ್ರೆಯಲ್ಲಿ ಸುಮಾರು ೫ ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.
ಪಂಢರಪುರಕ್ಕೆ ನಾಲ್ಕು ದ್ವಾರಗಳು : ಭೀಮಾ ಹಾಗೂ ಶಿಶುಮಾಲಾನದಿಗಳ ಸಂಗಮಸ್ಥಾನದಲ್ಲಿ ಪೂರ್ವದ್ವಾರ; ಅಲ್ಲಿ ಸಂಧ್ಯಾವಳಿ ದೇವಿಯ ಸನ್ನಿಧಿ; ಮಾನಸೂರದಲ್ಲಿ ದಕ್ಷಿಣದ್ವಾರ; ಅಲ್ಲಿ ಸಿದ್ಧೇಶ್ವರನ ದೇವಸ್ಥಾನ. ಭೀಮಾ ಹಾಗೂ ಪುಷ್ಪವತಿ ನದಿಗಳ ಸಂಗಮ ಸ್ಥಾನದಲ್ಲಿ ಪಶ್ಚಿಮದ್ವಾರ; ಅಲ್ಲಿ ಭುವನೇಶ್ವರಿಯ ಅಧಿಷ್ಠಾನ. ಭೀಮಾ ಹಾಗೂ ಭರಣೀ ನದಿಯ ಸಂಗಮಸ್ಥಾನದಲ್ಲಿ ಉತ್ತರದ್ವಾರ; ಅಲ್ಲಿ ದುರ್ಗಾದೇವಿ ನೆಲೆಸಿದ್ದಾಳೆ. ಈ ಊರಿನಲ್ಲಿ ಅನೇಕ ದೇವಾಲಯಗಳಿವೆ.
ಮಂದಿರಗಳು:-
ರುಕ್ಮಿಣೀ ಮಂದಿರ : ಗರ್ಭಗೃಹ, ಮಧ್ಯಗೃಹ, ಮುಖ್ಯಮಂಟಪ ಮತ್ತು ಸಭಾಮಂಟಪ - ಎಂದು ನಾಲ್ಕು ಭಾಗಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ರುಕ್ಮಿಣಿಯ ಮೂರ್ತಿ ಪೂರ್ವಾಭಿಮುಖವಾಗಿ ನಿಂತಿದೆ. ಈ ಮಂದಿರದಲ್ಲೆ ಸತ್ಯಭಾಮೆಗೂ ಒಂದು ಸಣ್ಣ ಮಂದಿರವಿದೆ. ಈ ಮಂದಿರದ ಅನಂತರದಲ್ಲಿ ಕಾಶೀ ವಿಶ್ವನಾಥ, ರಾಮಲಕ್ಷ್ಮಣ, ಕಾಲಭೈರವ, ರಾಮೇಶ್ವರಲಿಂಗ, ದತ್ತ ಮತ್ತು ನರಸೋಬಾ ಮಂದಿರಗಳಿವೆ. ಇಲ್ಲಿಂದ 16 ಕಂಬದ ಮಂಟಪಕ್ಕೆ ಹೋಗಲು ಒಂದು ಪ್ರತ್ಯೇಕ ದ್ವಾರವಿದೆ. ಇಲ್ಲಿಯೆ 84 ಲಕ್ಷ ಯೋನಿಗಳಿಂದ ಮುಕ್ತಗೊಳಿಸುವ ಪ್ರಸಿದ್ಧ ಶಿಲಾಲೇಖವಿದೆ. ಜನರ ಹಸ್ತ ಸ್ಪರ್ಶನದಿಂದ ಕಲ್ಲುಸವೆದು ನುಣಪಾಗಿದೆ; ಶಾಸನಸ್ಥ ವಿಷಯ ಅಳಿಸಿ ಮಾಯವಾಗಿಹೋಗಿದೆ.
ವಿಟ್ಠಲ ಹಾಗು ರುಕ್ಮಿಣೀ ಮಂದಿರಗಳಲ್ಲಿ ನಿತ್ಯ ಹಾಗೂ ನೈಮ್ತಿತ್ತಿಕ ಎಂಬ ಎರಡು ಬಗೆಯ ಪೂಜಾವಿಧಾನಗಳಿವೆ. ನವರಾತ್ರಿ, ದೀಪಾವಳಿ, ಯುಗಾದಿಯ ಹಬ್ಬಗಳಲ್ಲಿ ವಿಶೇಷ ಆಭರಣಗಳ ಅಲಂಕಾರವೂ ನಡೆಯುತ್ತದೆ.
ಪುಂಡಲೀಕ ಮಂದಿರ : ಇಲ್ಲಿ ಪುಂಡಲೀಕ, ತುಕಾರಾಮನ ವಂಶಜ ಬಾಹುಸಾಹೆಬ್ ದೇಹೂಕರ್, ಗೋವಿಂದ ಬುವಾ ಅಮಳನೇರ್‍ಕರ್, ಗೋವಿದಂಬುವಾ ಚೋಪಡೇಕರ್, ಭಾನುದಾಸ ಮಹಾರಾಜ ವೇಲಾಪುರಕರ್ ಮೊದಲಾದವರ ಸಮಾಧಿಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಇದರ ಮೇಲೆ ಪುಂಡಲೀಕನ ಮುಖವಾಡವನ್ನು ಇಟ್ಟಿರುತ್ತಾರೆ. ಇಲ್ಲಿ ಸುಮಾರು ಹನ್ನೊಂದು ಘಾಟ್‍ಗಳನ್ನು ಕಟ್ಟಿಸಿದ್ದಾರೆ. ಪುಂಡಲೀಕನ ಮಂದಿರದ ಎದುರಿನಲ್ಲಿ ನಿತ್ಯಾನಂದ ಪ್ರಭುವಿನ ಸಮಾಧಿಯಿದೆ. ಅದರಿಂದ ಕಿಂಚಿತ್ ದೂರದಲ್ಲಿ ಮಾಧ್ವಸಂಪ್ರದಾಯದವರ ಮಠವಿದೆ.
ವಿಷ್ಣು ಪದ : ಪುಂಡಲೀಕಮಂದಿರದಿಂದ ಸುಮಾರು 1ಮೈಲಿಯ ಅಂತರದಲ್ಲಿದೆ. ಇಲ್ಲಿ ಶ್ರೀಕೃಷ್ಣ ಪುಂಡಲೀಕನ ಜೊತೆ ಬಂದಿದ್ದು ಭೋಜನ ಮಾಡಿದುದಾಗಿಯೂ ಗೋವುಗಳನ್ನು ಮೇಯಿಸಿದುದಾಗಿಯೂ ಹೇಳುತ್ತಾರೆ.
ಗೋಪಾಲಪುರ : ಇಲ್ಲೊಂದು ಗೋಪಾಲಕೃಷ್ಣನ ದೇವಸ್ಥಾನವಿದೆ. ಇಲ್ಲಿಯ ವೇಣುಗೊಪಾಲನ ಮೂರ್ತಿ ಬಹುಸುಂದರವಾಗಿದೆ. ಈ ದೇವಾಲಯ ಪುಷ್ಪವತೀ ತೀರದಲ್ಲಿದೆ. ಕಾರ್ತೀಕಮಾಸದಲ್ಲಿ ಇಲ್ಲಿ ಜಾತ್ರೆ ಆಗುತ್ತದೆ. ಇಲ್ಲಿಯೇ ಭೀಮಕರಾಜನ ದೇವಗೃಹ ಹಾಗೂ ಜನಾಬಾಯಿಯ ಗುಹೆಗಳಿರುವುದು.
ಪದ್ಮತೀರ್ಥ : ಪದ್ಮಾವತಿಯ ದೇವಸ್ಥಾನವಿದೆ. ನಾಮದೇವ ಜ್ಞಾನೇಶ್ವರನನ್ನು ಭೇಟಿಯಾದದ್ದು ಇಲ್ಲಿಯೆಂದು ವದಂತಿ. ಪಾಂಡುರಂಗ ಅವರಿಬ್ಬರ ಕೈಯನ್ನೂ ಇಲ್ಲಿ ಕೂಡಿಸಿದುದಾಗಿ ಒಂದು ಅಭಂಗವಿದೆ.
ದಿಂಡೀರವನ : ಪಾಂಡುರಂಗ ಹಾಗೂ ರುಕ್ಮಿಣಿಯರ ಪ್ರೇಮಕಲಹ ಹಾಗೂ ಸಂಗಮಗಳ ಒಂದು ಪೌರಾಣಿಕ ಕಥೆಯನ್ನು ಈ ಕ್ಷೇತ್ರ ಸೂಚಿಸುತ್ತದೆ. ಇಲ್ಲಿ ಜನಾಬಾಯಿ ಗೋವುಗಳನ್ನು ಸಾಕಿದ್ದಳೆಂದೂ ಹೇಳುತ್ತಾರೆ.
ವ್ಯಾಸನಾರಾಯಣನ ಮಂದಿರ : ದಿಂಡೀರವನದಿಂದ ಸ್ವಲ್ಪ ಉತ್ತರಕ್ಕೆ ಹೋದರೆ ಈ ಮಂದಿರ ದೊರೆಯುತ್ತದೆ. ಇದನ್ನು ಜ್ಯೋತಿಪಂತ ದಾದಾ ಮಹಾಭಾಗವತ ಕಟ್ಟಿಸಿದ್ದಾನೆ. ಇಲ್ಲಿ ಭಾಗವತ ಪಾರಾಯಣ ಮಾಡುತ್ತಿದ್ದರಂತೆ.
ಕುಂಡಲತೀರ್ಥ : ದೈತ್ಯರೊಂದಿಗೆ ವಿಷ್ಣು ಯುದ್ಧ ಮಾಡುವ ಪ್ರಸಂಗದಲ್ಲಿ ಇಲ್ಲಿ ತನ್ನ ಕರ್ಣಕುಂಡಲಗಳನ್ನು ಕಳಚಿ ಇಟ್ಟುದೇ ಇದಕ್ಕೆ ಈ ಹೆಸರು ಬರಲು ಕಾರಣವಾಯಿತಂತೆ. ಇಲ್ಲಿ ನೃಸಿಂಹ ಮಂದಿರವೊಂದಿದೆ.
ಪುಂಡಲೀಕ:-
ಪುಂಡಲೀಕನು ಆರಂಭಿಕ ಕುಂಡಲಿನಿ ಯೋಗವನ್ನು ಅಭ್ಯಾಸ ಮಾಡಿದವರಲ್ಲಿ ಒಬ್ಬರು . ಅವರು ಕುಂಡಲಿನಿ ಯೋಗದ ಮಾಸ್ಟರ್ ಆಗಿದ್ದರಿಂದ ಜನರು ಅವನನ್ನು "ಕುಂಡಲಿಕ" ಎಂದು ಕರೆಯುತ್ತಿದ್ದರು. ನಂತರ, ಹಲವಾರು ವರ್ಷಗಳ ನಂತರ, ಕುಂಡಲೀಕನು ಪುಂಡಲೀಕನಾದನು. ಅವರು ಕುಂಡಲಿನಿ ಶಕ್ತಿಯನ್ನು ಭಗವಾನ್ ವಿಠ್ಠಲನ ರೂಪದಲ್ಲಿ ಸಂಕೇತಿಸಿದರು, ಇದನ್ನು ಪುಂಡಲೀಕ ಎಂಬ ಹೆಸರಿನ ನಂತರ ಪಾಂಡುರಂಗ ಎಂದು ಕರೆಯಲಾಗುತ್ತದೆ . ಪಂಢರಪುರದ ವಿಠ್ಠಲನು ವಿಷ್ಣು ಅಥವಾ ಕೃಷ್ಣನ ಅವತಾರ . ದಂತಕಥೆಗಳ ಪ್ರಕಾರ ಇದು ಕುಂಡಲಿನಿ ಶಕ್ತಿಯ ಸಂಕೇತವನ್ನು ಸಹ ಚಿತ್ರಿಸುತ್ತದೆ , ಆದಾಗ್ಯೂ ಆಧ್ಯಾತ್ಮಿಕವಾಗಿ, ಅದೇ ಶಕ್ತಿಯು ಎಲ್ಲರಲ್ಲಿಯೂ ನೆಲೆಸಿದೆ.
ANIMATION CREDIT:- Sutradhar Marathi
#Pandarpur,#Pandarapura,#Vittala,#Vittobha,##ಪಾಂಡುರಂಗ,#ವಿಠ್ಠಲ,#ರುಕ್ಮಿಣಿ,#ಪಂಡರಾಪುರ,#THROTTLEMANI,#punebikeride,#mumbaibikeride,#solotravelling,#vloginkannada,"VITTALARUKUMAI