Рет қаралды 91
ಸಾಯಿ ಮಂದಿರ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಹೋರಾಟವು ಕಲಬುರ್ಗಿಯ ಮಹಾನಗರ ಪಾಲಿಕೆಯ ಎದುರು ನಡೆಯಿತು.
ಈ ಸಂದರ್ಭದಲ್ಲಿ ಮಾನ್ಯ ಆಯುಕ್ತರು ಮನವಿ ಪತ್ರವನ್ನು ಸ್ವೀಕರಿಸಿ ನಂತರ ನಾಗರೀಕರೊಂದಿಗೆ ಸಭೆ ನಡೆಸಿ ಇನ್ನು 5 ದಿನದಲ್ಲಿ ಸರ್ವೆಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಚಾಲಕರಾದ ಕಾ. ಬಿ. ಭಗವಾನ್ ರೆಡ್ಡಿ ಅವರು ಹಾಗೂ ಕಾ. ವಿ. ಜಿ. ದೇಸಾಯಿಯವರು ನೇತೃತ್ವ ವಹಿಸಿದ್ದರು. 20 ಕ್ಕೂ ಹೆಚ್ಚು ಬದಲಾವಣೆಗಳಿಂದ ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.