ಶ್ರೀಹರಿ ಕಾಯೋ ಕರುಣಾನಿಧೇ|| ಖಗವರಗಮನ ಕರುಣಾನಿಧೇ|| ಜ್ಞಾನ ಧ್ಯಾನದ ನಿಜ ಸಾಧನವರಿಯೆ| ನೀನೆ ಗತಿಯೆನುತ ಮಾಡುವೆ ನಮನ|| ಘೋರ ಸಂಸಾರದಿ ತಾಪದಿ ನೊಂದೆ| ವಾರಿಭವಭಯಹರ ಅಘಕುಲಶಮನ|| ಗುರು ಮಹೀಪತಿ ಪ್ರಭು ಅನಾಥಬಂಧು| ಚರಣಕಮಲಗಳಲಿರಿಸೆನ್ನ ಮನವ||
Пікірлер
@kumarnv2512 ай бұрын
ಇವರುಗಳನ್ನು ತಯಾರು ಮಾಡಿದ ಗುರುಗಳಿಗೆ ನನ್ನ ಪ್ರಥಮ ಪ್ರಣಾಮಗಳು. ಅವರ ಹೆಸರನ್ನು ತಿಳಿಸಿ, ಇನ್ನಷ್ಟು ಸಂತೋಷ ಪಡುತ್ತೇನೆ. ದೊಡ್ಡ ಕಲಾವಿದರಾಗುವ ಎಲ್ಲಾ ಲಕ್ಷಣಗಳು ಇವರಿಗೆ ಇದೆ. ಶುಭವಾಗಲಿ🙏🙏