ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ ನೀನೆ ಗತಿಯಪ್ಪ, ನನಗೆ ನೀನೆ ಗತಿಯಪ್ಪ || ಅಂಧಕಾರದಲ್ಲಿ ಅಲೆದಾಡುತಲಿರುವೆ ಕಂಗಲಿದ್ದು ತಂದೆ ಏನು ಕಾಣದಿರುವೆ || ಏಕೆ ಇನ್ನು ದೇವ ಕರುಣೆ ತೋರದಿರುವೆ || ಬೆಳಕಿನೆಡೆಗೆ ನನ್ನಾ ಬೇಗ ನಡೆಸು ಪ್ರಭುವೆ ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ ನೀನೆ ಗತಿಯಪ್ಪ, ನನಗೆ ನೀನೆ ಗತಿಯಪ್ಪ || ಸಿರಿಯು ಬೇಕು ಎಂದು ಕೇಳಲಾರೆನಯ್ಯ ಸ್ವರ್ಗ ನೀಡು ಎಂದು ಬೇಡಲಾರೆನಯ್ಯ|| ಮುಕ್ತಿಗಾಗಿ ತಂದೆ ಕೈಯ ಚಾಚೆನಯ್ಯ || ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ || ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ ನೀನೆ ಗತಿಯಪ್ಪ, ನನಗೆ ನೀನೆ ಗತಿಯಪ್ಪ || ಕಂಗಳಲ್ಲಿ ನಿನ್ನಾ ಚರಣ ತುಂಬಿಕೊಳಲಿ ಮನಸ್ಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ || ಕಿವಿಗಳಲ್ಲಿ ನಿನ್ನಾ ಕೀರ್ತಿ ತುಂಬಿಕೊಳಲಿ || ಉಸಿರು ಉಸಿರಿನಲ್ಲೂ ನಿನ್ನಾ ನಾಮ ತುಂಬಿಕೊಳಲಿ || ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ ನೀನೆ ಗತಿಯಪ್ಪ, ನನಗೆ ನೀನೆ ಗತಿಯಪ್ಪ ||||
@Laxman-4.1992 Жыл бұрын
Nice songs i sending dubai
@anandamalipatil7629Ай бұрын
🙏🙏
@devendrappabajtre8927Ай бұрын
🙏🙏🎉🎉
@Surya-t8s8m11 ай бұрын
ಧನ್ಯವಾದಗಳು🙏🏻
@arunamoger4421 Жыл бұрын
Om namo bhakta pala lyrics
@RajeshnaikRaj-q2b Жыл бұрын
Hii😢❤🎉
@nayakchemist27422 ай бұрын
Swamiye Sharanam please can you script (wordings) in english so that person like me who can't read kannada can read and sing. All the bajan on your you tube🙏