ಈತ ಲಿಂಗದೇವ ಶಿವನು ಆತ ರಂಗಧಾಮ ವಿಷ್ಣು - ಹೆಳವನಕಟ್ಟೆ ಗಿರಿಯಮ್ಮ ॥ Helavanakatte Giriyamma॥

  Рет қаралды 11,494

BTV KANNADA CLASS

BTV KANNADA CLASS

Күн бұрын

ಈತ ಲಿಂಗದೇವ ಶಿವನು ಆತ ರಂಗಧಾಮ ವಿಷ್ಣು
*ಲೇಖಕರು-ಹೆಳವನಕಟ್ಟೆ ಗಿರಿಯಮ್ಮ
ಸ್ವೀಕೃತ ಮೂಲ :-
ಹೆಳವನಕಟ್ಟೆ ಗಿರಿಯಮ್ಮ .
*ಸಂಪಾದಕರು :ಬಿ.ವಿ. ವಿರಭದ್ರಪ್ಪ.
ತತ್ವಪದಕಾರ್ತಿಯ ಪರಿಚಯ:-
ಹೆಸರು:ಹೆಳವನಕಟ್ಟೆ ಗಿರಿಯಮ್ಮ
ಕಾಲ :ಕ್ರಿ.ಶ. ೧೭೫೦
ಸ್ಥಳ: ರಾಣೆಬೆನ್ನೂರು (ಹಾವೇರಿ ಜಿಲ್ಲೆ)
ತಂದೆ:- ಬಿಷ್ಟಪ್ಪ ,ತಾಯಿ:- ತುಂಗಮ್ಮ
ಈ ದಂಪತಿಗಳು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ತರುವಾಯ ತಿಮ್ಮಪ್ಪನ ಅನುಗ್ರಹದ ಸಂಕೇತದ ಫಲವಾಗಿ ಪಡೆದ ಹೆಣ್ಣು ಮಗುವಿಗೆ ಗಿರಿಯಮ್ಮ ಎಂದು ನಾಮಕರಣ ಮಾಡಿದರು. ಆಕೆ ಯಾವಾಗಲೂ ದೈವೋನ್ಮಾದ ಸ್ಥಿತಿಯಲ್ಲಿರುತ್ತಿದ್ದ ಭಾವುಕಳಾಗಿದ್ದರಿಂದ ಸಾಮಾನ್ಯ ಸ್ತ್ರೀಯರಂತೆ ಸಂಸಾರ ಸುಖವನ್ನು ಬಯಸದೆ, ದೇವರ ನಾಮ ಸಂಕೀರ್ತನೆ ಮತ್ತು ಕಾವ್ಯ ರಚನೆಯಲ್ಲಿ ತನ್ನ ಜೀವನ ಸಾರ್ಥಕತೆಯನ್ನು ಕಂಡುಕೊಂಡಳು.
ಹರಿದಾಸ ಪ್ರಮುಖರಲ್ಲಿ ಒಬ್ಬರಾದ ಗೋಪಾಲದಾಸರು ಮತ್ತು ಮಂತ್ರಾಲಯ ಮಠದ ಸುಮತೀಂದ್ರ ಸ್ವಾಮಿಗಳು ಗಿರಿಯಮ್ಮನ ಹಿರಿಯ ಸಮಕಾಲೀನರಾಗಿದ್ದರು ಎಂದು ತಿಳಿಸುವ ಐತಿಹ್ಯಗಳಿವೆ . ಈಕೆಯ ಕೃತಿಗಳ ಮೇಲೆ ಲಕ್ಷ್ಮೀಶ ಕವಿಯ ಪ್ರಭಾವವಿರುವದು ಸ್ಪಷ್ಟವಿದೆ (ಚಂದ್ರಹಾಸನ ಕಥೆ). ಗಿರಿಯಮ್ಮ ಭಾಗವತ ಸಂಪ್ರದಾಯದ ಸ್ಮಾರ್ತ ಮನೆತನಕ್ಕೆ ಸೇರಿದವಳು. ಆಕೆ ಹರಿದಾಸ ಪಂಥಕ್ಕೆ ಸೇರಿದ ಸಂತಳಾದರು ಹರಿಹರ ಪ್ರಾಂತದ ವೈಶಿಷ್ಟ್ಯವೋ ಎಂಬಂತೆ ಹರಿ-ಹರರಲ್ಲಿ ಭೇದವನ್ನ ಎಣಿಸದ ಸದ್ಭಕ್ತೆ. ಆಕೆ ಹೆಳವನ ಕಟ್ಟೆಯ.... ಮೈಲಾರಲಿಂಗ ,ಹರಿಹರ ತಾಲ್ಲೂಕು ಕೊಕ್ಕನೂರು ಆಂಜನೇಯ ಸ್ವಾಮಿ, ಶಿವಮೊಗ್ಗ ಜಿಲ್ಲೆಯ ಪಿಳ್ಳಂಗಿರಿಯ ರಂಗನಾಥ, ದಾಗಿನ ಕಟ್ಟೆಯ ನರಸಿಂಹಸ್ವಾಮಿ ದೇವರಗಳನ್ನು ಕುರಿತು ಸಹ ಕೀರ್ತನೆಗಳನ್ನು ರಚಿಸಿದ್ದಾಳೆ.
ಭಕ್ತಿ ತಪಸ್ಸುಗಳಿಂದ ಪರಿಪಾಕಗೊಂಡ ಆಕೆಯ ಹೃದಯದಿಂದ ಕಾವ್ಯ ದೇವಿ ಪ್ರಕಟವಾದಳು.ಆಕೆಯ ವಾಣಿಯಿಂದ ಸುಮಧುರ ದೇವರನಾಮಗಳು.ಸರಸ ಕವಿತೆಗಳು ಸತತವಾಗಿ ಹೊರಹೊಮ್ಮಿದವು.
ಉದ್ದಾಳಿಕನ ಕಥೆ, ಬ್ರಹ್ಮಕೊರವಂಜಿ,
ಶಂಕರ ಗಂಡನ ಹಾಡು, ಚಂದ್ರಹಾಸನ ಕಥೆ, ಲವ-ಕುಶರ ಕಾಳಗ, ಕೃಷ್ಣಕೊರವಂಜಿ, ...ಇವು ಹೆಳವನ ಕಟ್ಟೆ ಗಿರಿಯಮ್ಮನಿಂದ ರಚಿತವಾದ ಕಥನ ಕಾವ್ಯಗಳು".
ಪಠ್ಯದ ಆಶಯ:-

ಈತ ಲಿಂಗದೇವ ಶಿವನು
ಆತ ರಂಗಧಾಮ ವಿಷ್ಣು
ಮಾತ ಕೇಳೋ ಮಂಕು ಮನುಜ
ಮನದ ಅಹಂಕಾರ ಬಿಟ್ಟು.
ಸ್ವಾರಸ್ಯ:-
ಹರಿ-ಹರರಲ್ಲಿ ಭೇದ ಭಾವವನ್ನು ತೋರದೆ ಇಬ್ಬರ ಗುಣಗಾನವನ್ನು ಸಮಾನವಾಗಿ ಮಾಡಲಾಗಿದೆ. ಈ ಹಾಡಿನಲ್ಲಿ ಹರನ ಹೆಸರು ಮೊದಲು ಹರಿಯ ಹೆಸರು ಆನಂತರ ಬಂದಿದೆ. "ಹರಿ-ಹರರಲ್ಲಿ" ಭೇದಭಾವವನ್ನು ಎಣಿಸದೆ ಸಮಾನವಾಗಿ ಕಾಣಬೇಕು ಎಂಬ ಭಾವದೊಂದಿಗೆ,ಮನುಷ್ಯ ಹರಿ-ಹರರಲ್ಲಿ ಭೇದ- ಭಾವ ತೋರದೇ, ಮನಸ್ಸಿನ ಅಹಂಕಾರ ಬಿಟ್ಟು ಸಮನ್ವಯತೆಯಿಂದ ಜೀವಿಸಬೇಕು ಎಂಬ ಭಾವ ವ್ಯಕ್ತವಾಗಿದೆ.

ವೇದಕ್ಕೆ ಸಿಕ್ಕಿದನೀತ
ವೇದನಾಲ್ಕು ತಂದನಾತ
ಬೂದಿ ಮೈಯ್ಯೋಳು ಧರಿಸಿದನೀತ
ಪೋದಗಿರಿಯ ಪೋತ್ತನಾತ.
ಸ್ವಾರಸ್ಯ:-
ಶಿವನನ್ನು ವೇದ ಪ್ರಿಯನು ಎಂದು ಕರೆಯುತ್ತಾರೆ, ಹಾಗಾಗಿ ಆತ ವೇದಕ್ಕೆ ಸಿಕ್ಕಿದ. ವಿಷ್ಣು - ೧]ಋಗ್ವೇದ ,೨]ಯಜುರ್ವೇದ ೩]ಸಾಮವೇದ ,೪]ಅಥರ್ವರ್ಣವೇದ ಈ ನಾಲ್ಕು ವೇದಗಳನ್ನು ಭೂಮಿಗೆ ತಂದ ಎಂಬ ನಂಬಿಕೆ ಇದೆ. ಅದೇ ರೀತಿ ಬೂದಿಯನ್ನು ಮೈಯಲ್ಲಿ ಧರಿಸಿದ ಶಿವನ ಸ್ವರೂಪವನ್ನು ಕಾಣಬಹುದು. ಇಲ್ಲಿ ಬಹು ಮುಖ್ಯವಾಗಿ.. ಕೂರ್ಮಾವತಾರದಲ್ಲಿ ( ವಿಷ್ಣುವಿನ 'ಎರಡನೆ' ಅವತಾರ) ಅಮೃತಕ್ಕಾಗಿ ದೇವ ಸುರರು ಕ್ಷೀರ ಸಮುದ್ರವನ್ನು ಕಡೆಯುತ್ತಿದ್ದಾಗ ಕಡೆಗೋಲಾಗಿದ್ದ ಮಂದಾರ ಪರ್ವತವು ಭಾರದಿಂದ ಮುಳುಗಲಾರಂಬಿಸಿತು ಆಗ...
ಹರಿ ಕೂರ್ಮಾವತಾರ ಹೊಂದಿ ಮಂದಾರ ಪರ್ವತವನ್ನು ತನ್ನ ಬೆನ್ನ ಮೇಲೆ ಹೊತ್ತು ನಿಂತು ಸಮುದ್ರ ಮತನಕ್ಕೆ ನೆರವಾದನು ಹಾಗಾಗಿ ವಿಷ್ಣುವನ್ನು"ಪೋದಗಿರಿಯ ಪೋತ್ತನಾತ" ಎಂಬುದಾಗಿ ಸ್ಮರಿಸಲಾಗಿದೆ.

ವ್ಯಾಧನಾಗಿ ಒಲಿದನೀತ
ಮಾಧವ ಮಧುಸೂದನನಾತ
ಮದನನ್ನ ಉರಿಹಿದನೀತ
ಮದನನಪಡೆದಾತನಾತ.
ಸ್ವಾರಸ್ಯ:-
ಶಿವನು "ಕಿರಾತಾರ್ಜುನೀಯ" ಪ್ರಸಂಗದಲ್ಲಿ ಕಿರಾತನವೇಷದಲ್ಲಿ ಬಂದು, ಅರ್ಜುನನ ಶೌರ್ಯ ಪರಾಕ್ರಮಗಳನ್ನು ಪರೀಕ್ಷಿಸಿ, ಆತನ ಶೌರ್ಯಕ್ಕೆ ಮನಸೋತು ಪಾಶುಪತಾಸ್ತ್ರವನ್ನು ಕೊಡುವುದರೊಂದಿಗೆ
(ಒಬ್ಬ ಬೇಟೆಗಾರನ ವೇಷದಲ್ಲಿ ಬಂದು ಅರ್ಜುನನೊಂದಿಗೆ ಕಾದಾಡಿ) ಒಲಿಯುತ್ತಾನೆ.
ಹರಿ ಶ್ರೀಕೃಷ್ಣನ..
(ವಿಷ್ಣುವಿನ'೦೮' ನೇ)ಅವತಾರವನ್ನು ತಾಳಿ ಮಧುಸೂದನನಾಗಿ ಸ್ತೀಯರ ಗೋಕುಲದಲ್ಲಿ ಕಾಣುತ್ತಾನೆ.
ಶಿವನ ತಪಸ್ಸನ್ನು ಭಂಗ ಮಾಡಿದ ಕಾರಣ ಮೂರನೆಯ ಕಣ್ಣಿಂದ ಶಿವ "ಮನ್ಮಥನನ್ನ" ಸುಟ್ಟು ಹಾಕುತ್ತಾನೆ. ಆದರೆ ಅದೇ *ಮನ್ಮಥನಿಗೆ ಶ್ರೀಕೃಷ್ಣ ಜನ್ಮಧಾತ*.

ಗಂಗೆಯ ಪೊತ್ತವನೀತ
ಗಂಗೆ ಪದದಿ ಪಡೆದನಾತ
ತುಂಗ ಹೆಳವನಕಟ್ಟೆ
ಲಿಂಗ ಅಂತರಂಗ ರಂಗನಾಥ.
ಸ್ವಾರಸ್ಯ:-
ಶಿವನು ಗಂಗೆಯನ್ನು ಭೂಮಿಗೆ ತಂದು,ಗಂಗೆಯನ್ನೆ ತನ್ನ ಮುಡಿಯಲ್ಲಿ ಹೊತ್ತಿರುವ ಶಿವ ಗಂಗಾಧರ ಎಂಬ ಪದದಿಂದ ಬಿರುದಾಂಕಿತನಾದ. ಹೆಳವನ ಕಟ್ಟೆ ಗಿರಿಯಮ್ಮ"
ನವರು ತಾಯಿ ತುಂಗಮ್ಮನನ್ನು ಹಾಗೂ ತನ್ನ ಅಂತರಂಗದಲ್ಲಿ ಹರಿ-ಹರರನ್ನು ಸ್ಮರಿಸುವ ಮೂಲಕ ಭಕ್ತಿ ಸಮನ್ವಯತೆಯಿಂದ ಶ್ರೇಷ್ಠಳು ಎನಿಸಿರುವರು.
"ಈತ ಲಿಂಗದೇವ ಶಿವನು ಆತ ರಂಗಧಾಮ" ಎಂಬ ಪ್ರಸ್ತುತ ಕವಿತೆಯನ್ನು ಬಿ .ವಿ .ವೀರಭದ್ರಪ್ಪನವರು* ಸಂಪಾದಿಸಿದ *"ಹೆಳವನಕಟ್ಟೆ ಗಿರಿಯಮ್ಮ"*ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಬಾಲ್ಯದಿಂದಲೂ ಶ್ರೀರಂಗನಾಥನ ಪರಮ ಭಕ್ತೆಯಾದ ಗಿರಿಯಮ್ಮನವರು."ಹರಿ ಮತ್ತು ಹರ "ಇಬ್ಬರನ್ನು ಸಮಾನವಾಗಿ ಕಂಡವರು.
ಭಾರತೀಯ ಧಾರ್ಮಿಕ ಪರಿಸರದಲ್ಲಿ ಉಂಟಾದ ಶೈವ ಮತ್ತು ವೈಷ್ಣವ ಸಂಸ್ಕೃತಿಯ ನಡುವಿನ ಸಂಘರ್ಷವನ್ನು ಮೆಟ್ಟಿನಿಂತು ಈ ಎರಡು ಧಾರ್ಮಿಕ ಪರಂಪರೆಯ ನಡುವೆ.ಸಮನ್ವಯತೆ ಸಾಧಿಸುವ ಪ್ರಯತ್ನವನ್ನು ತಮ್ಮ
ತತ್ವಪದಗಳಲ್ಲಿ ಕೈಗೊಂಡವರು ಹೀಗಾಗಿ .*"ಧಾರ್ಮಿಕ ಸಮನ್ವಯವೇ"* ಪ್ರಸ್ತುತ ಪಠ್ಯದ ಆಶಯವಾಗಿದೆ.

Пікірлер: 7
@mysetryofworld2648
@mysetryofworld2648 Ай бұрын
Tq sir
@Life-soul76
@Life-soul76 Жыл бұрын
Thank You Sir 🙏
@B.Scnotes
@B.Scnotes Жыл бұрын
thank you so much sir.....
@veenabadiger6499
@veenabadiger6499 11 ай бұрын
Thank you so much sir🎉❤
@bindug5317
@bindug5317 3 ай бұрын
Well explained 👏👌Thank you
@amruthagowda07
@amruthagowda07 Жыл бұрын
Tqu sir❤
@aks1786
@aks1786 Жыл бұрын
Soo helpful 🥰tqs
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 2,2 МЛН
Magic or …? 😱 reveal video on profile 🫢
00:14
Andrey Grechka
Рет қаралды 68 МЛН
Пришёл к другу на ночёвку 😂
01:00
Cadrol&Fatich
Рет қаралды 6 МЛН
ತುಳಿಯುವವರ ಮಧ್ಯೆ ಬೆಳೆಯುವುದು ಹೇಗೆ?
20:53