Рет қаралды 7,356
YT : ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿಯೇ ನಡೆಯುತ್ತಿದೆ. ದೆಹಲಿಯಲ್ಲಿ ಬೀಡು ಬಿಟ್ಟಿರೋ ರೆಬೆಲ್ ಟೀಮ್ ಸರ್ಕಸ್ ನಡೆಸುತ್ತಿದೆ. ವಿಜಯೇಂದ್ರ ಬದಲಾವಣೆ ಮಾಡಲೇಬೇಕು ಎಂದು ಪಟ್ಟು ಹಿಡಿದು ವರಿಷ್ಠರ ಭೇಟಿಗೆ ಕಾಯುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ. ಯತ್ನಾಳ್ ಟೀಮ್‌ನಲ್ಲಿ ಜಿ.ಎಂ. ಸಿದ್ದೇಶ್ವರ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ರಮೇಶ್ ಸೇರಿ ಅನೇಕರು ಈಗಾಗಲೇ ದೆಹಲಿ ಕಳೆದೆರಡು ದಿನಗಳಿಂದ ವರಿಷ್ಠರ ಭೇಟಿಗೆ ಸಿದ್ಧರಾಗಿದ್ದಾರೆ. ಶತಾಯಗತಾಯ ವಿಜಯೇಂದ್ರ ಬದಲಾವಣೆ ಆಗಲೇಬೇಕು ಎಂದು ಪಟ್ಟು ಹಿಡಿದು ದೆಹಲಿಯಲ್ಲೇ ಅಂತಿಮ ತೀರ್ಮಾನ ಮಾಡಿ ಬರೋ ಲಕ್ಷಣಗಳು ಕಾಣುತ್ತಿವೆ. ಇತ್ತ ವಿಜಯೇಂದ್ರ ಬಣ ಕೂಡ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದು, ರೇಣುಕಾಚಾರ್ಯ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿ ಹಲವರು ಒತ್ತಾಯ ಮಾಡುತ್ತಿದ್ದಾರೆ. ಇತ್ತ ಈ ಬಣಗಳು ಕೂಡ ಸಭೆ ಮೇಲೆ ಸಭೆ ಮಾಡಿ ಯತ್ನಾಳ್ ಟೀಮ್‌ಗೆ ಸೆಡ್ಡು ಹೊಡೆದಿದೆ. ಬಿಜೆಪಿ ಹಿರಿಯ ನಾಯಕರು ಕೂಡ ವಿಜಯೇಂದ್ರ ಬದಲಾವಣೆ ಮಾಡಿ ಇಲ್ಲವಾದಲ್ಲಿ ರಾಜ್ಯದಲ್ಲಿ ಬಿಜೆಪಿಯ ಸ್ಥಿತಿ ಕಷ್ಟವಾಗುತ್ತಿದೆ ಎಂದು ಹೈಕಮಾಂಡ್‌ಗೆ ದೂರು ನೀಡಿದ್ದಾರೆಂದು ಮೂಲಗಳು ಹೇಳುತ್ತಿವೆ. ಒಟ್ಟಾರೆಯಾಗಿ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹಗಳಿಗೆ ಹೈಕಮಾಂಡ್ ಮುಕ್ತಿ ಸಿಗುತ್ತಾ ಕಾದುನೋಡಬೇಕಿದೆ....