Рет қаралды 1,723
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರೋ ಮಹಾಜಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆ ದಿನ ಕಾಲ್ತುಳಿತ ಉಂಟಾಗಿದೆ. ಮೌನಿ ಅಮಾವಾಸ್ಯೆಯ ದಿನ ಸಹಸ್ರಾರು ಭಕ್ತಾದಿಗಳು ಪುಣ್ಯ ಸ್ನಾನಕ್ಕೆ ಮುಗಿಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ. ಬೆಳಗಿನ ಜಾವ ಸುಮಾರು 1-2 ಗಂಟೆಯ ಅವಧಿಯಲ್ಲಿ ಈ ಘನಟೆ ನಡೆದಿದ್ದು, ಈ ಕಾಲ್ತುಳಿದಿಂದ ಸುಮಾರು 30 ಜನ ಸಾವೀಗೀಡಾಗಿದ್ದಾರೆ. ದುರಾದೃಷ್ಟವಶಾತ್ ರಾಜ್ಯದ ನಾಲ್ಕು ಮಂದಿ ಕೂಡ ಸಾವೀಗೀಡಾಗಿದ್ದಾರೆ. ಪ್ರಯಾಗ್‌ರಾಜ್‌ಗೆ ತೆರಳಿದ್ದ ಬೆಳಗಾವಿಯ ನಾಲ್ವರು ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಇನ್ನೂ ರಾಜ್ಯದ ಎಂಟು ಜನ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಭಕ್ತರೆಲ್ಲರೂ ಕೂಡ ಗಂಗಾನದಿಯಲ್ಲಿ ಸ್ನಾನ ಮಾಡಬೇಕು, ಸಂಗಮದಲ್ಲಿ ಜನರ ದಟ್ಟಣೆ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಕೂಡಲೇ ಎಲ್ಲಾ ಸಾಧು ಸಂತರ ಮುಖ್ಯಸ್ಥರ ಜೊತೆ ಮಾತನಾಡಿ ಪುಣ್ಯಸ್ನಾನ ಹಾಗೂ ಜನರ ಸುರಕ್ಷತೆ ಒದಗಿಸಲು ಸೂಚನೆ ನೀಡಲಾಗಿದೆ ಎಂದು ಯೋಗಿ ಆದಿತ್ಯನಾಥ ತಿಳಿಸಿದ್ದಾರೆ. ಇನ್ನೂ ಪ್ರಯಾಗ್ ರಾಜ್‌ನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ಮಾಡಲು ಸೂಚನೆ ನೀಡಲಾಗಿದೆ.