Рет қаралды 9,021
ವೃದ್ಧ ರೈತರೊಬ್ಬರಿಗೆ ಸಾಗುವಳಿ ಚೀಟಿ ನೀಡಲು ಚನ್ನಪಟ್ಟಣ ತಾಲೂಕು ಕಚೇರಿಯ ಅಧಿಕಾರಿಗಳು ಬರೋಬ್ಬರಿ 8 ವರ್ಷ ಓಡಾಡಿಸಿರುವ ಪ್ರಕರಣ ಇಂದಿನ ದಿಢೀರ್ ಭೇಟಿ ವೇಳೆ ತಿಳಿದುಬಂದಿದೆ. ರೈತರ ಬಗೆಗಿನ ಅಧಿಕಾರಿ ವರ್ಗದ ಈ ಉಡಾಫೆ ವರ್ತನೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಚಿನ ಕ್ರಮದ ಬಗ್ಗೆ ಸ್ಥಳದಲ್ಲೇ ಎಚ್ಚರಿಸಲಾಯಿತು. ಅಲ್ಲದೆ, ಇನ್ನಾದರೂ ಜನಸ್ನೇಹಿ ಸೇವೆ ನೀಡುವಂತೆಯೂ ತಾಕೀತು ಮಾಡಲಾಯಿತು.