ಅಷ್ಟ ಮಂಗಲದಲ್ಲಿ ಗೋಚರವಾಗುವ ಪ್ರಶ್ನೆ ಗಳಿಗೆ ಪೃಚ್ಕಕರ ಅನುಭವ ದಿಂದ ವಿಶ್ಲೇಷಿಸಿ ದೇಶ ಕಾಲ ಕುಟುಂಬ ಪರಂಪರೆಯ ಕ್ರಮಕ್ಕೆ ಕುಂದು ಬಾರದ ರೀತಿ ಉತ್ತರ ಗಳನ್ನು ಕಂಡುಕೊಳ್ಳಲಾಗುತ್ತದೆ.ಕೆಲವು ಕುಟುಂಬದ ಮನೆಯವರು ದೈವ ವಿಚಾರ ಆಚರಣೆ ಯಲ್ಲಿ ಮಾಡುತ್ತಿದ್ದ ಮೌಢ್ಯ ಗಳೂ ತಪ್ಪು ಕ್ರಮಗಳೂ ಅಷ್ಟಮಂಗಲ ದಲ್ಲಿ ಚರ್ಚೆಯಾಗಿ ವ್ಯವಸ್ಥೆ ಸರಿಯಾದದ್ದು ಇದೆ.ಹೀಗಾಗಿ ಎಲ್ಲಾ ಅಷ್ಟಮಂಗಲಗಳೂ ಸರಿ ಅಲ್ಲ ಎನ್ನುವುದು ತಪ್ಪು.ಸಂಶೋಧನಾ ಶಾಸ್ತ್ರ ದಂತೆ ಅದೂ ಒಂದು ಶಾಸ್ತ್ರ.