Рет қаралды 3,569
ಅನುಮೋದನೆಯಾಗದ ಸ್ವತ್ತಿಗೆ ಖಾತಾ ಇಲ್ಲ: ಬಿಬಿಎಂಪಿ ಸುತ್ತೋಲೆ
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ಸ್ವತ್ತುಗಳಿಗೆ ಯಾವುದೇ ರೀತಿಯ ಖಾತಾ ನೀಡದಂತೆ ಸುತ್ತೋಲೆ ಹೊರಡಿಸಲಾಗಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ 1961ರ ಪ್ರಕರಣ 17ಕ್ಕೆ ತಿದ್ದುಪಡಿಯಾಗಿದ್ದು, ಅದರಂತೆ ಏಕ ನಿವೇಶನವೂ ಸೇರಿದಂತೆ ಎಲ್ಲ ಸ್ವತ್ತುಗಳಿಗೂ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇಂತಹ ಅನುಮೋದನೆ ಪಡೆಯದ ಸ್ವತ್ತುಗಳಿಗೆ ಬಿಬಿಎಂಪಿ, ಯಾವುದೇ ಎ-ಖಾತಾ ದಾಖಲಿಸಲು, ನೋಂದಾಯಿಸಲು ಅವಕಾಶವಿರುವುದಿಲ್ಲ ಎಂದು ಸುತ್ತೋಲೆ ಹೊರಡಿಸಲಾಗಿದೆ