Рет қаралды 685,214
ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್ ಗುರೂಜಿ
ಮಕ್ಕಳಿಗೆ ಜನ್ಮ ನೀಡುವ ಪ್ರತಿಯೊಬ್ಬ ಪೋಷಕರಲ್ಲಿ ಒಬ್ಬ ಅತ್ಯುತ್ತಮ ಶಿಕ್ಷಕನಿರುತ್ತಾನೆ. ಅದನ್ನು ಸರಿಯಾಗಿ ಯಾರು ತನ್ನಲ್ಲಿ ಅಳವಡಿಸಿಕೊಳ್ಳುತ್ತಾನೋ ಅವನು ನಿಜವಾಗಿಯೂ ಉತ್ತಮ ತಂದೆ-ತಂದೆಯಾಗಿ ಕಾಣುತ್ತಾನೆ. ಮಕ್ಕಳಿಗೆ ಜನ್ಮ ನೀಡುವುದು ಮಾತ್ರವಲ್ಲ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುವುದು ಸಹ ಒಂದು ಅಚ್ಚರಿಯ ಕೆಲಸವಾಗಿರುತ್ತದೆ. ಹಿಂದೆ ಹೇಳಿದ ಹಾಗೆ ಮನೆಯೇ ಮೊದಲ ಪಾಠ ಶಾಲೆ ಎಂದು ಹಿರಿಯರು ಸುಮ್ಮನೆ ನುಡಿದಿಲ್ಲ ಪ್ರತಿಯೊಬ್ಬ ಮಗುವು ತನ್ನ ಬಾಲ್ಯವನ್ನು ಉತ್ತಮವಾಗಿ ಕಳೆಯಲು ಇಷ್ಟ ಪಡುತ್ತದೆ. ಅಲ್ಲದೆ ಮುಂದೆ ಸಮಾಜಕ್ಕೆ ವನು ಉತ್ತಮವಾದ ಪ್ರಜೆಯಾಗಬೇಕು ಎಂದರೆ ಮೊದಲು ನಾವು ಅವನಿಗೆ ಸರಿಯಾದ ಮಾರ್ಗದ ದರ್ಶನವನ್ನು ನೀಡಬೇಕು. ಆದರೆ ಇಂದು ನಾವು ಅದೆಲ್ಲವನ್ನು ಬಿಟ್ಟು ಹಣದ ಹಿಂದೆ ಓಡಿ ಆಸ್ತಿಯನ್ನು ಮಾಡುವುದರಲ್ಲಿ ಇಡೀ ನಮ್ಮ ಸಂತೋಷದ ಜೀವನವನ್ನು ಕಳೆಯುವುದನ್ನು ನಾಶಮಾಡಿಕೊಳ್ಳುತ್ತಿದ್ದೇವೆ. ಮುಂದೆ ನಮ್ಮ ಮಕ್ಕಳು ಯಾವ ತೊಂದರೆಯನ್ನು ಅನುಭವಿಸಬಾರದು ಎಂದು ಮೊದಲು ನಮ್ಮ ಅವಶ್ಯತೆಗೂ ಮೀರಿ ಆಸ್ತಿ ಮಾಡಿ ಅವರನ್ನು ತಪ್ಪು ದಾರಿಯಲ್ಲಿ ನಾವೇ ತಳ್ಳುತ್ತಿದ್ದೇವೆ ಇದನ್ನೆಲ್ಲ ನಾವು ಕಡಿಮೆಗೊಳಿಸಬೇಕಿದೆ. ಅವರಿಗೆ ಜೀವನದ ಮೌಲ್ಯದ ಪರಿಚಯವನ್ನು ಮಾಡಿಸಬೇಕಿದೆ.- ಅವಧೂತ ಶ್ರೀ ವಿನಯ್ ಗುರೂಜಿ