Рет қаралды 1,106
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್
ಭಜಿಸಿ ಬದುಕು ನಿತ್ಯ ವಿಜಯದಾಸರ ಪಾದ
ರಜವ ಸೇವಿಸೋ ಭಾಗ್ಯ ನಿಜವೊ ನಿಜವೊ ||ಪ||
ಕಾಮಧೇನುವ ಕಂಡು ಕರೆದು ಕೊಂಡಂತೆನ್ನ
ಗ್ರಾಮಗೋವಿನಪಾಲು ಕರೆಕೊಂಬಿ ವಿಹಿಯನ
ತಾಮರಸಬಂಧು ಕಂಡು ತಮಸುಹರಿದಂತೆ
ಧೂಮ ಪೊರಡುವ ಉರಿಗೆ ತಮವು ಓಡುವುದೆ ||೧||
ಕಲ್ಪವೃಕ್ಷವ ಕಂಡು ಬೇಡಿದ್ದು ಕೊಡುವಂತೆ
ವಳ್ವ ಮುಂತಾದ ಗಿಡ ಕೊಡಬಲ್ಲುವೆ
ಕಲ್ಪಾಯು ಕೊಡುವ ಚಿಂತಾಮಣಿಯು ಕೊಡುವಂತೆ
ಅಲ್ಪ ಚಿಂತ್ರಣಿಬೀಜ ಅದು ತಾ ಕೊಡುವುದೆ ||೨||
ಹಲವು ಸಾಧನಮಾಡಿ ಬಳಲಲಿನ್ಯಾಕೆ ನೀ
ನಿಲಿಸು ನಿಗಮಗಳ ಧ್ಯಾಸ ನಿಜಮನಕೆ
ತಿಳಕೊ ಇವರೇ ನಿನಗೆ ಗತಿಪೊಂದಿಪುದಕೆ
ಒಲಿವ ಗೋಪಾಲವಿಠಲ ಸಂಶಯವಿಲ್ಲಿದಕೆ
bhajisi baduku nitya vijayadaasara paada
rajava sEvisO bhaagya nijavo nijavo ||pa||
kaamadhEnuva kaMDu karedu koMDaMtenna
graamagOvinapaalu karekoMbi vihiyana
taamarasabaMdhu kaMDu tamasuharidaMte
dhUma poraDuva urige tamavu ODuvude ||1||
kalpavRukShava kaMDu bEDiddu koDuvaMte
vaLva muMtaada giDa koDaballuve
kalpaayu koDuva ciMtaamaNiyu koDuvaMte
alpa ciMtraNibIja adu taa koDuvude ||2||
halavu saadhanamaaDi baLalalinyaake nI
nilisu nigamagaLa dhyaasa nijamanake
tiLako ivarE ninage gatipoMdipudake
oliva gOpaalaviThala saMSayavillidake