Рет қаралды 540
#rajeshhaleangadi#billavassaudhiarbiariyadh#svchaleangadi#bolpumedia
BILLAVA ASSOCIATION SAUDI ARABIA,RIYADH/SCHOLARSHIP DISTRIBUTION AT MULKI
ಬಿಲ್ಲವ ಎಸೋಸಿಯೇಶನ್ ಸೌದಿ ಅರೇಬಿಯಾ, ರಿಯಾದ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಮುಲ್ಕಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಶ್ರೀ ಜಯ ಸುವರ್ಣ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಸಮಾಜದಲ್ಲಿನ ಸಾಧಕರಿಗೆ ಗುರುತಿಸಿ ಗೌರವಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯ, ಜನ್ಮ ಭೂಮಿಯಿಂದ ಕರ್ಮ ಭೂಮಿಗೆ ಹೋದರೂ ನಮ್ಮ ತಾಯಿನಡಿನ ಬಗ್ಗೆ ಅಭಿಮಾನ ಹೊಂದಿದ್ದಾರೆ ಎಂದರು
ಮಾಜೀ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಸಂಘಟನೆಯಿಂದ ಬಲಯುತರಾಗಿ ವಿದ್ಯಾರ್ಜನೆಯಿಂದ ಸ್ವತಂತ್ರರಾಗಿ ಎಂದರು. ರಾಷ್ಟ್ರೀಯ ಬಿಲ್ಲವರ ಮಹಾಮಂಡಳದ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್ ಉದ್ಘಾಟಿಸಿದರು ಅಧ್ಯಕ್ಷತೆಯನ್ನುಸೌದಿ ಅರೇಬಿಯಾ ಬಿಲ್ಲವ ಎಸೋಸಿಯೇಷನ್ ಅಧ್ಯಕ್ಷ ಕೆ ಸಿ ಭಾಸ್ಕರ್ ವಹಿಸಿದ್ದರು. ಮುಂಬೈ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಚೇರ್ಮನ್ ಸೂರ್ಯಕಾಂತ ಜಯ ಸುವರ್ಣ, ಮಂಗಳೂರು ಎ.ಜೆ.ಇನ್ಸ್ಟಿಟ್ಯೂಟ್ ಮೆಡಿಕಲ್ ಸೈನ್ಸ್ ವಿಭಾಗದ ಪ್ರೊಫೆಸರ್ ಡಾ. ಕಿರಣ್ ಕುಮಾರ್ ಪಿಕೆ,ರಾಷ್ಟ್ರೀಯ ಬಿಲ್ಲವರ ಮಹಾಮಂಡಳದ ಕಾರ್ಯದರ್ಶಿ ಗಂಗಾಧರ ಪೂಜಾರಿ ಬಾಳ ಮತ್ತಿತರರು ಉಪಸ್ಥಿತರಿದ್ದರು
ಮಲ್ಲಿಕಾ ರಕ್ಷಿತ್ ಅತ್ತಾವರ ಸ್ವಾಗತಿಸಿದರು, ಕಿರಣ್ ನಿರಂಜನ್ ಪ್ರಸ್ತಾವನೆಗೈದರು, ಪದ್ಮಾ ಪೂಜಾರಿ ಒಡಿಲ್ನಾಳ ನಿರೂಪಿಸಿದರು.
ಬಳಿಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಿತು