Рет қаралды 12,402
ಚನ್ನಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಬಗೆಯ ಗೊಂಬೆಗಳು ಸಿದ್ಧವಾಗುತ್ತವೆ.
ಈ ಗೊಂಬೆಗಳ ಉದ್ಯಮಕ್ಕೆ ಮೂರು ಶತಮಾನಗಳ ಇತಿಹಾಸವಿದೆ. ಟಿಪ್ಪುಸುಲ್ತಾನನ ಕಾಲದಿಂದಲೂ ಇಲ್ಲಿ ಗೊಂಬೆಗಳ ಉದ್ಯಮ ಬೆಳೆದು ಬಂದಿದೆ. ಟಿಪ್ಪುಸುಲ್ತಾನನು ಸ್ಥಳೀಯ ಕರಕುಶಲಕರ್ಮಿಗಳಿಗೆ ಮರದಗೊಂಬೆಗಳ ತಯಾರಿಕೆಯನ್ನು ಕಲಿಸಿಕೊಡಲು ಪರ್ಶಿಯಾದಿಂದ ಕುಶಲಕರ್ಮಿಗಳನ್ನು ಕರೆಸಿದ್ದನು. 1759-1799ರಲ್ಲಿ ಪರ್ಷಿಯಾದ ಕುಶಲಕರ್ಮಿಗಳಿಂದ ಈ ಕಲೆ ಪರಿಚಯವಾಯಿತು. 'ಸ್ಕೂಲ್ ಬಾಬಾ ಸಾಹೇಬ್ ಮಿಯಾ' ಈ ಗೊಂಬೆಗಳ ಪಿತಾಮಹ ಎಂದು ಹೇಳಲಾಗುತ್ತದೆ. ಆತ ಈ ಗೊಂಬೆಗಳ ತಯಾರಿಕೆಯಲ್ಲಿ ಜಪಾನಿ ತಂತ್ರಜ್ನಾನವನ್ನು ಅಳವಡಿಸಿಕೊಂಡನು. 1902ರಲ್ಲಿ ಚನ್ನಪಟ್ಟಣ ಕುಶಲಕರ್ಮಿ ತರಬೇತಿ ಸಂಸ್ಥೆ ಆರಂಭವಾಯಿತು. ಮೈಸೂರು ದಿವಾನರು ಈ ತರಬೇತಿ ಸಂಸ್ಥೆಯನ್ನು ಆರಂಭಿಸಿದರು. ಹೆಚ್ಚಾಗಿ ಈ ಗೊಂಬೆಗಳ ತಯಾರಿಕೆಗೆ ಆಲೆಮರದಲ್ಲಿ ತಯಾರಿಸಲಾಗುತ್ತಿದ್ದರೂ ಅದರ ಜೊತೆ ರಬ್ಬರ್, ಪೈನ್, ಟೀಕ್, sycamore, cedar ಮರಗಳೂ ಬಳಸಲ್ಪಡುತ್ತಿವೆ. ಗೊಂಬೆಗಳ ಕೆತ್ತನೆಗೆ ಬೇಕಾದ ಮೃದುವಾದ ಆಲೆ ಮರಗಳು ಚನ್ನಪಟ್ಟಣದಲ್ಲಿಯೇ ಬೆಳೆಯುತ್ತವೆ.
#kids
#toys
#factorytour
#bangalore
#channapatna
#makeinindia
#travelkarnataka
#karnatakatourism
#incridibleindia
#babytoys
#chinatoys