ಚಿಂತೆ ಪರಿಹಾರ ಸುಳಾದಿ | ಶ್ರೀ ವಿಜಯ ದಾಸರ ಕೃತಿ | Chinte Parihara Sulaadi | Sri Vijaya Dasara Kruti

  Рет қаралды 2,106

Bhajane - Dasara Hadugalu ಭಜನೆ - ದಾಸರ ಹಾಡುಗಳು

Bhajane - Dasara Hadugalu ಭಜನೆ - ದಾಸರ ಹಾಡುಗಳು

Күн бұрын

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್
ವ್ಯಾಕುಲವೇನೊ ಮನವೇ ಯಾಕೆ ನಿನಗೆ ನಿತ್ಯ
ಸಾಕುವ ದಾತರ ಶ್ರೀಕಾಂತನನುದಿನ
ಲೋಕ ಲೋಕವನೆಲ್ಲ ಸಾಕುವ ಭಾರ
ಕರ್ತಾ ಬೇಕೆಂದು ಪ್ರತಿದಿನ ಜೋಕೆ ಮಾಡುವನೊ
ಕಕ್ಕುಲಾತೆ ವಿಡಿದು ಲೌಕೀಕದೊಳು ಬಿದ್ದು
ಕುಕರ್ಮವನನುಸರಿಸಿ ಶೋಕಕ್ಕೊಳಗಾಗದಿರು
ನೂಕು ಸಂತಾಪವನೇಕ ಬಗೆಯಿಂದ
ವಾಕು ಸಾರಿದೆನಿದು ನೀ ಕೇಳು ದೃಢವಾಗಿ ಈ
ಕುಂಭಿನಿಯ ಮಧ್ಯ ಪ್ರಾಕೃತವಿಡಿದು
ಬದುಕುವ ಜೀವಿಗಳ ಸಾಕುವನಾರು
ಗೋಕುಲಾಂಬುಧಿ ಚಂದ್ರ ವಿಜಯವಿಠ್ಠಲ ಗ್ರಾಸ
ಹಾಕುವನಿರಲಾಗಿ ನೀ ಕಳವಳಿಸುವರೇ ||೧||
ಬರ ಬಂದರೇನು ಬಾರದಿದ್ದರೆ ಏನು
ಧರೆ ಎಲ್ಲ ಇಂದು ಕರಗಿ ಪೋದರೆ ಏನು
ಅರಸಾಗಿದ್ದವರ ಕರುಣ ತಪ್ಪಿದರೇನು
ವರುಷಂಗಳ ತಡೆದು ಇರಲಿ ಇದ್ದರೆ ಏನು
ಗಿರಿ ಸಮುದಾಯಗಳು ಹರಿದು ಬಂದರೆ ಏನು
ಹರಿದು ಮುಗಿಲು ಮೇಲೆ ಒರಗಿದರೇನು
ಧರಣಿಪಾಲಕ ರಂಗ ವಿಜಯವಿಠ್ಠಲರೇಯ
ಪರಮ ಪುರುಷ ಹರಿಯ ಶರಣಗೆ ಭಯವೇನು ||೨||
ಶಾರೆ ಹೊನ್ನಿಗೆ ಭತ್ತ ಶಾರೆಯಾದರೆ ಏನು
ನೂರಾರು ಖಂಡಗ ಕಾಸಿಗಾದರೆ ಏನು
ಊರು ಊರಲಿ ಧನ ಸೂರೆ ಬಿಟ್ಟರೆ ಏನು
ಮಾರುವ ಧಾರಣಿ ಏರಿ ಇಳಿದರೇನು
ಘೋರಾರಣ್ಯದೊಳು ಪೋಗಿ ಇದ್ದರೆ ಏನು
ನೀರು ಇಲ್ಲದ ಠಾವು ದೊರಿತಾರೇನು
ಅರಾಜಕವಾಗಿ ಭೀತಿ ಬಂದರೇನು
ಆರಾದರು ಮೋರೆ ತಿರುಹಲೇನು
ಮೇರೆದಪ್ಪಿ ಏಳು ವನಧಿ ಹೆಚ್ಚಿದರೇನು
ದಾರುಣದಲಿ ದೇಹ ಬಳಲಲೇನು
ಈ ಶರೀರವೇ ಶ್ರೀನಿವಾಸನ
ಚರಣಕ್ಕೆ ಆರೋಪಿಸಿದ ತರುವಾಯದಲ್ಲಿ
ವಾರವಾರಕೆ ಮನವೆ ಯೋಚನೆಗೊಳಸಲ್ಲ
ಪೂರೈಸಿ ತಿಳಿಯೊ ಹರಿಯ ಮಹಿಮೆಯನ್ನು
ನಾರಾಯಣ ರಂಗ ವಿಜಯವಿಠ್ಠಲ ನಿತ್ಯ
ಭಾರಕರ್ತನಾಗಿ ಪೊರೆವನು ಪ್ರತಿ ದಿವಸ ||೩||
ಉದರದೊಳಗೆ ಬಂದು ಉದುಭವಿಸಿದಾಗ
ವದನಕ್ಕೆ ತಂದು ತೊಡದವರಾರೊ ಬೆಣ್ಣೆಯ
ಬದಿಗನು ತಾನಾಗಿ ಪದೆ ಪದೆಗೆ
ಹರಿಬದಿಯಲ್ಲಿ ನಿಂದು ಹದುಳ ನೋಡುತಲಿದ್ದು
ಪೊದೆ ವನ ಗಿರಿ ಗುಹೆಹೊದರಿನೊಳಿದ್ದರು
ಕ್ಷುಧೆಯಾಗಗೊಡದಂತೆ ಮಧುರನ್ನವ ತಂದು
ಉದಯಾಸ್ತಮಾನ ಬಿಡದೆ ಉಣಿಸುವ ಸತ್ಯ
ಮದಡು ಮಾನವ ನಿನ್ನ ಉದರ ಚಿಂತೆಯ ಬಿಡು
ಹೃದಯದೊಳಗೆ ಸಿರಿ ಪದುಮನಾಭನ ಇಡು
ಒದಗಿ ಸಾಕುವ ತಂದೆ ವಿಜಯವಿಠ್ಠಲನಿರೆ
ಇದೇ ಧೈರ್ಯವಿಡಿದು ಮುದದಿಂದ ನಲಿದಾಡು ||೪||
ಹಿಂದೆ ಬಹು ಜನ್ಮಂಗಳು ಬಂದು ಬಂದು ಪೋದುದಕ್ಕೆ
ಒಂದು ತೃಣವಾದರೂ ನಿನ್ನಿಂದ ನೀನೆ ಘಳಿಸಲಿಲ್ಲಾ
ಇಂದಿರಾರಮಣನು ತಾ ಒಂದು ಒಂದು ಪರಿಯಲ್ಲಿ
ಬಾಂಧವನಾಗಿ ನಿತ್ಯ ನಿಂದು ಭಾರಕರ್ತನಾಗಿ
ಒಂದು ನಿಮಿಷ ಮೀರಗೊಡದೆ ಸಂದೇಹ ಬಡದಂತೆ
ಚಂದವಾಗಿ ಒಲಿದು ಆನಂದ ಸುಖಬಡಿಸುವಾ
ಮುಂದುಗೆಡದಲೆ ಹೇಗೆಂದು ಚಿಂತೆ ಮಾಡದಲೆ
ಎಂದೆಂದಿಗೂ ಕಳೆಗುಂದದಲಿರು ಮನವೆ
ಹಿಂದೆ ಇಂದು ಮುಂದು ಬಿಡದೆ ತಂದೆಯಾಗಿ ಸಾಕುವ
ಗೋವಿಂದ ವಿಜಯ ವಿಠ್ಠಲಂಗೆ ವಂದಿಸುವುದು ಬಿಡದಿರು ||೫||
ಜತೆ
ಅಣುರೇಣು ಪೊಟ್ಟಿಗೆ ನಡೆಸುವ ದೇವನು
ನಿನಗೀಯದಿಪ್ಪನೆ ವಿಜಯವಿಠ್ಠಲ ಸ್ವಾಮಿ
vyaakulavEno manavE yaake ninage nitya
saakuva daatara SrIkaaMtananudina
lOka lOkavanella saakuva bhaara
kartaa bEkeMdu pratidina jOke maaDuvano
kakkulaate viDidu laukIkadoLu biddu
kukarmavananusarisi SOkakkoLagaagadiru
nUku saMtaapavanEka bageyiMda
vaaku saaridenidu nI kELu dRuDhavaagi I
kuMbhiniya madhya praakRutaviDidu
badukuva jeevigaLa saakuvanaaru
gOkulaaMbudhi caMdra vijayaviThThala graasa
haakuvaniralaagi nI kaLavaLisuvarE ||1||
bara baMdarEnu baaradiddare Enu
dhare ella iMdu karagi pOdare Enu
arasaagiddavara karuNa tappidarEnu
varuShaMgaLa taDedu irali iddare Enu
giri samudaayagaLu haridu baMdare Enu
haridu mugilu mEle oragidarEnu
dharaNipaalaka raMga vijayaviThThalarEYa
parama puruSha hariya SaraNage bhayavEnu ||2||
Saare honnige bhatta Saareyaadare Enu
nUraaru khaMDaga kaasigaadare Enu
Uru Urali dhana sUre biTTare Enu
maaruva dhaaraNi Eri iLidarEnu
GOraaraNyadoLu pOgi iddare Enu
nIru illada Thaavu doritaarEnu
araajakavaagi bhIti baMdarEnu
Araadaru mOre tiruhalEnu
mEredappi ELu vanadhi heccidarEnu
daaruNadali dEha baLalalEnu
I SarIravE SrInivaasana
caraNakke ArOpisida taruvaayadalli
vaaravaarake manave yOcanegoLasalla
pUraisi tiLiyo hariya mahimeyannu
naaraayaNa raMga vijayaviThThala nitya
bhaarakartanaagi porevanu prati divasa ||3||
udaradoLage baMdu udubhavisidaaga
vadanakke taMdu toDadavaraaro beNNeya
badiganu taanaagi pade padege
haribadiyalli niMdu haduLa nODutaliddu
pode vana giri guhehodarinoLiddaru
kShudheyaagagoDadaMte madhurannava taMdu
udayaastamaana biDade uNisuva satya
madaDu maanava ninna udara ciMteya biDu
hRudayadoLage siri padumanaabhana iDu
odagi saakuva taMde vijayaviThThalanire
idE dhairyaviDidu mudadiMda nalidaaDu ||4||
hiMde bahu janmaMgaLu baMdu baMdu pOdudakke
oMdu tRuNavaadarU ninniMda nIne GaLisalillaa
iMdiraaramaNanu taa oMdu oMdu pariyalli
baaMdhavanaagi nitya niMdu bhaarakartanaagi
oMdu nimiSha mIragoDade saMdEha baDadaMte
caMdavaagi olidu AnaMda sukhabaDisuvaa
muMdugeDadale hEgeMdu ciMte maaDadale
eMdeMdigU kaLeguMdadaliru manave
hiMde iMdu muMdu biDade taMdeyaagi saakuva
gOviMda vijaya viThThalaMge vaMdisuvudu biDadiru ||5||
jate
aNurENu poTTige naDesuva dEvanu
ninagIyadippane vijayaviThThala svaami

Пікірлер: 11
@jayananjundaiah5966
@jayananjundaiah5966 3 ай бұрын
ಹರೇ ಶ್ರೀನಿವಾಸ 🙏🙏
@jayashreemahabashya9816
@jayashreemahabashya9816 3 ай бұрын
Tumba chennagide,devara namave sundara 💐🙏
@shashirekhashashirekha8536
@shashirekhashashirekha8536 3 ай бұрын
ಸೂಪರ್ 👌👌👌🌹🙏🥰
@vaniramesh8781
@vaniramesh8781 3 ай бұрын
ಹರೇ ಶ್ರೀನಿವಾಸ ಅನಂತ ಧನ್ಯವಾದಗಳು
@savithrihn3595
@savithrihn3595 3 ай бұрын
ತುಂಬಾ ತುಂಬಾ ಚೆನ್ನಾಗಿದೆ
@namagirimadhusudanarao705
@namagirimadhusudanarao705 3 ай бұрын
Tumba chenngide madam.❤
@pushpasridhar635
@pushpasridhar635 3 ай бұрын
Thumba chennagi spashtavagi hadiddeera
@padmarekha8612
@padmarekha8612 3 ай бұрын
Tumba chennagi hadiddiri
@ramadevidhanya4722
@ramadevidhanya4722 3 ай бұрын
👌👌🙏🙏👏👏
@padmar4494
@padmar4494 2 ай бұрын
🙏🙏
黑天使被操控了#short #angel #clown
00:40
Super Beauty team
Рет қаралды 61 МЛН
REAL or FAKE? #beatbox #tiktok
01:03
BeatboxJCOP
Рет қаралды 18 МЛН
Vishnu Sahasranamam With Kannada Lyrics | ವಿಷ್ಣು ಸಹಸ್ರನಾಮ
32:50
ಭಕ್ತಿ ಹಾಡುಗಳು ಕನ್ನಡ - Bhakti Songs Kannada
Рет қаралды 1,2 МЛН
Sri Rama Jaya Rama Jaya Jaya Rama Geetha Ramayana - Smt Kavana Rajkumar, Smt Divya Giridhar
16:07
Kavana Ninada ಕವನ ನಿನಾದ
Рет қаралды 28 М.
ಜಯ ಮಧ್ವವಲ್ಲಭ | ಶ್ರೀ ವಾದಿರಾಜರ ಕೃತಿ | Jaya Madhwavallabha | Sri Vadirajara Kruti | Dasara Padagalu
7:20
Bhajane - Dasara Hadugalu ಭಜನೆ - ದಾಸರ ಹಾಡುಗಳು
Рет қаралды 1,2 М.
Gajendra Moksha | Sri Vadirajaru
16:27
Daasoham
Рет қаралды 4,4 МЛН
黑天使被操控了#short #angel #clown
00:40
Super Beauty team
Рет қаралды 61 МЛН