Рет қаралды 1,415
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್
ಜಯ ಮಧ್ವವಲ್ಲಭ ಜಯಶುದ್ಧ ಸುಲ್ಲಭ
ಜಯ ಪದ್ಮನಾಭ ಉಡುಪಿನ
ಜಯ ಪದ್ಮನಾಭ ಉಡುಪಿನ ಶ್ರೀಕೃಷ್ಣ
ಜಯ ದುರ್ಜನರಿಗೆ ಅತಿದೂರ ಸುವ್ವಿ ಸುವ್ವಿ ಸುವ್ವಾಲೆ |ಪ|
ಸುರರ ಶಿರೋರನ್ನ ಗರುಡವಾಹನನೆ
ಕರುಣಸಂಪನ್ನ ಉಡುಪಿನ
ಕರುಣಸಂಪನ್ನ ಉಡುಪಿನ ಶ್ರೀಕೃಷ್ಣ
ಶರಣಾಗೋ ಧನ್ಯ ಜನರಿಗೆ || ೧ ||
ಮೇಲೆ ಸತ್ಯಲೋಕ ಆಳುವ ಧೀರನೆ
ಶ್ರೀಲೋಲನಂಘ್ರಿಭ್ರಮರನೆ
ಶ್ರೀಲೋಲನಂಘ್ರಿಭ್ರಮರನೆ ಶ್ರೀಕೃಷ್ಣ
ಶ್ರೀ ಮುಖ್ಯಪ್ರಾಣಗ್ ಎರಗುವೆ || ೨ ||
ರಾಮನಂಘ್ರಿಯ ಸೇವೆ ಪ್ರೇಮದಿಂ ಮಾಡಿದ
ಶ್ರೀಮಂತ ನಮ್ಮ ಹನುಮಂತ
ಶ್ರೀಮಂತ ನಮ್ಮ ಹನುಮಂತನೆಂದವಗೆ
ಕಾಮಿತಾರ್ಥಗಳ ಕೊಡುವನೆ || ೩ ||
ಭಾರತ ಯುದ್ಧದಲಿ ಬಾಹುಬಲ ತೋರಿದ
ಧಾರಿಣೀಶ್ವರ ತಿಲಕನೆ
ಧಾರಿಣೀಶ್ವರ ತಿಲಕನೆ ಶ್ರೀ ಭೀಮ
ಸಾರಿದ ಜನರ ಸಲಹುವ || ೪ ||
ಶುದ್ಧಶಾಸ್ತ್ರಗಳಿಂದ ಗೆದ್ದು ವಾದಿಗಳನು
ಹೊದ್ದಿದ ಜನರ ಕರುಣದಲಿ
ಹೊದ್ದಿದ ಜನರ ಕರುಣದಲಿ ಹೊರೆವ ಶ್ರೀ
ಮಧ್ವಮುನಿಪನ ಭಜಿಸುವೆ || ೫ ||
ಹರಿಯ ಸತ್ಕರದಲ್ಲಿ ಕರುಣಂಗಳೊಡನೆ
ದುರುಳ ವಾದಿಗಳ ಗೆಲಿದನೆ
ದುರುಳ ವಾದಿಗಳ ಗೆಲಿದನೆ ಹೃಷಿಕೇಶ
ಗುರುಗಳಂಘ್ರಿಗೆ ನಮಿಸುವೆ || ೬ ||
ದೇಶ ದೇಶದೊಳುಳ್ಳ ದೂಷಿವಾದಿಗಳನ್ನು
ದೂಷಿಸಿ ಹರಿಯ ಮಹಿಮೆಯನು
ದೂಷಿಸಿ ಹರಿಯ ಮಹಿಮೆಯ ಮೆರೆದ ಶ್ರೀ
ನೃಸಿಂಹತೀರ್ಥಯತಿರಾಯ || ೭ ||
ಅದ್ವೈತವಾದಿಗಳ ಗೆದ್ದು ನಿರ್ಮಲವಪ್ಪ
ಮಧ್ವಮಾರ್ಗವನು ಜಗಕೆಲ್ಲ
ಮಧ್ವಮಾರ್ಗವನು ಜಗಕೆಲ್ಲ ತೋರಿದ ಜ-
ನಾರ್ದನತೀರ್ಥಯತಿರಾಯ || ೮ ||
ಇಂದಿರೆಯರಸನ ಎಂದೆಂದು ಪೂಜಿಸಿ
ಮಂದಮಾಯಿಗಳ ಕುಮತವ
ಮಂದಮಾಯಿಗಳ ಕುಮತವ ಗೆಲಿದ ಉ-
ಪೇಂದ್ರತೀರಥಯತಿರಾಯ || ೯ ||
ಈ ಮಹಿಯೊಳಗುಳ್ಳ ತಾಮಸ ಜನರನ್ನು
ಶ್ರೀಮಧ್ವ ಮುನಿಪನ ಮತದಿಂದ
ಶ್ರೀಮಧ್ವಮುನಿಪನ ಮತದಿಂದ ಖಂಡಿಸಿ
ವಾಮನತೀರ್ಥರೆಸೆದರು || ೧೦ ||
ಧೀರ ತಾಪಸರಾಗಿ ಗುರುಮಧ್ವಮುನಿಯನು
ಚಾರುಚರಣಂಗಳ ಪಿಡಿದಿರ್ದ
ಚಾರುಚರಣಂಗಳ ಪಿಡಿದಿರ್ದ ಶ್ರೀವಿಷ್ಣು-
ತೀರಥರಡಿಗೆ ನಮಿಸುವೆ || ೧೧ ||
ಕಾಮನ ನೆರೆ ಅಟ್ಟಿ ಶ್ರೀಮಹಾವಿಷ್ಣುವೇ
ಸ್ವಾಮಿ ಎಂಬುದನು ಜಗಕ್ಕೆಲ್ಲ
ಸ್ವಾಮಿ ಎಂಬುದನು ಜಗಕ್ಕೆಲ್ಲ ತೋರಿದ
ರಾಮತೀರಥಯತಿರಾಯ || ೧೨ ||
ಮನುಮಥನಯ್ಯನ ಘನತೆಯ ತೋರಿಸಿ
ಜನರ ಮೋಹಗಳ ಬಿಡಿಸಿದ
ಜನರ ಮೋಹಗಳ ಬಿಡಿಸಿದ ಅಧೋಕ್ಷಜ
ಮುನಿಕುಲಾಗ್ರಣಿಗೆ ನಮಿಸುವೆ || ೧೩ ||
ಮಧ್ವಕಿಂಕರರಾದ ಪದ್ಮನಾಭಾರ್ಯರ
ವಿದ್ಯಾವೈಭವಗಳ ಪೊಗಳುವ
ವಿದ್ಯಾವೈಭವಗಳ ಪೊಗಳುವ ಕವಿಯಾರು
ಶುದ್ಧ ಮುನಿಗಳಿಗೆ ಅಳವಲ್ಲ || ೧೪ ||
ಸ್ವದೇವ ಹಯವದನನ ಆವಾಗ ಪೂಜಿಪ
ಪಾವನ್ನ ಮಧ್ವಮುನಿಪನ
ಪಾವನ್ನ ಮುಧ್ವಮುನಿಪನ ಶಿಷ್ಯರಾದ
ದೇವತಾಂಶಗಳ ಮರೆಹೊಕ್ಕೆ || ೧೫ ||
***
jaya madhvavallaBa jayaSuddha sullaBa
jaya padmanABa uDupina
jaya padmanABa uDupina SrIkRuShNa
jaya durjanarige atidUra suvvi suvvi suvvAle |pa|
surara SirOranna garuDavAhanane
karuNasaMpanna uDupina
karuNasaMpanna uDupina SrIkRuShNa
SaraNAgO dhanya janarige || 1 ||
mEle satyalOka ALuva dhIrane
SrIlOlanaMGriBramarane
SrIlOlanaMGriBramarane SrIkRuShNa
SrI muKyaprANag eraguve || 2 ||
rAmanaMGriya sEve prEmadiM mADida
SrImaMta namma hanumaMta
SrImaMta namma hanumaMtaneMdavage
kAmitArthagaLa koDuvane || 3 ||
BArata yuddhadali bAhubala tOrida
dhAriNISvara tilakane
dhAriNISvara tilakane SrI BIma
sArida janara salahuva || 4 ||
SuddhaSAstragaLiMda geddu vAdigaLanu
hoddida janara karuNadali
hoddida janara karuNadali horeva SrI
madhvamunipana Bajisuve || 5 ||
hariya satkaradalli karuNaMgaLoDane
duruLa vAdigaLa gelidane
duruLa vAdigaLa gelidane hRuShikESa
gurugaLaMGrige namisuve || 6 ||
dESa dESadoLuLLa dUShivAdigaLannu
dUShisi hariya mahimeyanu
dUShisi hariya mahimeya mereda SrI
nRusiMhatIrthayatirAya || 7 ||
advaitavAdigaLa geddu nirmalavappa
madhvamArgavanu jagakella
madhvamArgavanu jagakella tOrida ja-
nArdanatIrthayatirAya || 8 ||
iMdireyarasana eMdeMdu pUjisi
maMdamAyigaLa kumatava
maMdamAyigaLa kumatava gelida u-
pEMdratIrathayatirAya || 9 ||
I mahiyoLaguLLa tAmasa janarannu
SrImadhva munipana matadiMda
SrImadhvamunipana matadiMda KaMDisi
vAmanatIrtharesedaru || 10 ||
dhIra tApasarAgi gurumadhvamuniyanu
cArucaraNaMgaLa piDidirda
cArucaraNaMgaLa piDidirda SrIviShNu-
tIratharaDige namisuve || 11 ||
kAmana nere aTTi SrImahAviShNuvE
svAmi eMbudanu jagakkella
svAmi eMbudanu jagakkella tOrida
rAmatIrathayatirAya || 12 ||
manumathanayyana Ganateya tOrisi
janara mOhagaLa biDisida
janara mOhagaLa biDisida adhOkShaja
munikulAgraNige namisuve || 13 ||
madhvakiMkararAda padmanABAryara
vidyAvaiBavagaLa pogaLuva
vidyAvaiBavagaLa pogaLuva kaviyAru
Suddha munigaLige aLavalla || 14 ||
svadEva hayavadanana AvAga pUjipa
pAvanna madhvamunipana
pAvanna mudhvamunipana SiShyarAda
dEvatAMSagaLa marehokke || 15 ||
***