ಪುಣ್ಯಕೋಟಿ ಗೋವಿನ ಹಾಡು (Punyakoti Govina Haadu Lyrics) ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದೊಳಿರುವ ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು ಉದಯ ಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು ಮುದದಿ ತಿಲಕವ ಹಣೆಯೊಳಿಟ್ಟು ಚತುರ ಶಿಖೆಯನು ಹಾಕಿದ ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲ ಗೌಡನು ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ ಗಂಗೆ ಬಾರೆ ಗೌರಿ ಬಾರೆ ತುಂಗಭದ್ರೆ ತಾಯಿ ಬಾರೆ ಪುಣ್ಯಕೋಟಿ ನೀನು ಬಾರೇ ಎಂದು ಗೊಲ್ಲನು ಕರೆದನು ಗೊಲ್ಲ ಕರೆದ ಧ್ವನಿಯ ಕೇಳಿ ಎಲ್ಲ ಹಸುಗಳು ಬಂದು ನಿಂತು ಚೆಲ್ಲಿ ಸೂಸಿ ಹಾಲು ಕರೆಯಲು ಅಲ್ಲಿ ತುಂಬಿತು ಬಿಂದಿಗೆ ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು ಹಬ್ಬಿದ ಮಲೆ ಮಧ್ಯದೊಳಗೆ ಅರ್ಭುತಾನೆಂದೆಂಬ ವ್ಯಾಘ್ರನು ಅಬ್ಬರಿಸಿ ಹಸಿಹಸಿದು ಬೆಟ್ಟದ ಕಿಬ್ಬಿಯೊಳು ತಾನಿದ್ದನು ಸಿಡಿದು ರೋಷದಿ ಮೊರೆಯುತಾ ಹುಲಿ ಘುಡುಘುಡಿಸಿ ಭೋರಿಡುತ ಛಂಗನೆ ತುಡುಕಲೆರಗಿದ ರಭಸಕಂಜಿ ಚೆದರಿ ಹೋದವು ಹಸುಗಳು ಪುಣ್ಯಕೋಟಿ ಎಂಬ ಹಸುವು ತನ್ನ ಕಂದನ ನೆನೆದುಕೊಂಡು ಮುನ್ನ ಹಾಲನು ಕೊಡುವೆನೆನುತ ಚೆಂದದಿ ತಾ ಬರುತಿರೆ ಇಂದೆನಗೆ ಆಹಾರ ಸಿಕ್ಕಿತು ಎಂದು ಬೇಗನೆ ದುಷ್ಟ ವ್ಯಾಘ್ರನು ಬಂದು ಬಳಸಿ ಅಡ್ಡಗಟ್ಟಿ ನಿಂದನಾ ಹುಲಿರಾಯನು ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು ಮೇಲೆ ಬಿದ್ದು ನಿನ್ನನೀಗಲೆ ಬೀಳಹೊಯ್ವೆನು ನಿನ್ನ ಹೊಟ್ಟೆಯ ಸೀಳಿಬಿಡುವೆನು ಎನುತ ಕೋಪದಿ ಖೂಳ ವ್ಯಾಘ್ರನು ಕೂಗಲು ಒಂದು ಬಿನ್ನಹ ಹುಲಿಯೆ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ ಹಸಿದ ವೇಳೆಗೆ ಸಿಕ್ಕಿದೊಡವೆಯ ವಶವ ಮಾಡದೆ ಬಿಡಲು ನೀನು ನುಸುಳಿ ಹೋಗುವೆ ಮತ್ತೆ ಬರುವೆಯ ಹುಸಿಯನಾಡುವೆ ಎಂದಿತು ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು ಕೊಂದು ತಿನ್ನುವೆನೆಂಬ ಹುಲಿಗೆ ಚೆಂದದಿಂದ ಭಾಷೆ ಇತ್ತು ಕಂದ ನಿನ್ನನು ನೋಡಿ ಹೋಗುವೆ ನೆಂದು ಬಂದೆನು ದೊಡ್ಡಿಗೆ ಆರ ಮೊಲೆಯನು ಕುಡಿಯಲಮ್ಮ? ಆರ ಸೇರಿ ಬದುಕಲಮ್ಮ? ಆರ ಬಳಿಯಲಿ ಮಲಗಲಮ್ಮ? ಆರು ನನಗೆ ಹಿತವರು? ಅಮ್ಮಗಳಿರಾ ಅಕ್ಕಗಳಿರಾ ನಮ್ಮ ತಾಯೊಡಹುಟ್ಟುಗಳಿರಾ ನಿಮ್ಮ ಕಂದನೆಂದು ಕಾಣಿರಿ ತಬ್ಬಲಿಯನೀ ಕರುವನು ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು ತಬ್ಬಲಿಯು ನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗುವೆನು ಇಬ್ಬರ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ ಗೋವು ಕರುವನು ಬಿಟ್ಟು ಬಂದು ಸಾವಕಾಶವ ಮಾಡದಂತೆ ಗವಿಯ ಬಾಗಿಲ ಸೇರಿ ನಿಂತು ತವಕದಲಿ ಹುಲಿಗೆಂದಿತು ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದೆಕೋ ಚಂಡ ವ್ಯಾಘ್ರನೆ ನೀನಿದೆಲ್ಲವ ನುಂಡು ಸಂತಸದಿಂದಿರು ಪುಣ್ಯಕೋಟಿಯ ಮಾತ ಕೇಳಿ ಕಣ್ಣ ನೀರನು ಸುರಿಸಿ ನೊಂದು ಕನ್ನೆಯಿವಳನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ಏನ ಪಡೆವೆನು? ಎನ್ನುತ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು ಪುಣ್ಯಕೋಟಿಯು ನಲಿದು ಕರುವಿಗೆ ಉಣ್ಣಿಸಿತು ಮೊಲೆಯ ಬೇಗದಿ ಚೆನ್ನ ಗೊಲ್ಲನ ಕರೆದು ತಾನು ಮುನ್ನ ತಾನಿಂತೆಂದಿತು ಎನ್ನ ವಂಶದ ಗೋವ್ಗಳೊಳಗೆ ನಿನ್ನ ವಂಶದ ಗೊಲ್ಲರೊಳಗೆ ಮುನ್ನ ಪ್ರತಿ ಸಂಕ್ರಾಂತಿಯೊಳಗೆ ಚೆನ್ನ ಕೃಷ್ಣನ ಭಜಿಸಿರೈ ಈವನು ಸೌಭಾಗ್ಯ ಸಂಪದ ಭಾವಜಪಿತ ಕೃಷ್ಣನು
@madhuraa99392 ай бұрын
Kila8iiiiiiih be, hbbi jhh
@RichardRoyanАй бұрын
1980 ರ ದಶಕದ ಅತಿ ಪ್ರಸಿದ್ದಿ ಪಡೆದ ಹಾಡು. ನಾವು ಪ್ರಾರ್ಥಮಿಕ ಶಾಲೆಯಲ್ಲಿ ಕಲಿತು ಹಾಡಿದ ನೆನಪು ಇನ್ನು ಹಾಗೆ ಇದೆ.
@husnakhanumcrpgbdhusnakhan67585 ай бұрын
33 ವರ್ಷದ ಹಿಂದೆ ಹೋದ ಹಾಗೆ ಅನ್ನಿಸಿತು. ಈ ಪದ್ಯವನ್ನು ಎಷ್ಟು ಬಾರಿ ಕೇಳಿದರೂ ಈಗಲೂ ಕಣ್ಣಿರು ಬರುತ್ತೆ.
@Shreedhar-v6n4 ай бұрын
ನಿಜ
@shivakumartb2520Ай бұрын
"ದುಷ್ಠ ವ್ಯಾಘ್ರ" ಅನ್ನೋ lyrics ge ನನ್ನ ದಿಕ್ಕಾರ
@sihayajim8 күн бұрын
Just so beautiful 😍
@rameshk19962 жыл бұрын
ನಮ್ಮ ಭಾಷೆ ಮತ್ತು ಹಳ್ಳಿಯ ಸೊಗಡು ಕಣ್ಣಮುಂದೆ ಬರುವ ಹಾಗೆ ಹಾಡು ಸೊಗಸಾಗಿ ಮೂಡಿ ಬಂದಿದೆ
@shobhakt6762 Жыл бұрын
dntamale
@shareefperaje2336 Жыл бұрын
10-15 ವರ್ಷದ ಮುಂದೆ 5ನೇ ತರಗತಿಯಲ್ಲಿ ಓದಿದ ಹಾಡಾದರೂ ಈಗಲೂ ಮನಸಲ್ಲಿ ಒಂದು ವಾಕ್ಯ ಬಿಡದೆ ನೆನಪಿರುವ ಹಾಡು.. ಅದ್ಭುತವಾದ ಹಾಡು..
@punithkumar7323 Жыл бұрын
True bro ❤
@Vinod-fy3kf Жыл бұрын
Q
@rachayyameti8445 ай бұрын
😅😅
@bsshashank4429 күн бұрын
ಸತ್ಯ ಮೇವ ಜಯತೇ!!!
@uchihaprajju Жыл бұрын
ನನ್ನ... ಐದನೇ ತರಗತಿಯ ಪದ್ಯ.... ಕೇಳಿ ನನ್ನ ಬಾಲ್ಯ, ನನ್ನ ಗುರುಗಳು, ನನ್ನ ಸ್ನೇಹಿತರು,ನನ್ನ ಶಾಲೆ ಎಲ್ಲಾ ನನ್ನ ಕಣ್ಣ ಮುಂದೆ ಬಂದವು 🥺🥺...🥲🥲 ಸರ್ಕಾರಿ ಶಾಲೆಯಲ್ಲಿ ಸಿಗುವ ಬಾಲ್ಯದ ಸಂತೋಷ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ....ಮರಳಿ ಬಾ ಬಾಲ್ಯವೇ 🥺🙏🙏🥲
@raghukondekar5999 Жыл бұрын
S bro ur right we miss all those days
@surajv9367 Жыл бұрын
😄
@GEETHAN-lg4mb Жыл бұрын
Qq😂❤aq to dé@@raghukondekar5999c AA
@girishrm3923 Жыл бұрын
Nija bro
@കൃഷ്ണസന്തോഷ്2 ай бұрын
Can you say who wrote these lyrics??
@MasterMGP2 жыл бұрын
ಜಾನಪದ ಸಾಹಿತ್ಯಕ್ಕೆ ಇರುವ ಶಕ್ತಿ ಯಾವ ಪರ ಸಾಹಿತ್ಯಕ್ಕೆ ಇಲ್ಲ ಅಂತ ಕಾಣುತ್ತೆ. ❤️❤️🙏🏻
@subbareddy64472 жыл бұрын
Ml
@diyaveen2420 Жыл бұрын
Is this folk song?
@saraswathi.msarasa73802 жыл бұрын
ಇದು ನಮ್ಮ ಸ್ಕೂಲ್ ನಲ್ಲಿ ಹೇಳಿ ಕೊಡುತೇದರು 🙏❤👏
@yalakkigowda31782 жыл бұрын
BB
@kganjaneya66062 жыл бұрын
@@yalakkigowda3178 ಶ
@girishgacggirish21982 жыл бұрын
Yes sir
@girishgacggirish21982 жыл бұрын
Yes sir
@naguzende51052 жыл бұрын
ಕರುಣಾಮಯಿ ಪುಣ್ಯಕೋಟಿ.......ಓಂ ಗೋ ಮಾತಾ🙏🕉🕉🕉🕉🕉🕉🕉🕉🕉🙏
@sivasudhakar86432 жыл бұрын
Nnnn.nnnnnn...,..,....n..n..n,..n.nn.n in
@hg.p25772 жыл бұрын
🫀
@shridevihalakatti2303 Жыл бұрын
Pa⁸says 😮
@srinathherursrkprkfan1263 Жыл бұрын
ಪುಣ್ಯ ಕೋಟಿ ಹಾಡು ಕೇಳಿದರೆ ಹಾಗೆ ಕಣ್ಣಲ್ಲಿ ನೀರು ಬಂತು😢 ಸತ್ಯ ಮೇವ ಜಯತೇ 🙏🙏🙏
@mariswamysmariswamys6075 Жыл бұрын
P
@shantharkotian5283 Жыл бұрын
🙏
@gowrammak122 Жыл бұрын
@@shantharkotian5283 q the world is a great place to q and the world is qqqrat amanjarìfilka
@kendagannamma4608 Жыл бұрын
Spr ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು ♥️
@sugupuranik76402 жыл бұрын
ಇಂದಿನ ಕಾಲದ ಮಕ್ಕಳಿಗೆ ಮತ್ತು ಎಲ್ಲರಿಗೂ ಮತ್ತೆ ಮತ್ತೆ ಕೇಳಿಸಬೇಕಾದ ಹಾಡು ಇದು.
@sandhyal14582 жыл бұрын
5
@gkrishnappa4133 Жыл бұрын
@@sandhyal1458N'Djamena l ' .
@manjughoda112 Жыл бұрын
Pp
@josephiteshreyas31222 жыл бұрын
ಈ ಇಂಟರ್ನೆಟ್ ಯುಗದಲ್ಲಿ ಈ ರೀತಿ ಪಠ್ಯಪುಸ್ತಕಗಳನ್ನು ನೆನಪು ಮಾಡಿ ಮತ್ತೆ ನಮ್ಮನ್ನು ಶಾಲೆಯ ದಿನಗಳನ್ನು ನೆನಪಿಸಿದಕ್ಕೆ ಧನ್ಯವಾದಗಳು
@vidyasagargoudappanor2346 Жыл бұрын
100%
@SarojaKH-c7i2 ай бұрын
Very beautiful song 😊🎉
@shashankhebballi13792 жыл бұрын
ನನಗೆ ಗೊತ್ತಿಲ್ಲದೆ ನನ್ನ ಕಣ್ಣುಗಳು ಕಣ್ಣೀರು ತುಂಬಿದೆ 🥺🥺
@JummannapatilJummanna3 ай бұрын
ಸೂಪರ್ ಸಾಂಗ್ 🌹🤝
@mcsubbaramusubbaramu76152 жыл бұрын
ಒಂದನೊಂದು ಕಾಲದಿ ಹುಡುಗರೆಲ್ಪ ಹೇಳುತ್ತಿದ್ದ ಹಾಡು💝💝
@dhanyakharajola56712 жыл бұрын
Ega adu 100/ njavagide congres punyakoti bjp ge. Veagranigeruva Karine u ela
@muddannam65682 жыл бұрын
@@dhanyakharajola5671 s
@nagarathnatp97762 жыл бұрын
,
@bangareppabudur25972 жыл бұрын
@@dhanyakharajola5671 vf VT f CT v.vv TBH tgt vvfrvtf. CD t Bgggggg t tgv f t. F fy 😁🏡😁😁🐭😁
@VidyasathishVidya4 ай бұрын
Miss u school life ❤❤
@santoshmendegar61128 ай бұрын
2024 yaru kelitat edir like madari❤
@renukas63956 ай бұрын
It is so good.and very nice story 🙏🙏
@bylaiahsubbanna20412 жыл бұрын
ಪೂರ್ತಿಹಾಡು ಇಲ್ಲ, ಸಿನಿಮಾಗೆ ಮಾಡಿದಂಗೆ ಹಾಡುವುದು ತರವಲ್ಲ, ನಾವು ಇದನ್ನು ಹಾಡಿಕೊಂಡು ಬೆಳೆದವರು