Рет қаралды 45,737
ಇದು ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಯೋಗದ ಮಹಾ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ
ಯೋಗದ ಸಂಸ್ಕೃತ ಅರ್ಥವು ಎಲ್ಲವನ್ನೂ ಒಗ್ಗೂಡಿಸುವುದು ಎಂಬುವುದಾಗಿದೆ. ಯೋಗ ಅಂದರೆ ಅದೃಷ್ಟ. ಯೋಗ ಮನುಷ್ಯ ಜನ್ಮದ ಮೂಲ ಉದ್ದೇಶವಾದ ಮೋಕ್ಷಕ್ಕೆ ಬ್ರಹ್ಮ ವಿದ್ಯೆಯಾಗಿದೆ. ಸ್ಥೂಲ, ಸೂಕ್ಷ್ಮ, ಮತ್ತು ಕಾರಣ ಶರೀರಗಳು ಎನ್ನುವುದು ನಮ್ಮ ದೇಹದಲ್ಲಿದೆ. ಇದರ ಅಶುದ್ಧತೆ ಕಳೆದು ಪವಿತ್ರವಾಗುವುದು ಅತೀ ಮುಖ್ಯ. ಈ ಕೆಲಸವನ್ನು ಯೋಗವು ಮಾಡುತ್ತದೆ. ಪಂಚಮೂಲ ತತ್ವವನ್ನು ಬಿಗಿಯಾಗಿಡುವುದೇ ಯೋಗ ಎಂದೆನಿಸಿಕೊಂಡಿದೆ. ದೇಹದಲ್ಲಿ ಪಂಚೇಂದ್ರಿಯ ಮತ್ತು ಜ್ಞಾನೇಂದ್ರಿಯಗಳ ಆರೋಗ್ಯ ಮತ್ತು ಶರೀರದ ಶುದ್ಧತೆಗೆ ಯೋಗ ಸಹಕಾರಿಯಾಗುತ್ತದೆ. ಸ್ಥೂಲ ಶರೀರದ ಆರೋಗ್ಯಕ್ಕಾಗಿ ಮಾಡುವುದು ವ್ಯಾಯಾಮವಾಗುತ್ತದೆ. ಸೂಕ್ಷ್ಮ ಶರೀರ ಮನಸ್ಸು ಮತ್ತು ಬುದ್ಧಿಗೆ ಸಂಬಂಧಿಸಿದಾಗಿದೆ. ಧನಂಜಯ ಪ್ರಾಣವನ್ನು ಜಾಗೃತಗೊಳಿಸಿದರೆ ಸತ್ತ ಹೆಣವನ್ನೂ ಬದುಕಿಸಬಹುದು. ಇದು ಒಂದು ವಿದ್ಯೆಯೇ ಹೊರತು ಪವಾಡವಾಗುವುದಿಲ್ಲ. ಕಾರಣ ಶರೀರವು ಬೆಳಕಿನ ಶರೀರವಾಗಿದೆ. ಇಲ್ಲಿ ಜೀವ ಜಾಗೃತವಾಗಿರುತ್ತದೆ. ತಾನು ಪೂರ್ಣತೆಯನ್ನು ಕಂಡುಕೊಳ್ಳುವುದಕ್ಕಾಗಿಯೂ ಯೋಗಾಭ್ಯಾಸವನ್ನು ಮಾಡುವುದು ಉತ್ತಮ. ಯೋಗ, ಪ್ರಾಣಾಯಾಮ ಮಾಡಿದಾಗ ಮನಸ್ಸು, ಬುದ್ಧಿ ಮತ್ತು ಚಿತ್ತ ಒಂದೇ ಸಾಲಿನಲ್ಲಿ ಲಯವಾಗುತ್ತದೆ. ಅದನ್ನ ಧ್ಯಾನ ಎನ್ನುತ್ತೇವೆ. ಧ್ಯಾನ ಮಾಡುವಾಗ ನಮ್ಮ ಮನಸ್ಸು ಆಲೋಚನಾ ಭಾಗದಲ್ಲಿ ನಿಂತುಕೊಳ್ಳುತ್ತದೆ. ಪಂಚಭೂತ ತತ್ವದಿಂದಲೇ ಜೀವ ತಯಾರಾಗುವುದು. ಯೋಗ ಮನುಷ್ಯನ ಆತ್ಮ ಮತ್ತು ದೇಹಕ್ಕೆ ಬಹಳ ಉಪಯುಕ್ತವಾಗಿದೆ. ಧ್ಯಾನದ ಸ್ಥಿತಿ ಲಭ್ಯವಾಗಲು ವ್ಯಾಯಾಮ ಮತ್ತು ಯೋಗ ಮುಖ್ಯವಾಗಿರುತ್ತದೆ. ನಮ್ಮ ದೇಹವೇ ಶ್ರೀಚಕ್ರ. ನಮ್ಮ ಆಲೋಚನೆಗಳನ್ನು ಸರಿ ಮಾಡುವುದೇ ಯೋಗ. ನಮ್ಮ ಆಲೋಚನೆಗಳಿಂದಲೇ ಆರೋಗ್ಯ ಏರುಪೇರಾಗುವುದು. ಅಡ್ಡ ಪರಿಣಾಮಗಳು ಹೆಚ್ಚಿರುವ ಮಾತ್ರೆಗಳನ್ನು ತಿಂದು ಆರೋಗ್ಯವನ್ನು ಹದಗೆಡಿಸುವುದರ ಬದಲು ನಿರಂತರ ಯೋಗದಿಂದ ನಮ್ಮ ಆರೋಗ್ಯವನ್ನು ಸುರಕ್ಷಿತವಾಗಿಡಬಹುದು. ವ್ಯಾಯಾಮ ಶರೀರವನ್ನು ಶುದ್ಧಿ ಮಾಡಿದರೆ, ಧ್ಯಾನ ಆಲೋಚನೆಯನ್ನು ಶುದ್ಧಿ ಮಾಡುತ್ತದೆ. ಅದೇ ರೀತಿ ಪ್ರಾಣಾಯಾಮ ಪ್ರಾಣವನ್ನು ಶುದ್ಧಿ ಮಾಡುತ್ತದೆ. ಆಯುಷ್ಯ ಅಂತ ಬ್ರಹ್ಮ ಯಾರಿಗೂ ಬರೆದಿಲ್ಲ. ನಮ್ಮ ಆರೋಗ್ಯವನ್ನು ನಾವೇ ನಿರ್ಧರಿಸಬಹುದು. ಜೀವವನ್ನು ಶಿವ ಮಾಡುವ ವಿದ್ಯೆಯೇ ಯೋಗ.
For More Videos:
ಸೂತಕದ ಮನೆ ಹನ್ನೊಂದು ದಿನ ಹೇಗಿರಬೇಕು ಗೊತ್ತೇ ? | ಅವಧೂತ ಶ್ರೀ ವಿನಯ್ ಗುರೂಜಿ • ಸೂತಕದ ಮನೆ ಹನ್ನೊಂದು ದಿನ...
ವಿವಾಹ ಯೋಗ ಕೈ ತಪ್ಪುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ • ವಿವಾಹ ಯೋಗ ಕೈ ತಪ್ಪುವುದು...
ಸರ್ಪ ದೋಷ ನಿವಾರಣೆ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ • ಸರ್ಪ ದೋಷ ನಿವಾರಣೆ ಹೇಗೆ?...
ಹೀಗೆ ಮಾಡುವುದರಿಂದ ಮೋಕ್ಷದ ಬಾಗಿಲು ತೆರೆಯುತ್ತದೆ! | ಭಾಗ - 2 | ಅವಧೂತ ಶ್ರೀ ವಿನಯ್ ಗುರೂಜಿ • ಹೀಗೆ ಮಾಡುವುದರಿಂದ ಮೋಕ್ಷ...
ಇದುವೇ ಸ್ವರ್ಗ ನರಕದ ಮಹಾ ರಹಸ್ಯ ! | ಭಾಗ - ೧ | ಅವಧೂತ ಶ್ರೀ ವಿನಯ್ ಗುರೂಜಿ • ಇದುವೇ ಸ್ವರ್ಗ ನರಕದ ಮಹಾ ...
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife