Рет қаралды 69,127
Krishna Nintaane.....
Lyrics : Sripada Vitthala Daasaru
Sung by: Raichur Sheshagiri Das
Back Ground Music : Raichur Sheshagiri Das
ಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ ll ಪ ll
ಭಕ್ತರನೆಲ್ಲ ಉದ್ಧಾರ ಮಾಡುವ ಪಣವ ತೊಟ್ಟಾನೆ || ಅ ll
ಗೋವರ್ಧನ ಗಿರಿಯನೆತ್ತಿ ಗೋವಳ ನಿಂತ್ಯಾನೆ|
ಗೋವರ್ಧಕರು ಬನ್ನಿ ಎಂದು ಗೋವಿಂದ ಹೇಳ್ಯಾನೆ l
ಗೋವಿಂದ ಹೇಳ್ಯಾನೆ ||1||
ಮಂಥನ ಪಾಶವ ಕೈಯಲಿ ಪಿಡಿದು ಉಡುಪಿಲಿ ನಿಂತಾನೆ|
ಮಂಥಿಸಿ ಕ್ಲೇಶವ ಕಳೆಯುವೆನೆಂದು ನುಡಿದು ಹೇಳ್ಯಾನೆ l
ಕೃಷ್ಣ ನುಡಿದು ಹೇಳ್ಯಾನೆ||2||
ಟೊಂಕದ ಮ್ಯಾಲೆ ಕಯ್ಗಳನಿಟ್ಟು ವಿಠ್ಠಲ ಕಾದಾನೆ |
ಬಿಂಕವ ಬಿಟ್ಟು ಡೊಂಕವ ನೀಗಲು ಬನ್ನಿ ಎಂದ್ಯಾನೆl
ವಿಠ್ಠಲ ಬನ್ನಿ ಎಂದ್ಯಾನೆ ||3||
ವೆಂಕಟನೆನಿಸಿ ಬೆಟ್ಟದಮ್ಯಾಲೆ ದಿಟ್ಟ ನಿಂತಾನೆ|
ಸಂಕಟ ಪರಿಹರಿಸುವೆನು ಎಂದು ಸ್ಪಷ್ಟ ಪೇಳ್ಯಾನೆ l
ವೆಂಕಟ ಸ್ಪಷ್ಟ ಪೇಳ್ಯಾನೆ ||4||
ಕಂಸನ ಮಡುಹಿದ ಶ್ರೀಪಾದವಿಠ್ಠಲ ತಾನೇ ನಿಂತಾನೆ|
ಸಂಸಾರ ಬಂಧನ ಬಿಡಿಸಿ ಒಯ್ಯಲು ಸಿದ್ದ ನಿಂತಾನೆ |
ವಿಠ್ಠಲ ಸಿದ್ದ ನಿಂತಾನೆ||5||
**********
#dasasahitya #raichursheshagiridas #Udupi Krishna #vitthala
All rights reserved.
© & ℗ Copyright & Produced by : Raichur Sheshagiri Das
Published by : Raichur Sheshagiri Das