*ನಾ ಕಂಡ ಲಕ್ಷ್ಮೀ* ಒಂದು ಚಿತ್ರದ ಯಶಸ್ಸಿನ ಹಿಂದೆ ಕಲಾವಿದರ ಪಾತ್ರ ಎಷ್ಟು ಮುಖ್ಯವೋ, ಆ ಚಿತ್ರದ ಎಲ್ಲ ಪಾತ್ರಗಳನ್ನು ಹುಟ್ಟಿಸಿ...ಕಥೆ ಹೆಣೆದು...ಪರದೆ ಮೇಲೆ, ಬರೆದ ಕಥೆಗೆ ಜೀವ ತುಂಬುವ ನಿರ್ದೇಶಕನ ಪಾತ್ರವೂ ಅಷ್ಟೇ ಮುಖ್ಯ. ಲಕ್ಷ್ಮೀ ಒಂದು ಕಿರುಚಿತ್ರ ಅನ್ನೋದಕ್ಕಿಂತ ಅದೊಂದು ಸುಂದರ ಅನುಭವ ಎಂದರೆ ಅತಿಶಯೋಕ್ತಿ ಅಲ್ಲ. ಈ ಸುಂದರ ಅನುಭವದ ಕಾರಣೀಭೂತರಾದ ಅಭಿಜಿತ್ ಪುರೊಹಿತ್ ಅವರೆ, ನಿಮಗೆ ಅಸಂಖ್ಯ ಧನ್ಯವಾದ...!! ನಾನು ಈ ಕಿರುಚಿತ್ರವನ್ನು ತುಂಬ ಸೂಕ್ಷ್ಮವಾಗಿ ನೋಡಿದಿನಿ. ನೀವು ಚಿತ್ರದಲ್ಲಿ ನೀಡಿರೊ ಚಿಕ್ಕ ಪುಟ್ಟ ವಿವರಗಳು, ಈ ಚಿತ್ರವನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ಸಣ್ಣ ಸಣ್ಣ ವಿವರಗಳಿಗೆ ನೀವು ನೀಡಿದ ಗಮನವು ಅದ್ಭುತವಾಗಿದೆ. ಉದಾಹರಣೆಗೆ, ಆರಂಭದ ದೃಶ್ಯದಲ್ಲಿ ನಳಿನಿಯ ಚಿತ್ರಕಲೆ ಬಗ್ಗೆ ಪ್ರೇಕ್ಷಕರಿಗೆ ಪರಿಚಯಿಸಿದಿರಿ ಮತ್ತು ಕಥೆಯ ಅಂತ್ಯದಲ್ಲಿ ಅದಕ್ಕೆ ಒಂದು ಸೂಕ್ತ ಮುಕ್ತಾಯ ನೀಡಿದಿರಿ. ನಳಿನಿ ಆಕೆಯ ಮನೆ ಒಳಗೆ ಹೋಗೊವಾಗ, ಆಕೆ ಮೊಮ್ಮಗ ಗೋಲಿ ಆಡುವ ದೃಶ್ಯ ಕಾಣಿಸುತ್ತೆ, ಅವನಿದ್ದ ಸ್ಥಳವನ್ನು ಪ್ರೇಕ್ಷಕರಿಗೆ ತಿಳಿಸುವ ಸರಳ ಪರಿಕಲ್ಪನೆ, ಬಹಳ ಸೂಕ್ಷ್ಮವಾಗಿದೆ. ಈ ಪುಟ್ಟ ವಿವರ ಪ್ರೇಕ್ಷಕನಾದ ನನಗೆ ಅವಳ ಮೊಮ್ಮಗ ಎಲ್ಲಿಗೆ ಹೋದ ಎಂಬ ಗೊಂದಲ ಉಂಟು ಮಾಡಲಿಲ್ಲ. ತುಳಸಿಕಟ್ಟೆ ದೃಶ್ಯ ಬಂದಾಗ ನನಗೆ ಅಳುವೆ ತಡೆಯಲಾಗಲಿಲ್ಲ. ನಳಿನಿಯ ತಾಯಿಯೇ ಇಲ್ಲಿ ತುಳಸಿಕಟ್ಟೆ ಆಗಿರಬಹುದೆ ಅನಿಸಿತ್ತು (ನನಗನಿಸಿದ್ಧು). ಏಕೆಂದರೆ, ಆರಂಭದಲ್ಲಿ ತುಳಸಿ ಕಟ್ಟೆ ಹಳೆಯದಾಗಿ ಒಣಗಿದ ಕೊಂಬೆಗಳಿಂದ ಆವರಿಸಿ, ಮತ್ತು ದೀಪವಿಲ್ಲದ ಸ್ಥಿತಿಯಲ್ಲಿರುತ್ತೆ. ಅವಳ ಅಮ್ಮನೂ ಸಹ ಒಬ್ಬಳೆ ನಿರ್ಲಕ್ಷ್ಯಗೊಂಡು ಮುದಿ ಜೀವನ ನಡೆಸಿರುತ್ತಾಳೆ ಹಾಗಾಗಿ... ಆಮೇಲೆ ಅನಿಸಿದ್ದು ತುಳಸಿಕಟ್ಟೆ ನಳಿನಿಯ ಮನಸ್ಸಾಗಿರಬಹುದ ಅಂತ, ಏಕೆಂದರೆ ನಾನು ನನ್ನ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂಬ ನಳಿನಿಯ ಪಶ್ಚಾತ್ತಾಪವನ್ನು ಹಳೆಯದಾದ ತುಳಸಿಕಟ್ಟೆ ಪ್ರತಿಬಿಂಬಿಸುವಂತಿತ್ತು. ಆದರೆ ಅಂತ್ಯದಲ್ಲಿ, ಆಕೆ ತನ್ನ ತಾಯಿ ಯಾವತ್ತೂ ತನ್ನಿಂದ ನಿರ್ಲಕ್ಷ್ಯಗೊಂಡಿಲ್ಲ ಮತ್ತು ಅತೀ ತೃಪ್ತಿಯಿಂದ ಉಸಿರು ಬಿಟ್ಟಳು ಎಂಬುದು ಸ್ಪಷ್ಟವಾದಾಗ ತುಳಸಿಕಟ್ಟೆಯನ್ನು ಸ್ವಚ್ಛಗೊಳಿಸಿ ದೀಪವನ್ನು ಹಚ್ಚಿದ ದೃಶ್ಯವು ನಳಿನಿಯ ಮನಸ್ಸಿನ ಶಾಂತಿಯನ್ನು ಬಿಂಬಿಸುವಂತಿತ್ತು. ಇದೆಲ್ಲ ನನಗನಿಸಿದ್ಧು...ಇದನ್ನು ಬಿಟ್ಟು ತುಳಸಿ ಕಟ್ಟೆಯ ಬಗ್ಗೆ ಬೇರೆ ದೃಷ್ಟಿಕೋನ ನಿಮ್ಮಲ್ಲಿದ್ಧರೆ ದಯವಿಟ್ಟು ತಳಿಸಿ ಅಭಿಜಿತ್ ಅಣ್ಣ..!! @abhijitpurohit ಆಮೇಲೆ ಲಕ್ಷ್ಮೀ ಮಾತಾಡ್ತ ನಳಿನಿಗೆ ತೋರಿಸಿದ ಸೀರೆ, ಮತ್ತು ಅದೇ ಸೀರೆ ಕಂಬದ ಪೂಜೆಯಲ್ಲಿ ಕಾಣಿಸಿಕೊಂಡಿದ್ದು, ನಳಿನಿ ಲಕ್ಷ್ಮಿಗೆ ಹೂ ಮಾಲೆ ಕೊಡುವುದು ಮತ್ತು ಕೊನೇಲಿ ಅದೇ ಮಾಲೆ ಕಂಬದ ಮೇಲೆ ಕಾಣುವುದು-ಈ ಎಲ್ಲ ಸಣ್ಣ ಸಣ್ಣ ವಿವರಗಳು ಕಥೆಯನ್ನು ಇನ್ನೂ ಶಕ್ತಿಯುತವಾಗಿ ಕಟ್ಟಿಕೊಟ್ಟಿವೆ. ಸಾಮಾನ್ಯವಾಗಿ ಇಂತಹ ಸಣ್ಣ ಸಣ್ಣ ಅಂಶಗಳನ್ನು ಯಾರೂ ಗಮನಿಸಲ್ಲ, ಆದರೆ ನೀವು ಅದನ್ನು ತುಂಬ ಜವಾಬ್ದಾರಿಯಿಂದ ನಿರ್ವಹಿಸಿದ್ದು, ಈ ಸಿನಿಮಾಗೆ ವಿಭಿನ್ನತ್ವವನ್ನು ತಂದಿದೆ. ಇನ್ನು, ನಳಿನಿ ಲಕ್ಷ್ಮೀ ಜೊತೆ ಮಾತಾಡುತ್ತಿದ್ದ ಕ್ಷಣಗಳು ಬೇರೆಯೇ ಮಟ್ಟದಲ್ಲಿದ್ದವು. ಈ ದೃಶ್ಯಗಳು ನನಗೆ ಆಳವಾದ ತೃಪ್ತಿ ಕೊಟ್ಟಿದೆ. ಅಬ್ಬಾ!! ನಮ್ಮ ನಳಿನಿ ಮೇಲೆ ಅವರ ಅಮ್ಮನಿಗೇನೂ ಕೋಪ ಇಲ್ಲ ಅನ್ನೋ ನಿಟ್ಟುಸಿರು...ನೋಡುತ್ತ ನೋಡುತ್ತ ನಳಿನಿ ಲಕ್ಷ್ಮಿಯ ಜೊತೆ ಪ್ರೇಕ್ಷಕನಾಗೆ ನಾನು ಹರಟೆ ಹೊಡಿತಿದ್ಧೆ...!! ಲಕ್ಷ್ಮಿಯ ಪಾತ್ರ ಕಾಣಿಸಿದಾಗ, ಆಕೆಯನ್ನು ಮನೆಗೆ ಹೋಲಿಸಿರಬಹುದು, ನಳಿನಿ ಮನೆಯ ಜೊತೆನೇ ಮಾತಾಡುತ್ತಿರಬಹುದು ಎಂದು ಮೊದಲಿಗೆ ಊಹಿಸಿದೆ. ಆದರೆ ನೀವು ಅದನ್ನು ಮತ್ತೊಂದು ಭಾವನಾತ್ಮಕ ಹಂತಕ್ಕೆ ತೆಗೆದುಕೊಂಡು ಲಕ್ಷ್ಮೀ ಕಂಬ ಎಂಬ ರೀತಿಯಲ್ಲಿ ತೋರಿಸಿದ್ದು ನನಗೆ ಕಣ್ಣೀರು ತರಿಸಿತು. ಇದು ನನಗೆ ತುಂಬಾ ಹತ್ತಿರದ ಸಂಬಂಧದಂತೆ ಅನಿಸಿತು, ಏಕೆಂದರೆ ನಮ್ಮ ಮನೆಯಲ್ಲೂ ಲಕ್ಷ್ಮೀ ಕಂಬವಿದೆ. ನಮ್ಮ ಲಕ್ಷ್ಮೀ ಕೂಡ ನಮ್ಮನ್ನು ಕಾಯುತ್ತಾಳೆ ಮತ್ತು ನಮ್ಮ ಕುಟುಂಬವನ್ನು ನೋಡುತ್ತಿರಬಹುದು ಅನಿಸಿತು. ನನಗೆ ಈ ಧೈರ್ಯವನ್ನು & ಈ ಭರವಸೆಯನ್ನು ಕೊಟ್ಟಿದ್ದು "ಲಕ್ಷ್ಮೀ" . ಈ ಭಾವನೆ ಹುಟ್ಟುವಂತೆ ಮಾಡಿದ ನಿಮಗೆ ಮತ್ತೊಮ್ಮೆ ಅನಂತ ಧನ್ಯವಾದಗಳು. ಪಾತ್ರಗಳ ಅಭಿನಯ ತುಂಬ ಚೆನ್ನಾಗಿತ್ತು ಅಂತ ಹೇಳಿದರೆ ತಪ್ಪಾಗ್ಬೋದೇನೊ...!! ಯಾಕಂದ್ರೆ ಎಲ್ಲರೂ ತುಂಬ ಸಹಜವಾಗಿ ಮೂಡಿಬಂದಿದ್ಧಾರೆ. ಆಮೇಲೆ ನಮ್ಮ ನಳಿನಿ ಮತ್ತು ಲಕ್ಷ್ಮೀ, ಬರೀ ಪಾತ್ರಗಳು ಅಂತ ಮನಸ್ಸು ಒಪ್ಕೊಳ್ಳ್ತಿಲ್ಲ.... ಇನ್ನು ಸಂಗೀತ ಮತ್ತು ಹಿನ್ನಲೆಯಲ್ಲಿ ಬರುವ ಹಾಡುಗಳು, ಮನಸ್ಸನ್ನು ನೇವರಿಸಿದಂತಿತ್ತು...ತುಂಬ ಸೂಕ್ತವಾಗಿ ಇತ್ತು. ಅಮ್ಮ ಹಚ್ಚಿದೊಂದು ಹಣತೆ...ಈಗಲೂ ಕಣ್ಣು ಒದ್ದೆಮಾಡುತ್ತೆ. ಈ ಸಿನಿಮಾ ಪರಿಪೂರ್ಣ ಕಲೆ, ಅದ್ಭುತ ನಿರ್ದೇಶನ ಮತ್ತು ಅಚ್ಚುಕಟ್ಟಾದ ಛಾಯಾಗ್ರಹಣಕ್ಕೆ ಒಳ್ಳೆಯ ಮಾದರಿ. ಇಂತಹ ಆತ್ಮೀಯ ಅನುಭವಕ್ಕಾಗಿ ಧನ್ಯವಾದಗಳು! 🙏 ಮನಸಾರೆ ಅತ್ತು ತುಂಬ ದಿನ ಆಗೋಗಿತ್ತು... ಒಳಗೆ ಮುಚ್ಚಿಟ್ಟಿದ್ದ ಭಾವನೆಗಳ ತಲೆ ಮೇಲೆ "ಲಕ್ಷ್ಮೀ" ನೇ ಕೈ ಸವರಿ "ಏಯ್ ಹುಚ್ಚಪ್ಪ ನಾ ಇದ್ದೀನಿಲ್ಲೋ..!! ಇರ್ಲಿ ಅತ್ತಬಿಡು" ಅಂತ ಅಂದಹಾಗಿತ್ತು ಈ ಕಿರುಚಿತ್ರ...😊 - ಕೃಷ್ಣ ಅಡಬಡ್ಡಿ✍️
@abhikamalhassan24 күн бұрын
ತುಂಬು ಹೃದಯದ ಧನ್ಯವಾದಗಳು ಗೆಳೆಯ ❤️. ಇಷ್ಟು ವಿವರವಾಗಿ ಹಾಗು ಸೂಕ್ಷ್ಮವಾಗಿ ನೀ ನೋಡಿದ್ದು ಹಾಗು ಅದನ್ನ ಆನಂದಿಸಿ ಬರೆದದ್ದು ತುಂಬಾ ಖುಷಿ ಕೊಡ್ತು ❤️.. ನೀ ತುಳಸಿ ಕಟ್ಟೆ ಬಗ್ಗೆ ಅನ್ಕೊಂಡಿದ್ದ ದೃಷ್ಟಿಕೋನ ಕೂಡ ಸುಂದರವಾಗಿದೆ 👌👌👌
@veenakolkar512017 күн бұрын
❤
@ratipati20078 күн бұрын
Everybody's contribution is great and very much needed. More than that, since the main theme is about our JaganmAta Lakshmi, Her blessing made this very successful movie. When Maha Lakshmi is pleased, her Vallabha our lord Narayana will definitely be pleased.
@channabasammaa78526 күн бұрын
Wonderful movie, 🙏
@krishnaadabaddi857129 күн бұрын
ಮನಸಾರೆ ಅತ್ತು ತುಂಬ ದಿನ ಆಗೋಗಿತ್ತು... ಒಳಗೆ ಮುಚ್ಚಿಟ್ಟಿದ್ದ ಭಾವನೆಗಳ ತಲೆ ಮೇಲೆ ಕೈ ಸವರಿದಂತೆ ಇತ್ತು ಈ ಕಿರುಚಿತ್ರ...😊 ಧನ್ಯವಾದ..!!
@abhikamalhassan29 күн бұрын
Thanks❤️. Do share the film link with your family and friends🙂
@Rehana202810 күн бұрын
Me too...
@kavyabhat5740Ай бұрын
ವ್ಹಾ!! ಎಂತಾ ಅದ್ಭುತ ಕಿರುಚಿತ್ರ... ಕಣ್ಣಾಲಿಗಳು ತುಂಬಿದ್ದಲ್ಲದೇ, ಕೊನೆ ಕೊನೆಗೆ ಎದೆ ಬಿಗಿದು ಉಸಿರು ಸಿಕ್ಕಿದಷ್ಟು ಭಾವೋದ್ವೇಗ ಆಯ್ತು! ಭಾವನೆಗಳನ್ನು ತುಂಬಾ ಚೆನ್ನಾಗಿ ಕಟ್ಟಿ ಕೊಟ್ಟಿದ್ದೀರಿ... ❤🎉
@abhikamalhassanАй бұрын
Thank you❤️. Do share the film link with your friends and groups so that it reaches more people
@sandhyakini7631Ай бұрын
ಅಮಿತಾ ನನ್ನ ಮಾಮನ ಮಗಳು, ಅವಳ ಸಂಗೀತ ಪ್ರೇಮ ಅದ್ಭುತವಾಗಿ ಬೆಳಗಲಿ ❤
@darshitkanchan5Ай бұрын
I really had tears while watching this, can't express enough of the lovely feel! Thank you for this art ❤️
@abhikamalhassanАй бұрын
Thank you so much❤️❤️❤️.. Do share to others and help the film reach more people🙂
@nagamanishrigiri984Ай бұрын
Super, even I went one of the village where we lived for only 4 years when I was 12. Went to one of friends house very similar to the shown in the movie. Met their daughter, talked whole heartedly for an hour remembered everything after 28 years, showed my place of play to my children and husband felt the kadapa kallu, touches the photos who is not alive, took the phone nos, exchanged news with each other, talked about other persons in the village who was known to me, it was truly memorable and worth more than a foreign trip.
@shamalas422Ай бұрын
Foreign trip has become a fashion now a days as if they don't have any places in india.
@abhikamalhassanАй бұрын
Im happy you could relate to the film so much❤️..Do share to others and help the film reach more people🙂
@Sown_2_SizzleАй бұрын
just too beautiful, still cant stop crying...very well made
@abhikamalhassanАй бұрын
Thanks❤️. Do share the film link with your family and friends
@rajannav8540Ай бұрын
ಇದು ಕಿರುಚಿತ್ರವಾಗಿದ್ದರೂ ಕೂಡ ಹ್ರೃದಯಸ್ಪರ್ಶಿ ಚಿತ್ರವಾಗಿ ಮೂಡಿ ಬಂದಿದೆ, ಅಭಿಜಿತ್ ಮತ್ತು ಈ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರುಗಳಿಗೆ ನನ್ನ ಅಭಿನಂದನೆಗಳು. ಇದೇ ರೀತಿ ಇನ್ನೂ ಹೆಚ್ಚಿನ ಸದಭಿರುಚಿಯ ಚಿತ್ರಗಳು ಮೂಡಿಬರಲಿ. 🙏👌👍
@abhikamalhassanАй бұрын
Thank you so much❤️❤️❤️.. Do share to others and help the film reach more people🙂
@veenamaheshchandra3916Ай бұрын
ಸುಂದರವಾದ ಹೃದಯಸ್ಪರ್ಶಿ ಚಿತ್ರ.❤👌 ನನ್ನ ಅಮ್ಮನ ನೆನಪಿನಲ್ಲಿ ಮನದಲ್ಲಿ ಮುಚ್ಚಿಟ್ಟ ಭಾವನೆಗಳೆಲ್ಲಾ ಕಣ್ಣೀರಿನಲ್ಲಿ ಹೊರಬಂದು ಮನಸ್ಸು ಹಗುರವಾಯ್ತು . ಈ ಚಿತ್ರತಂಡದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು.🙏
@abhikamalhassanАй бұрын
@@veenamaheshchandra3916Thank you so much❤️❤️❤️.. Do share to others and help the film reach more people🙂
@narayanprakash226622 күн бұрын
Very nice short film with a nice info at the end. Dhanyavadagalu
@abhikamalhassan22 күн бұрын
Thank you ❤️. Do share the film link with your family and friends
@anupamasachar847628 күн бұрын
Very touchy story.... this is the story of every woman,her feelings, guilts, her desires, sacrifices, her passions, interests and mainly her interaction with Mahathayi, and the satisfaction she gets after that, is very nicely depicted.... thank you for giving us such a beautiful movie with so many social values..... looking forward for more short films with good messages
@abhikamalhassan28 күн бұрын
Thanl you mam❤️. Do share the film link with your contacts
@Luxmi131726 күн бұрын
Super sir gantalu bigiyitu, no words .... Innu hechchu kiruchitragalu nimminda rachitavagali.....❤
@abhikamalhassan26 күн бұрын
Thank you❤️. Do share the film link with your contacts
@roopinilifestyle5968Ай бұрын
Wonderful movie...I am remebering my mother's sacrifices seeing this short movie....
@abhikamalhassanАй бұрын
Thanks a lot Roopini❤️. If it touched you.. I feel thats the films victory.. Plz do Share on ur social media and help the film reach more
@bluealien6109Ай бұрын
ಹೃದಯ ಸ್ಪರ್ಶಿ ಕಿರುಚಿತ್ರ 👌🏻🙏🏻👏🏻
@abhikamalhassanАй бұрын
Thanks a lot❤️
@vandanakulkarni7597Ай бұрын
ಕಥೆ ತುಂಬಾ ಇಷ್ಟ ಆಯಿತು ಅಭಿಜಿತ್ ಅವರೇ ನಮ್ಮ ಸಂಪ್ರದಾಯ ಈ ಚಿತ್ರದ ಮೂಲಕ ಬಹಳ ಅರ್ಥಪೂರ್ಣವಾಗಿ ಚಿತ್ರೈಸಿದ್ದಿರಿ ಲಕ್ಷ್ಮಿ ಕಂಬದ ಮಹತ್ವ ತಿಳಿಸಿದ್ದಿರಿ ಹಳೆಯ ಮತ್ತು ತವರು ನೆನಪಿಸಿದ್ದಿರಿ ತುಂಬಾ ಮನ ಮುಟ್ಟಿತು 🙏🙏🙏💐💐 ನಿಮ್ಮ ಪಯಣವು ಹೀಗೆ ಮುಂದುವರೆಯಲಿ
@abhikamalhassanАй бұрын
Thank you ❤️. Plz do share and help the film reach more people
@sudhamani5343Ай бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ,🎉ಅಭಿನಂದನೆಗಳು🎉
@abhikamalhassanАй бұрын
Thank you so much ❤️. Plz do share the film link with ur contacts
@basavarajurraju998Ай бұрын
ನಾವು ಏನೂ ಮರೆತರೂ ನಮ್ಮ ಕಾಲದ ನೆನಪುಗಳೇ ಚಂದ ಅದ್ರೆ ಅದನ್ನ ಅನುಭವಿಸೋ ಮನಸೂ ಇರಬೇಕಷ್ಟೇ 😢❤, ಒಳ್ಳೆ ನೆನಪು..
@abhikamalhassanАй бұрын
Thank you for watching ❤️
@MANJUJMJ20 күн бұрын
Super Story with excellent narration. Super related songs for the scene. Many mid 40's people will relate the story for their parents and relatives.
@abhikamalhassan20 күн бұрын
Thanks Manju❤️. Do share the film link with your family and friends 🙂
@bharatipatwari8990Ай бұрын
ಭಾಳ ಚಲೋ ಅದ.ತವರುಮನೆ ನೆನಪು ಹೋಗೋದೆ ಇಲ್ಲ...... ಮತ್ತೆ ಮತ್ತೆ ಬರತಾ ...... ಮನಸ್ಸು ಮುದಗೊಳುತ್ತೆ......
@abhikamalhassanАй бұрын
Thank you so much❤️❤️❤️.. Do share to others and help the film reach more people🙂
@pushpalathaj416125 күн бұрын
ಅದ್ಭುತವಾದ ಕಿರುಚಿತ್ರ.... ಭಾವಗಳ ಸುಲಲಿತ ಹರಿವು....
@abhikamalhassan24 күн бұрын
Thanks❤️. Do share film link with your contacts
@Hakunamatata56217Ай бұрын
Thumba thumba hrudaya thattuva sundara chitrana ...couldnt stop crying throughout,tears of sorrow and joy ... beautiful...thank you
@abhikamalhassanАй бұрын
Thank you ❤️. Plz do share and help the film reach more people
@anamikaananya113426 күн бұрын
Heart touching and beautifully depicted there no words to Express my appreciation to this short film. Thanks to one and all who have participated in this short film ❤
@abhikamalhassan26 күн бұрын
Thank you❤️. Do share film link with ur contacts
@vishnucoolguy1722Ай бұрын
What a short film, I really loved it, Esto varshadinda albeku andru alu bartiddila, idu nodid mele namma hale mani, Lakshmi Kamba Ella nenapagi Kanniru tana Bandhu, hatts off.
@abhikamalhassanАй бұрын
Im happy my film touched u so much🙏.Thank you❤️. Do share the film link with your friends and groups so that it reaches more people
@soujanyarai9082Ай бұрын
Waw beautiful movie❤all the best abijith purohit
@abhikamalhassanАй бұрын
Thanks a lot❤️
@PoornimaM-k7fАй бұрын
ಅದ್ಭುತ ಪರಿಕಲ್ಪನೆ.... ಮನ ಮುಟ್ಟಿದ ಕಿರು ಚಿತ್ರ 🙏🏻👏🏻👏🏻
@abhikamalhassanАй бұрын
Thank you ❤️. Plz do share and help the film reach more people
@sheelak0521 күн бұрын
Super sir, ur imagination of lakshmi in the story.. Should be there in everyone's life.. So everyone cleared their sarrows with that.. And lived happily.. Tq😊
@abhikamalhassan21 күн бұрын
Thank you❤️. Do share film link with your family and friends
@shamalaramesh9555Ай бұрын
ಸಂತೋಷ, ದುಃಖ ಗಳಿಂದ ಕಣ್ಣೀರು ತರಿಸಿದ ಈ ಕಿರು ಚಿತ್ರ ಮನ ಮುಟ್ಟಿದೆ,ಧನ್ಯವಾದಗಳು,🙏🙏🙏🙏🙏🙏
@abhikamalhassanАй бұрын
Thank you❤️. Do share the film link with your friends and groups so that it reaches more people
@lakshmik29372Ай бұрын
I do notknow kannada. But language is not a barriet. I felt emotional. Took me to my childhood iam eighty years old
@raghavendrad847928 күн бұрын
Very beautiful story..and the character played by Lakshmi is superb
@abhikamalhassan28 күн бұрын
Thank you❤️. Do share the film link with your contacts
@ramajayasimha4307Ай бұрын
Brilliant short film with super acting!!
@abhikamalhassanАй бұрын
Thanks❤️. Plz do share and make it reach to more people
@sandhyabhat984129 күн бұрын
ಸೂಪರ್ ತುಂಬಾ ಚೆನ್ನಾಗಿದೆ... 👍🤗
@abhikamalhassan29 күн бұрын
ಥ್ಯಾಂಕ್ಸ್ ❤️. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂
@vmala6528Ай бұрын
ಅಭಿಜಿತ್ ಅವರೇ ಕಥೆ ಬಹಳ ಸುಂದರವಾಗಿದೆ . ನನ್ನ ತಾಯಿ ನೆನಪುಗಳ ಪರ್ವತವೇ ಮನ ತುಂಬಿ... ಕಣ್ಣು ತುಂಬಿ ಬಂತು 🙏
@abhikamalhassanАй бұрын
Thanks a lot ❤. Plz do share the film with others and help the film reach more people
@vmala6528Ай бұрын
@abhikamalhassan ಹೇಳುವ ಅಗತ್ಯ ಇಲ್ಲ ನಾನು ನೋಡಿದ ಕೂಡಲೇ ಶೇರ್ ಮಾಡಿದ್ದೀನಿ.
@chopnotch1850Ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌..
@abhikamalhassanАй бұрын
Thank you❤️. Do share the film Link with family and friends
@gajendragunjur8752Ай бұрын
ಬಹಳ ಚೆನ್ನಾಗಿದೆ ಅಭಿಜಿತ್, Climax ಅಂತೂ Amazing. ದೀಪಾವಳಿ ಶುಭಾಶಯಗಳು ಹಾಗೂ ಅಭಿನಂದನೆಗಳು 💐👍👌
@abhikamalhassanАй бұрын
Thanks a lot for watching sir. Do share and help the film reach more people
@gajendragunjur8752Ай бұрын
ನನ್ನೆಲ್ಲ ಸ್ನೇಹ ವಲಯಕ್ಕೆ ಕಳಿಸಿದ್ದು ಅಲ್ಲದೆ, ಒಂದೊಳ್ಳೇ Concept ಇದೆ ನೋಡಿ ಅಂತ ಒತ್ತಡ ಹೇರ್ತಿದೇನೆ. ನೋಡಿದವರು ಖುಷಿಯಿಂದ ಪ್ರತಿಕ್ರಿಯಿಸ್ತಿದಾರೆ 😊
@apoorvayadav697619 күн бұрын
ಅಧ್ಬುತವಾದ ಕಿರುಚಿತ್ರ ಎಲ್ಲರ ಪಾತ್ರಗಳು ಸನ್ನಿವೇಶಗಳು ಸಂಭಾಷಣೆ ಎಲ್ಲವೂ ತುಂಬ ಸುಂದರವಾಗಿ ಅಧ್ಬುತವಾಗಿ ಮೂಡಿ ಬಂದಿದೆ ಅಭಿನಂದನೆಗಳು ❤
@abhikamalhassan19 күн бұрын
Thank you❤️. Do share the film link with your friends and groups so that it reaches more people
@mamathargowda6927Ай бұрын
🙏🏻🙏🏻 ತುಂಬಾ ಖುಷಿ ಯಾಯಿತು.,.. ಸಧಾ ಪೂಜಿಸುವರಿಗೆ ತಲೆ ಕಾಯಿತಾಳೆ ಅನ್ನುವುದು ಮನದಟ್ಟು ಮಾಡಿದಾಗಿದೆ... 🌹🌹🌹💞💞
@abhikamalhassanАй бұрын
ತುಂಬಾ ಥ್ಯಾಂಕ್ಸ್ ಮೇಡಂ ❤️.. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ.. ಇನ್ನು ಹೆಚ್ಚು ಜನಕ್ಕೆ ಚಿತ್ರವಣ್ಣ ತಲುಪಿಸುವ ಆಸೆ ❤
@sujatashetty8805Ай бұрын
Such a beautiful movie, so emotional, so different, so divine.🙏🏼
@abhikamalhassanАй бұрын
Thank you ❤️. Do share the film link with your contacts
@pallavisrinath6659Ай бұрын
ಒಂದು ಒಳ್ಳೆಯ ಕಿರು ಚಿತ್ರ👌👌 ಇನ್ನು ಮುಂದೆ ಹೀಗೆ ಒಳ್ಳೆಯ ಚಿತ್ರ ಬರಲಿ.
@abhikamalhassanАй бұрын
Thanks a lot ❤. Plz do share the film with others and help the film reach more people
Thanks a lot ❤. Please do share with your contacts and help the film reach more people
@gopalachara3359Ай бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ.❤
@abhikamalhassanАй бұрын
Thanks a lot sir❤️
@sharadak419327 күн бұрын
A wonderful film. Tradition and beautiful rituals in North Karnataka families.❤ We should take oth to protect this and carry this to the next generation.🎉
@abhikamalhassan27 күн бұрын
Thanks a lot🙂. Do share the film link with your contacts
@mrunalaraghavendra3466Ай бұрын
ಮನ ಮುಟ್ಟುವ ಚಿತ್ರಣ, ಬಹಳ ಸಂತೋಷ ಆಯಿತು. ಭಾವನೆ ವ್ಯಕ್ತಪಡಿಸಲು ಪದಗಳು ಸಿಗುತ್ತಿಲ್ಲ 👌👌🙏🙏🙏🙏
@abhikamalhassanАй бұрын
Thank you for watching❤️ do share the film link with your contacts
@andvyasАй бұрын
Very emotional narration of our culture and traditions Well done team! Super photography and music
@abhikamalhassanАй бұрын
Thank you❤️. Do share the film link with your friends and groups so that it reaches more people
@chaithrar249Ай бұрын
ತುಂಬಾ ದಿನಗಳ ನಂತರ ನೋಡಿದಂತ ಅದ್ಭುತ ಕಿರುಚಿತ್ರ ❤
@abhikamalhassanАй бұрын
Thanks a lot❤️
@sanathpoornabhandarkar5527 күн бұрын
No words to explain. Just tears are rolling out. Superb acting and direction.
@abhikamalhassan27 күн бұрын
Thank you so much 🙂. Do share the film link with your contacts
@vanihegde8040Ай бұрын
ನೈಜವಾಗಿ ಮತ್ತು ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ ಹೆಣ್ಣಿಗೆ ತವರಿನ ಮೇಲೆ ಇರುವ ಆಸೆ ಮತ್ತು ಮತ್ತೆ ಮಗುವಾಗುವ ಮನಸ್ಸು ಭಾವನೆಗಳ ಹದವಾದ ಹಂದರ. ಚಂದದ ಕಲ್ಪನೆ👌
@abhikamalhassanАй бұрын
Thank you❤️. Do share the film link with your friends and groups so that it reaches more people
@KarnaJagadishАй бұрын
ಅದ್ಭುತ, ಕಣ್ಣುಗಳಿಗೆ ಅರಿವಿಲ್ಲದೆ ಕಣ್ಣುಗಳಲ್ಲಿ ನೀರು ಬಂತು. ವಾವ್❤❤❤❤❤❤❤❤🙏
@banavasikannadigaruАй бұрын
ಮತ್ತೆ ಮತ್ತೆ ನೋಡಬೇಕು ಅನಿಸುವ ಸಿನಿಮಾ 😊🙏
@abhikamalhassanАй бұрын
Thanks a lot❤️. Plz do share and help the film reach more people
@nivedithas970920 күн бұрын
Super Abhijit sir well done🙏👏
@abhikamalhassan20 күн бұрын
Thank you❤️. Do share the film link with your contacts
@jyothisollapur3353Ай бұрын
ಕಣ್ಣು ತುಂಬಿ ಬಂದವು, ಮನಸ್ಸೂ ತುಂಬಿತು🙏🙏ಇಂದಿನ ಪೀಳಿಗೆಗೆ ಇಂತಹದೊಂದು ಕಿರುಚಿತ್ರ ಕೊಟ್ಟ ನಿಮಗೆ ಶರಣು ಶರಣಾರ್ಥಿ🙏🙏ನಮ್ಮ ಅಜ್ಜಿ, ಅಮ್ಮನಿಂದ ಕೆಲವು ಅವರ ಸವಿನೆನಪುಗಳನ್ನ ಕೇಳಿದ್ದೆವು, ಈ ಚಿತ್ರವನ್ನು ನೋಡಿ ಬಹಳ ಸಂತೋಷವಾಯಿತು🙏🙏ನಿಮಗೆ ಒಳಿತಾಗಲಿ, ಶುಭವಾಗಲಿ 🪔🪔🙏
@abhikamalhassanАй бұрын
Thanks a lot ❤. Please do share with your contacts and help the film reach more people
@shanthalarajagopal1923Ай бұрын
ಬಹಳ ಚಂದದ ಮನಸ್ಸಿಗೆ ತಟ್ಟಿದ ಕಿರುಚಿತ್ರ . ಒಮ್ಮೆ ಬಾಲ್ಯಕ್ಕೆ ಕರೆದೊಯ್ದು ಕಣ್ಣಂಚು ಒದ್ದೆ ಮಾಡಿತು . ಇನ್ನಷ್ಟು ಕಿರುಚಿತ್ರಗಳು ನಿಮ್ಮ ನಿರ್ದೇಶನದಲ್ಲಿ ಬರಲಿ . ಅಭಿನಂದನೆಗಳು ಸರ್ 💐
@abhikamalhassanАй бұрын
Thanks a lot❤️ do share film link with your family and friends
@Bharathi-joshiАй бұрын
ನಮ್ಮ ತವರೂರಿನ ಮನೆಯಲ್ಲೂ ಒಂದು ಲಕ್ಷ್ಮಿ ಕಂಬ ಇದೆ. ನಾವು ಅದಕ್ಕೆ ಪೂಜೆ ಮಾಡ್ತಿವಿ. ಸೀರೆನೂ ಉಡುಸ್ತಿವಿ. ಇದರ ಮೇಲೆ ನೀವು ಚಿತ್ರ ಮಾಡಿದ್ದು ತುಂಬಾ ವಿಭಿನ್ನ ಹಾಗೂ ಮೆಚ್ಚುವಂತಹದು. ತುಂಬಾ ಚೆನ್ನಾಗಿದೆ ಕಿರುಚಿತ್ರ 👌👌👌
@veenaumesh3879Ай бұрын
Abhijith purohith....team ಗೆ 🎉 ಎದೆಗಡಲಿನಲ್ಲಿ ಎದ್ದ ಮಧುರ ಸ್ಮೃತಿಗಳ ಮಧುರ ತರಂಗಗಳು ಹಿತವಾಗಿ ಹರಿದಂತೆ ಭಾಸ.... ತವರೆಂದರೆ ಅದೊಂದು ಮಮತೆಯ ದೊಡ್ಡ ಭಂಡಾರ... ನೋಡುತ್ತಾ ನೋಡುತ್ತಾ ಆ ಪಾತ್ರಗಳೇ ನಾವೇನೋ ಅನಿಸುವಷ್ಟು ಹೃದಯಕ್ಕೆ ಹತ್ತಿರ......
@abhikamalhassanАй бұрын
Thanks a lot ❤. Please do share with your contacts and help the film reach more people
Thank you❤️. Do share the film link with your friends and groups so that it reaches more people
@sumitapatil876Ай бұрын
Innu e tara kategalanna madi.... Very heart touching.... 👏👏👏👏👏❤🙏
@abhikamalhassanАй бұрын
Thanks ❤️. Do share the film link with your friends and groups
@varshapurohit616Ай бұрын
Love the movie🤗
@abhikamalhassanАй бұрын
Thanks❤️
@bvrajalakshmi123Ай бұрын
Mystic music takes us to another world.😊 I too travelled in time to my childhood with Nalini and was immersed in the memories. Well made movie.😍😍👍👍☺️
@abhikamalhassanАй бұрын
Thank you❤️. Do share the film link with your contacts
@PramithrajvlogsАй бұрын
Very meaningful movie... every scene has its own meaning. We can connect it to our old memories and lifes.
@abhikamalhassanАй бұрын
Thanks a lot❤️. Plz do share and help the film reach more people
@jayashreekn788029 күн бұрын
ತುಂಬಾ ಚೆನ್ನಾಗಿದೆ ,ಕಣ್ಣಾಲಿಗಳು ತುಂಬಿ ಬಂತು,ಧನ್ಯವಾದಗಳು
@abhikamalhassan28 күн бұрын
Thank you❤️. Do share the film link with your friends and groups so that it reaches more people
@rukminimb5874Ай бұрын
ಸುಂದರ ಕಲ್ಪನೆ.. ನೈಜ ನಟನೆ.. ಮನ ಒಮ್ಮೆ ತೇವ ಆಯಿತು.. ನಾವು ಮಧ್ಯ ವಯಸಿನಲ್ಲಿ ಇದೀವಿ.. ನಾಳೆ ನಮ್ಮದೂ ಇದೇ ಅವಸ್ಥೆ.. ಆಸೆ ನಿರಾಸೆ ವಾಸ್ತವದ ನಡುವೆ ಸಾಗಬೇಕು
@abhikamalhassanАй бұрын
Thanks a lot ❤. Plz do share the film with others and help the film reach more people
@sukanyavanahalli3313Ай бұрын
ಸುಂದರ ಕಲ್ಪನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮಗೆ ಧನ್ಯವಾಗಳು 🙏
@abhikamalhassanАй бұрын
Thank you❤️. Do share the film link with your friends and groups so that it reaches more people
@lalithavirupakshaiah8Ай бұрын
ಚಿತ್ರ ಅದ್ಭುತವಾಗಿದೆ. ಅಮ್ಮನ ಬಾಲ್ಯದ ನೆನಪಿನೊಂದಿಗೆ ಕಥೆ ಸಾಗುವ ಪರಿ ಚೆನ್ನಾಗಿದೆ. ಗೀತೆಗಳು ಸೂಪರ್.
@abhikamalhassanАй бұрын
Thank you ❤️. Plz do share and help the film reach more people
@dharmashreesadugemane5948Ай бұрын
ಬಹಳ ಸುಂದರವಾದ ಅನುಭವ ಕೊಟ್ಟ ಚಿತ್ರ.. ಅಭಿನಂದನೆಗಳು ಅಭಿಜಿತ್ 💐💐💐 ಹೀಗೆಯೇ ಇನ್ನೂ ಹೆಚ್ಚಿನ ಚಿತ್ರಗಳು ಮೂಡಿಬರಲಿ 💐💐💐
@abhikamalhassanАй бұрын
ತುಂಬಾ ಥ್ಯಾಂಕ್ಸ್ ಮೇಡಂ ❤️.. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ.. ಇನ್ನು ಹೆಚ್ಚು ಜನಕ್ಕೆ ಚಿತ್ರವಣ್ಣ ತಲುಪಿಸುವ ಆಸೆ ❤
@komalavenkataramu9202Ай бұрын
ತುಂಬಾ ಸರಳ ಸುಂದರ ಕಿರು ಚಿತ್ರ ಚೆನ್ನಾಗಿದೆ ಮೂಡಿ ಬಂದಿದೆ. ನಮ್ಮ ಬಾಲ್ಯ, ತವರು ಮನೆ, ಅಪ್ಪ ಅಮ್ಮ ನೆನಪಾಗಿ ಕಣ್ಣುಗಳು ತುಂಬಿ ಬಂದವು. ಧನ್ಯವಾದಗಳು ಚಿತ್ರ ತಂಡಕ್ಕೆ🙏🙏❤❤
@abhikamalhassanАй бұрын
Thanks ❤️. Do share the film link with ur contacts
@bharathb8822Ай бұрын
ಅದ್ಭುತವಾಗಿದೆ..... ನನ್ನ ಅಮ್ಮನ ಹೆಸರು ಕೂಡ ನಳಿನ, ನನ್ನ ಅಜ್ಜಿ ಹೆಸರು ಗಿರಿಜಾ ♥️ ಈ ಕಿರುಚಿತ್ರ ನೋಡಿದ ಮೇಲೆ ಹೇಳ್ಬೇಕಾಗಿರೋ ವಿಷ್ಯ ಬೇಕಾದಷ್ಟು ಇದ್ರೂ ಹೇಳೋಕೆ ಆಗ್ದೇ ಮನ್ಸಲ್ಲೇ ಇಟ್ಟ್ಕೊಬೇಕು ಅನ್ನಿಸ್ತಿದೆ.... ಈ ಸುಂದರ ಅನುಭವ ಕೊಟ್ಟ ನಿಮಗೆ ಅನಂತ ಅನಂತ ನಮನಗಳು 🙏🙏😇
@abhikamalhassanАй бұрын
Nim taayi hesru nan taayi hesru onde anta tilidu khushi aytu🙂.Thank you❤️. Do share the film link with your friends and groups so that it reaches more people
@subhashinijoshi2615Ай бұрын
ಹರಿಃ 🕉️🙏 ಮನ ತುಂಬಿ.... ಕಣ್ಣೂ.. 😭ತುಂಬಿ ಬಂತು ಹಳೆಯ ನೆನಪುಗಳು... ಮತ್ತೆ ಕಣ್ಣ್ ಮುಂದೆ ಬಂತು....!! ತುಂಬಾ ಚನ್ನಾಗಿ ಮೂಡಿ ಬಂದಿದೆ 👌👏👏👍👍🙏ಧನ್ಯವಾದಗಳು 🙏
@abhikamalhassanАй бұрын
Thank you ❤️. Do share the film link with your contacts
@vibhayn3352Ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತವರು ಮನೆ ಕುಟುಂಬ , ಬಾಲ್ಯದ ನೆನಪುಗಳು, ತಪ್ಪಿತ ಮನೋಭಾವ, ಪಶ್ಚಾತ್ತಾಪದ ನೋವು, ಕಲ್ಪನೆ. ಬಹಳ ಭಾವನಾತ್ಮಕವಾಗಿ. ದುಃಖದಿಂದ ಕಣ್ಣಿರು ಬರಿಸುವ ಕಿರು ಚಿತ್ರ. Hats off to the entire Team. 👏
@abhikamalhassanАй бұрын
ತುಂಬಾ ಥ್ಯಾಂಕ್ಸ್ ❤️. ಫಿಲಂ ಲಿಂಕ್ ಅನ್ನು ನಿಮ್ಮ ಎಲ್ಲಾ ಸ್ನೇಹಿತರಿಗು ಶೇರ್ ಮಾಡಿ
@veenachandrashekarАй бұрын
ಮನ ಮುಟ್ಟುವ ಮಾತುಗಳು, ಕಣ್ಣು ತುಂಬುವ ದೃಶ್ಯಗಳು, ಎಲ್ಲರದ್ದೂ ಅತ್ಯುತ್ತಮ ಅಭಿನಯ... ತುಂಬಾ ಚೆನ್ನಾಗಿ ಮೂಡಿ ಬಂದಿದೆ. 👌🏻👏🏻❤️🙏🏻
@abhikamalhassanАй бұрын
ತುಂಬಾ ಥ್ಯಾಂಕ್ಸ್ ❤️.. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂
@veenachandrashekarАй бұрын
@abhikamalhassan already shared☺️
@shobhavbssmАй бұрын
Very beautiful heart touching film,padmaja rao acted very well,happy ending also we can expect more films from this team 🎉🎉❤❤
@abhikamalhassanАй бұрын
Thank you so much❤️❤️❤️.. Do share to others and help the film reach more people🙂
@ItsharinairАй бұрын
Beautiful concept, great acting and direction😍👏👏
@abhikamalhassan29 күн бұрын
Thank you so much, I’m so glad you enjoyed it! Do share the film link with your family and friends! ❤️
@jyothianand3482Ай бұрын
ತುಂಬಾ ಚೆನ್ನಾಗಿದೆ ಪರಿಕಲ್ಪನೆ.ಪಾತ್ರಗಳು ಕೂಡ ಭಾವುಕ ನೆಲೆಯಲ್ಲಿ ನಿಂತು ಮಾತಾಡುತ್ತವೆ.ಲಕ್ಷ್ಮೀ ಕಂಭದ ಅವಲೋಕನ ಬಲು ಚಂದ.ಹಾಡು ಮನಸನ್ನು ಹಿಂದಕ್ಕೋಡಿ ಸ್ವಯಂ ಭೂತದ ಬದುಕನ್ನು ಹಣಕುವಂತೆ ಮಾಡುತ್ತದೆ.ಸಾಹಿತ್ಯ ತುಂಬಾ ಚೆನ್ನಾಗಿದೆ 👏😍
@abhikamalhassanАй бұрын
Thank you❤️. Do share the film link with your friends and groups so that it reaches more people
@RadhaDeshpande-u9jАй бұрын
🎉ಬಹಳ ಚೆನ್ನಾಗಿದೆ ದೇವರ ಆಶೀರ್ವಾದ ನೀಮ್ಮ ಮೇ ಲೆ ಸದಾ ಇರಲಿ
@srinivasnaidu184227 күн бұрын
ವಾವ್ ಸೂಪರ್ ರೀ heart touching 👏👏
@abhikamalhassan27 күн бұрын
Thank you❤️. Do share film link with your family and friends
Thanks a lot ❤. Please do share with your contacts and help the film reach more people
@shanthammagp13525 күн бұрын
Super Anna hrudayakke mutti kannanchalli neeru tarisuva e nimma prayatnakke manah poorvaka abhinandanegalu
@abhikamalhassan24 күн бұрын
Thanks❤️. Do share film link with your contacts
@prahladjahagirdar3728Ай бұрын
ಅದ್ಭುತ ಚಿತ್ರ! ಕಿರುಚಿತ್ರವನ್ನು ಒಮ್ಮೆ ನೋಡಿ...ನಿಮ್ಮ ಹೃದಯದ ಮೂಲೆಯನ್ನು ಮುಟ್ಟುವುದು ಖಚಿತ....ನಿಮ್ಮ ಮುಂಬರುವ ಚಿತ್ರಗಳಿಗೆ ಆಲ್ ದಿ ಬೆಸ್ಟ್.... ಕನ್ನಡ ಇಂಡಸ್ಟ್ರಿಯಲ್ಲಿ ಇಂತಹ ಚಿತ್ರಗಳಿಗಾಗಿ ನಾವು ಕಾಯುತ್ತಿದ್ದೇವೆ
@abhikamalhassanАй бұрын
Thank you❤️. Do share the film link with your friends and relatives
@hairyporter654413 күн бұрын
We should encourage more directors like abhijit.. Kannada film industry should support directors like him..
@abhikamalhassan13 күн бұрын
Thank you brother❤️. Means a lot. Do share the film link with your contacts
@navya744829 күн бұрын
Beautiful, I just loved it..full of emotions
@abhikamalhassan29 күн бұрын
ಥ್ಯಾಂಕ್ಸ್ ❤️. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂
@sudharavikanzal3629Ай бұрын
ತುಂಬಾ ಮನ ಸೆಳೆದ ಕಥೆ...👏👏
@abhikamalhassanАй бұрын
Thank you❤️. Do share the film link with your contacts
@meenashikenis9469Ай бұрын
👌👌❤ ತುಂಬಾ ಚೆನ್ನಾಗಿದೆ
@abhikamalhassanАй бұрын
Thank you ❤️. Do share the film link with your contacts
@yogeshg707728 күн бұрын
Fantastic music and song . And lakshmi kamba story
@abhikamalhassan27 күн бұрын
Thank you❤️. Do share the film link with your contacts
@shylagirimaji7847Ай бұрын
Abhinandanegalu, super short film. 🎉
@abhikamalhassanАй бұрын
Thank you ❤️. Do share the film link with your contacts
@gayathrikrishna1113Ай бұрын
Very very nice no words to express my wishes 🤗 TQ very much memorize my mother I miss her lot 😭🙏
@abhikamalhassanАй бұрын
Thanks for watching ❤️. Do share film link with your loved ones
@shobhalaxani816014 күн бұрын
What a beautiful short film! The acting and direction were superb. Nalini took me from America to my small village in North Karnataka. Tears streamed down my face; it was so heart-touching.
@abhikamalhassan13 күн бұрын
Ur comment made my day mam❤️. Thank you so much 🙏. Do share the film link with your contacts
@nutanjoshi582218 күн бұрын
❤😊realy heart touching story
@abhikamalhassan18 күн бұрын
Thank you ❤️
@RenukaJoshi-wr5khАй бұрын
Khare bhal chanda ada Na bhal sari nodini super
@abhikamalhassanАй бұрын
Thanks a lot❤️ do share film link with your family and friends
@Sudharama-re650Ай бұрын
Excellent!Heart touching.
@abhikamalhassanАй бұрын
Thank you❤️. Do share the film link with your contacts 🙂
@swaroops331619 күн бұрын
ಹಳ್ಳಿ, ಹಳ್ಳಿಯ ಆತ್ಮೀಯತೆ , ಹಳ್ಳಿಯ ನಂಬಿಕೆಗಳು ಎಷ್ಟು ಚಂದ. ನಿಮ್ಮ ಪರಿಕಲ್ಪನೆ ಮತ್ತು ನಿರ್ದೇಶನ ಅದ್ಭುತ. ಮನಮುಟ್ಟುವ ಕಥೆ. 🙏🙏
@abhikamalhassan19 күн бұрын
Thank you so much❤️❤️❤️.. Do share to others and help the film reach more people🙂
@raghavendrakaradgi3903Ай бұрын
Kathe sundarvagide.
@abhikamalhassanАй бұрын
Thank you❤️. Do share the film link with your contacts
@girijabhat7582Ай бұрын
Super heart touching story..❤
@abhikamalhassanАй бұрын
Thank you❤️. Do share the film link with your family and friends
@vedustocaworld844029 күн бұрын
Adbut kalpane...... 👌👌👌
@abhikamalhassan29 күн бұрын
ಥ್ಯಾಂಕ್ಸ್ ❤️. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂
@sridevisridevi7532Ай бұрын
ತುಂಬಾ ಚೆನ್ನಾಗಿದೆ 👌👌👌
@abhikamalhassanАй бұрын
Thank you❤️. Do share the film link with your friends and groups so that it reaches more people
@shreedevikulkarni650623 күн бұрын
Super movie masta ada ri 👌👌 I like it so much
@abhikamalhassan23 күн бұрын
ಧನ್ಯವಾದಗಳು ❤️. ನಿಮ್ಮ ಪರಿಚಯದವರಿಗೆ ಲಕ್ಷ್ಮೀ ಲಿಂಕ್ ಶೇರ್ ಮಾಡಿ 🙂
@shreedevikulkarni650623 күн бұрын
@abhikamalhassan ok ok namma family full nimma fan agibittidare
@abhikamalhassan22 күн бұрын
@@shreedevikulkarni6506 Thanks a lot❤. Convey my wishes to your family
@rashmibhat854624 күн бұрын
ತುಂಬಾ ತುಂಬಾ ಚೆನ್ನಾಗಿದೆ ❤🙏, ಎಲ್ಲಾ ಕಲಾವಿದರ ಅಭಿನಯ ತುಂಬಾ ತುಂಬಾ ಚೆನ್ನಾಗಿದೆ 🙏❤😍
@abhikamalhassan24 күн бұрын
Thanks❤️. Do share film link with your contacts
@anupamaprasadrnp4192Ай бұрын
Very beautiful no words to express ❤
@abhikamalhassanАй бұрын
Thanks a lot❤️ do share film link with your family and friends
@radhikashenoy8931Ай бұрын
Touched our heart so imotional👌
@abhikamalhassanАй бұрын
Thanks a lot❤️ do share film link with your family and friends
@anuradha99bАй бұрын
ಅದ್ಭುತವಾದ ಚಿತ್ರಣ..👏👏 ಮನಮುಟ್ಟುವ ಕಥೆ 👍 ಇನ್ನಷ್ಟು ಚಿತ್ರಗಳನ್ನು ತೆಗೆಯಿರಿ.
@abhikamalhassanАй бұрын
Thanks ❤️. Do share the film link with ur contacts
@rooparameshkumarpattar8929 күн бұрын
ತುಂಬಾ ಚೆನ್ನಾಗಿದೆ.. ❤
@abhikamalhassan29 күн бұрын
Thank you❤️
@TheCreativeFrontier16 күн бұрын
Very nice and realistic , emotional movie !! Loved it !! ❤❤
@abhikamalhassan16 күн бұрын
Thanks a lot sir❤️. Do share the film link with your family and friends
@GreeshmaCreations29 күн бұрын
Abhijit Purohit Tumba channagidey edu namma maneya kathey saha anisuthey. Tumbane bhavanathmaka vagidu. Ammana mugda nagu mukha plus point kathege. Intha olle kathe torisidake dhanyavada
@abhikamalhassan29 күн бұрын
ಥ್ಯಾಂಕ್ಸ್ ❤️. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂
@GreeshmaCreations29 күн бұрын
@@abhikamalhassanmadidini. Namma halli manege tumba relate aguthey. Tumba janake share maadidini yelaru namma mane story thara edey anthane heltare. Nimmage a lakshmi krupe sada erali
@GreeshmaCreations29 күн бұрын
Naanu 4 to 5 times nodidey nana makalu tumba ishta patru. A mane namma halli mane same to same edey edey thara lock agidey naavu kaytidivi a mane open agoke. Adu saha lakshmi gudi edurige edey.
@shrutikulkarni7092Ай бұрын
Super very heart touching story..... Nanna hale mane nenapu ide riti aytu..... Kannalli niru bantu.... iga appanu illa ammanu illa a hale mane haage ide.....
@abhikamalhassanАй бұрын
Thank you madam❤Do share film link with your contacts 🙂