Рет қаралды 266
ಮಕ್ಕಳು ಸ್ಪರ್ಧಾ ಮನೋಭಾವನೆ ಬೆಳಸಿಕೊಳ್ಳಲು ಮುಂದಾಗಬೇಕು : ಸಿಮಾ ಕೌಸರ್,,,
ಕೊಪ್ಪಳ : ಇಂದಿನ ಮುಂದೊರೆದ ಕಾಲ ಗಟ್ಟದಲ್ಲಿ ಮಕ್ಕಳು ಸ್ಪರ್ಧಾಮನೋಭಾವನೆ ಬೆಳೆಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಲು ಮುಂದಾಗಬೇಕು ಎಂದು ಕುಕನೂರು ತಾಲೂಕ ಪಂಚಾಯತನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಹವರ್ತಿ ಸೀಮಾ ಕೌಸರ್ ಹೇಳಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಬುಧವಾರದಂದು ಕುಕನೂರು ತಾಲೂಕಿನ ರಾಜೂರ ಗ್ರಾಮದ ರಾಜೂರು ಗ್ರಾಮ ಪಂಚಾಯತಿ ಹಾಗೂ ಗ್ರಂಥಾಲಯದ ಸಂಯುಕ್ತಾಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಗ್ರಾಮ ಸ್ವಚ್ಚತೆ ಹಾಗೂ ಆರೋಗ್ಯ ಕುರಿತು ಪ್ರಬಂಧ ಸ್ಪರ್ಧೆ ಮತ್ತು ಚಿತ್ರ ಕಲಾ ಸ್ಪರ್ಧೆ ಆಯೋಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಓದಿನ ಕಡೆಗೆ ಆಕರ್ಷಿಸಲು ಹಾಗೂ ಗ್ರಂಥಾಲಯದ ಹವ್ಯಾಸ ಬೆಳಸಿಕೊಳ್ಳುವದರ ಜೊತೆಗೆ ಅರಿವು ಕೇಂದ್ರಗಳಿಗೆ ಬರುವಂತೆ ಮಾಡಿ ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸಿ ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಅಭಿವೃದ್ದಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೋಳುವ ಮೊದಲು ಭಯವನ್ನು ತೊಡೆದು ಹಾಕಿ ನಿರ್ಭಯದಿಂದ ಮುನ್ನುಗಬೇಕು ಅಂದಾಗ ಮಾತ್ರ ಸಾಧನೆ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಈ ಸ್ಪರ್ಧೆಯಲ್ಲಿ ಪಾಲ್ಗೋಳ್ಳಲು ರಾಜೂರಿನ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳ ಶಿಕ್ಷಕರಿಗೆ ಅಭಿನಂದಿಸಿದ ಅವರು ಸ್ಪರ್ಧೆಯಲ್ಲಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಗ್ರಾಮ ಸಭೆಯಲ್ಲಿ ಪಾಲಕರ ಸಮಕ್ಷಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ನಂತರದಲ್ಲಿ ವಿದ್ಯಾರ್ಥಿನಿ ಕೃತಿಕಾ ಮಾತನಾಡಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಿರುವುದು ತುಂಬಾ ಸಂತೋಷವಾಗಿದೆ, ಇದರಿಂದ ನಮ್ಮಲ್ಲಿ ಉತ್ತಮವಾಗಿ ಓದಬೇಕು ಎಂಬ ಛಲ ಹೆಚ್ಚಾಗುತ್ತದೆ. ಒಟ್ಟಾರೇ ಶೈಕ್ಷಣಿಕ ಸುಧಾರಣೆಗೆ ಇಂತಹ ಕಾರ್ಯಕ್ರಮಗಳು ಅವಶ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಅಭಿವೃದ್ದಿ ಅಧಿಕಾರಿ ಸಿದ್ದನಗೌಡ, ಗ್ರಂಥಪಾಲಕ ನಿಂಗಪ್ಪ ಹಾಗೂ ಶಿಕ್ಷಕರಾದ ವೀರಯ್ಯ ಸಸಿಮಠ ಉಪಸ್ಥಿತರಿದ್ದರು.
ವರದಿ. ಪಂಚಯ್ಯ ಹಿರೇಮಠ