Рет қаралды 85
ಮಿಸ್ಸಳ್ ಪಾವ್ ಮಹಾರಾಷ್ಟ್ರದ ಮತ್ತೊಂದು ಅದ್ಭುತ ರುಚಿಯ ರಸ್ತೆ ಬದಿ ತಿಂಡಿ. ಶಕ್ತಿಗಾಗಿ ಮೊಳಕೆಕಾಳು, ಹೊಟ್ಟೆ ತುಂಬಲು ಬ್ರೆಡ್, ಬನ್ಸ್ ಮತ್ತು ನಾಲಿಗೆ ರುಚಿಗೆ ಪೌಡರ್ ಮಸಾಲಗಳು.
ಬೇಕಾಗುವ ಸಾಮಗ್ರಿಗಳು
1) 1 ಕಪ್ ಹೆಸರು ಕಾಳು ( ರಾತ್ರಿ ಇಡೀ ನೆನಸಿ, ಸೋಶಿ ಒಂದು ದಿನ ಮೊಳಕೆ ಬರಿಸಿದ ಕಾಳು.
4 ಕಪ್ ನೀರು
ಅರ್ಧ ಚಮಚ ಉಪ್ಪು. ಹದವಾಗಿ ಕುದಿಸಿಕೊಳ್ಳಬೇಕು. ಮೆತ್ತಗಾಗಬಾರದು.
2) ಹುರಿದು ರುಬ್ಬುವ ಮಸಾಲ
4-5 ಚಮಚ ಒಣ ಕೊಬ್ಬರಿ ತುರಿ (Dry rost)
1 ದೊಡ್ಡ ಈರುಳ್ಳಿ ಉದ್ದಕ್ಕೆ ಹೆಚ್ಚಿದ್ದು
2 ಟೊಮೊಟೊ ಉದ್ದಕ್ಕೆ ಹೆಚ್ಚಿದ್ದು
2 ಚಮಚ ಎಣ್ಣೆ
8-10 ಬೆಳ್ಳುಳ್ಳಿ ಎಸಳು
ಉಳಿದ ಕೊಬ್ಬರಿ, ಟೊಮ್ಯಾಟೋ ಈರುಳ್ಳಿ ಬೆಳ್ಳುಳ್ಳಿ, ಎಲ್ಲವನ್ನ ಹಾಕಿ ರುಬ್ಬಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು.
3) ಕಟ್ ಮಾಡಿಕೊಳ್ಳುವ ವಿಧಾನ
4 ಚಮಚ ಎಣ್ಣೆ
ರುಬ್ಬಿದ ಮಿಶ್ರಣ
1/2 ಚಮಚ ಅರಿಶಿಣ
1 ಚಮಚ ಕಾರದಪುಡಿ
1 1/2 ಚಮಚ ಗೋಡ ಮಸಾಲಾ. ( ವಿಡಿಯೋದಲ್ಲಿ ಇದು ಕಾಣುತ್ತಿಲ್ಲ ಸಹಕರಿಸಿ )
ರುಚಿಗೆ ತಕ್ಕಷ್ಟು ಉಪ್ಪು
ಒಂದು ತುಂಡು ಬೆಲ್ಲ
ಮಡಿಕೆ ಕಾಳು ಹಾಕಿ ( ನೀರು ಸಮೇತ) ಚೆನ್ನಾಗಿ ಕುದಿಸಬೇಕು. ರುಚಿ ನೋಡಿ ಸರಿಪಡಿಸಿ.
4) ಬಡಿಸುವ ವಿಧಾನ
ಪ್ಲೇಟ್ಗೆ ಮೊದಲು ದಿನವೂ ಮಾಡುವ ಆಲೂಗೆಡ್ಡೆ ಪಲ್ಯ, ಅದರ ಮೇಲೆ ಅವಲಕ್ಕಿ ಒಗ್ಗರಣೆ, ಅದರ ಮೇಲೆ ಕಾಳು ನಂತರ ಕಟ್ಟು ಹಾಕಿ ಅದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಚಾಟ್ ಮಸಾಲ, ಒಣ ಮ್ಯಾಂಗೋ ಪೌಡರ್ ಹಾಕಿ ಉದುರಿಸಿ, ವಿಡಿಯೋದಲ್ಲಿ ತೋರಿಸಿದಂತೆ ಬ್ರೆಡ್ ಸ್ಲೈಸ್ ಹಾಗೂ ಬನ್ಸ್ ಜೊತೆ ಸರ್ವ್ ಮಾಡಬೇಕು.