Рет қаралды 333
ವೆಜ್ ಜಾಲ್ ಫ್ರೈ, ಒಂದು ಸುಂದರ ರುಚಿಕಟ್ಟಾದ ಅಡುಗೆ. ಪನ್ನೀರಿನಷ್ಟೇ ಜನಪ್ರಿಯವಾದ ಅಡುಗೆ, ತಿಂದರೆ ಒಂದು ಅದ್ಭುತವಾದ ಭೋಜನ. ಇದನ್ನು ಪ್ರೀತಿಯಿಂದ ಸವಿಯಬಹುದು ಅಂತ ನವಿರಾದ ರುಚಿ, ಇದರ ಗಮ, ಸ್ವಾದ ಮನಸ್ಸಿಗೆ ತೃಪ್ತಿ ತರುತ್ತದೆ, ನಾಲಿಗೆಗೆ ನಳಪಾಕವಾಗುತ್ತದೆ.
1)ಮಸಾಲಾ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು.
3 ಚಮಚ ಅಡುಗೆ ಎಣ್ಣೆ
2 ಒಣ ಮೆಣಸಿನಕಾಯಿ
1 ಈರುಳ್ಳಿ ( ಸಣ್ಣಗೆ ಹೆಚ್ಚಿದ್ದು )
3 ಹಸಿಮೆಣಸಿನಕಾಯಿ ( ಸಹೆ )
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ ಕೆಂಪಗಾಗುವಂತೆ ಹುರಿದು, ಉರಿ ಕಮ್ಮಿ ಮಾಡಿ ಪೌಡರ್ ಮಸಾಲ ಹಾಕುವುದು.
ಪೌಡರ್ ಮಸಾಲಗಳು
1 ಚಮಚ ಧನಿಯ ಪುಡಿ
1/2 ಚಮಚ ಕಾರದಪುಡಿ
1/4 ಅರಿಶಿಣ ಪುಡಿ
2 ಚಮಚ ಟೊಮೇಟೊ ಕೆಚಪ್
4 ಟಮೋಟಗಳ ರುಬ್ಬಿದ ರಸ
ರುಚಿಗೆ ತಕ್ಕಷ್ಟು ಉಪ್ಪು
ಚಿಟಿಕೆ ಗರಂ ಮಸಾಲ
1 ಚಮಚ ಕಸೂರಿ ಮೇತೀ
3) ಕುಡಿಯಲು ತರಕಾರಿಗಳು
2 ಚಮಚ ಅಡುಗೆ ಎಣ್ಣೆ
1 ಚಮಚ ಜೀರಿಗೆ
10 ತುಂಡು ಬೀನ್ಸ್ ಗಳು
1 ಈರುಳ್ಳಿ ಉದ್ದಕ್ಕೆ ಹೆಚ್ಚಿದ್ದು
2 ಚಮಚ ಕುದಿಸಿದ ಬಟಾಣಿಗಳು
1 ಎಲೆ ಎಲೆಕೋಸು ( ಉದ್ದಕ್ಕೆ ಹೆಚ್ಚಿದ್ದು )
30 ತುಂಡುಗಳು ಬಣ್ಣ ಬಣ್ಣದ ಕ್ಯಾಪ್ಸಿಕಂ ( ಊ ಹೆ,)
ಗರಿಗರಿಯಾಗಿ ಉರಿದು, ತರಕಾರಿಗಳು ಮೆತ್ತಗಾಗದಂತೆ ನೋಡಿಕೊಂಡು, ನಂತರ ಅವಕ್ಕೆ ಸೇರಿಸುವ ಸಾಮಗ್ರಿಗಳು
1/4 ಚಮಚ ಅರಿಶಿಣ ಪುಡಿ
1/4ಚಮಚ ಕಾರದಪುಡಿ
1/2 ಚಮಚ ಚಾಟ್ ಮಸಾಲ
ಒಂದು ಚಿಟಕಿ ಗರಂ ಮಸಾಲ.
1 ಈರುಳ್ಳಿ ಉದ್ದಕ್ಕೆ ಹೆಚ್ಚಿದ್ದು
1 ಟಮೋಟೊ ಉದ್ದಕ್ಕೆ ಹೆಚ್ಚಿದ್ದು
ಇವುಗಳನ್ನು ಬೇರೆಯಾಗಿ ಉರಿದುಕೊಳ್ಳಬೇಕು. ಇಲ್ಲದಿದ್ದರೆ ತರಕಾರಿಗಳು ಮೆತ್ತಗಾಗುತ್ತವೆ