No video

ನಿಶ್ಚಿತಾರ್ಥವನ್ನು ಮಾಡಿಕೊಂಡ ಅಭಿಷೇಕ್ ಅಂಬರೀಶ್ ಹಾಗೂ ಅವಿವ ಜೋಡಿಗೆ ಶುಭಾಶಯ

  Рет қаралды 404

FOOD STORY WITH JP

FOOD STORY WITH JP

Күн бұрын

ನಿಶ್ಚಿತಾರ್ಥವನ್ನು ಮಾಡಿಕೊಂಡ ಅಭಿಷೇಕ್ ಅಂಬರೀಶ್ ಹಾಗೂ ಅವಿವ ಜೋಡಿಗೆ ಶುಭಾಶಯಗಳು💐ಯಂಗ್ ರೆಬೆಲ್ ಸ್ಟಾರ್' ಅಭಿಷೇಕ್ ಅಂಬರೀಷ್ ಅವರ ಮದುವೆ ನಿಶ್ಚಿತಾರ್ಥವು ಫ್ಯಾಷನ್ ಗುರು ಪ್ರಸಾದ್‌ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಜೊತೆಗೆ ಇಂದು (ಡಿ.11) ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಅದ್ದೂರಿಯಾಗಿ ನಡೆದಿದೆ. ಈ ನಿಶ್ಚಿತಾರ್ಥ ಸಮಾರಂಭದ ಮೊದಲ ಫೋಟೋ ಇಲ್ಲಿದೆ ನೋಡಿ.ರೆಬೆಲ್ ಸ್ಟಾರ್‌' ಅಂಬರೀಷ್ ಮತ್ತು ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಅಂಬರೀಷ್ (Abhishek Ambareesh) ಅವರ ಮದುವೆ ನಿಶ್ಚಿತಾರ್ಥವು ಅವಿವಾ ಬಿದ್ದಪ್ಪ ಅವರೊಂದಿಗೆ ಭಾನುವಾರ (ಡಿ.11) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿಯಾಗಿರುವ ಅವಿವಾ (Aviva Bidapa), ಫ್ಯಾಷನ್ ಡಿಸೈನರ್, ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದಾರೆ. ಭಾನುವಾರ ನಡೆದ ಅಭಿಷೇಕ್ & ಅವಿವಾ ನಿಶ್ಚಿತಾರ್ಥದಲ್ಲಿ ಎರಡು ಕುಟುಂಬಗಳ ಆಪ್ತರು, ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.
ಇನ್ನು, ಅಭಿಷೇಕ್ ಅಂಬರೀಷ್ ಅವರ ಮದುವೆ ಬಗ್ಗೆ ಕೆಲ ದಿನಗಳಿಂದ ಸಾಕಷ್ಟು ಸುದ್ದಿ ಹರಿದಾಡುತ್ತಿದ್ದವು. ಆದರೆ ಈ ಬಗ್ಗೆ ಅಂಬಿ ಫ್ಯಾಮಿಲಿ ಏನೊಂದು ಮಾಹಿತಿಯನ್ನೂ ಹಂಚಿಕೊಂಡಿರಲಿಲ್ಲ. ಅಭಿಷೇಕ್ ಅವರಿಗೆ ಈ ಬಗ್ಗೆ ಕೇಳಿದರೆ, 'ಪ್ರತಿ ಸಲ ನನ್ನ ಮದುವೆ, ನಿಶ್ಚಿತಾರ್ಥ ಆಗಲಿದೆ ಎಂಬ ನ್ಯೂಸ್ ಕೇಳುತ್ತಿರುತ್ತೇನೆ. ನಾನು ನಿತ್ಯ ಕನಕಪುರಕ್ಕೆ ಶೂಟಿಂಗ್‌ಗೆ ಹೋಗುತ್ತಿದ್ದೇನೆ. ಇದರ ಮಧ್ಯೆ ಯಾವಾಗ ಹುಡುಗಿ ನೋಡಿದೆ, ಯಾವಾಗ ನಿಶ್ಚಿತಾರ್ಥ ಮಾಡಿಕೊಂಡೆ ಎಂದು ಗೊತ್ತಿಲ್ಲ. ಪದೇ ಪದೇ ನಿಶ್ಚಿತಾರ್ಥದ ಬಗ್ಗೆ ಮಾತನಾಡ್ತಿದ್ರೆ ಮುಂದೆ ನನಗೆ ಯಾರೂ ಹುಡುಗಿ ಕೊಡಲ್ಲ' ಎಂದು 10 ದಿನಗಳ ಹಿಂದಷ್ಟೇ ಹೇಳಿದ್ದರು. ಇದೀಗ ಅದ್ದೂರಿಯಾಗಿ ಅವಿವಾ ಜೊತೆಗೆ ಎಂಗೇಜ್ ಆಗಿದ್ದಾರೆ.
Abhishek Ambareesh: ಅಭಿಷೇಕ್ ಅಂಬರೀಶ್, ಅವಿವ ಬಿದ್ದಪ್ಪ ನಿಶ್ಚಿತಾರ್ಥದ ವಿಷಯ ಗುಟ್ಟಾಗಿ ಇಟ್ಟಿರುವುದೇಕೆ?.
ಮದುವೆ ಯಾವಾಗ?
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಕೆಲ ತಿಂಗಳ ಹಿಂದೆ ನಟ ಮನೋರಂಜನ್ ರವಿಚಂದ್ರನ್ ಮದುವೆ ಆಗಿದ್ದರು. ಈಚೆಗೆ ನಟಿ ಅದಿತಿ ಪ್ರಭುದೇವ ಅವರ ಮದುವೆ ಕೂಡ ಆಯಿತು. ಕೆಲ ದಿನಗಳ ಹಿಂದೆ ಸದ್ದಿಲ್ಲದೇ ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ನಟ ಅಭಿಷೇಕ್ ಅವರ ಎಂಗೇಜ್‌ಮೆಂಟ್ ನಡೆದಿದೆ. ಅಭಿಷೇಕ್ ಮತ್ತು ಅವಿವಾ ಅವರ ಮದುವೆ ಯಾವಾಗ ಅನ್ನೋದು ಸದ್ಯಕ್ಕೆ ಬಹಿರಂಗವಾಗಿಲ್ಲ. ಬಹುಶಃ 2023ರ ಆರಂಭದಲ್ಲಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
'ಇದೇ ತರ ಮಾತು ಕೇಳ್ತಿದ್ರೆ, ನಂಗೆ ಯಾರೂ ಹುಡುಗಿ ಕೊಡಲ್ಲ'; ಅಭಿಷೇಕ್ ಅಂಬರೀಶ್ ಸ್ಪಷ್ಟನೆ
ಸಿನಿಮಾಗಳಲ್ಲಿ ಅಭಿಷೇಕ್ ಬ್ಯುಸಿ
'ಅಮರ್‌' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಭಿಷೇಕ್, ಆನಂತರ ಈಗ 'ಬ್ಯಾಡ್ ಮ್ಯಾನರ್ಸ್' ಸಿನಿಮಾವನ್ನು ಮುಗಿಸಿದ್ದಾರೆ. ಇದಕ್ಕೆ 'ದುನಿಯಾ' ಸೂರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. 'ಹೆಬ್ಬುಲಿ' ಕೃಷ್ಣ ನಿರ್ದೇಶನದ ‘ಕಾಳಿ’ ಸಿನಿಮಾದಲ್ಲೂ ಅಭಿಷೇಕ್ ನಟಿಸುತ್ತಿದ್ದು, ಈಚೆಗಷ್ಟೇ ಆ ಸಿನಿಮಾಗೆ ಮುಹೂರ್ತ ನೆರವೇರಿದೆ. 'ಅಯೋಗ್ಯ' ಖ್ಯಾತಿಯ ಮಹೇಶ್ ನಿರ್ದೆಶನ ಮಾಡಲಿರುವ ಹೊಸ ಸಿನಿಮಾದಲ್ಲೂ ಅಭಿಷೇಕ್ ಬಣ್ಣ ಹಚ್ಚಲಿದ್ದು, ಮುಂದಿನ ವರ್ಷ ಶೂಟಿಂಗ್ ಆರಂಭವಾಗಲಿದೆ. ಎಲ್ಲ ಅಂದುಕೊಂಡಂತೆ ಆದರೆ 2023ರಲ್ಲಿ ಅಭಿಷೇಕ್ ಅವರ ಮೂರು ಸಿನಿಮಾಗಳು ತೆರೆಕಂಡರೆ ಅಚ್ಚರಿ ಇಲ್ಲ. ಇನ್ನು, ಅಭಿಷೇಕ್ ಅವರು ರಾಜಕೀಯಕ್ಕೂ ಎಂಟ್ರಿ ನೀಡಲಿದ್ದಾರೆ ಎಂಬ ಮಾತು ಹಲವು ದಿನಗಳಿಂದ ಕೇಳಿಬರುತ್ತಲೇ ಇದೆ.
ಕನಕಪುರ ಸುತ್ತಮುತ್ತ ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಶೂಟಿಂಗ್
ಬೆನ್ನ ತುಂಬ ಅಭಿಷೇಕ್ ಅಂಬರೀಷ್ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದ ಮದ್ದೂರಿನ ಅಭಿಮಾನಿ
ಸಂಬಂಧಿತ ಸುದ್ದಿ
Abhishek Ambareesh: ಅಭಿಷೇಕ್ ಅಂಬರೀಶ್, ಅವಿವ ಬಿದ್ದಪ್ಪ ನಿಶ್ಚಿತಾರ್ಥದ ವಿಷಯ ಗುಟ್ಟಾಗಿ ಇಟ್ಟಿರುವುದೇಕೆ?.
Abhishek Ambareesh: ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಪುತ್ರಿ ಅವಿವ ಜೊತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ?
'ಇದೇ ತರ ಮಾತು ಕೇಳ್ತಿದ್ರೆ, ಅತ್ತೆ ಸುಮಲತಾ ಕಾಲಿಗೆ ಬಿದ್ದ ಅವಿವಾ | #Tv9kannadashorts #engagement

Пікірлер
Unveiling my winning secret to defeating Maxim!😎| Free Fire Official
00:14
Garena Free Fire Global
Рет қаралды 10 МЛН
Interview with dr V P Gangadharan in Nerechowe | Manorama News
25:31
Manorama News
Рет қаралды 453 М.