Рет қаралды 392
ಪಿ ಲಿಂಗಯ್ಯ ಮೆಮೋರಿಯಲ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದ ಪಿ ಲಿಂಗಯ್ಯ ಮೆಮೋರಿಯಲ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ವಿಜೃಂಭಣೆಯಿಂದ ಆಚರಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪುಟ್ಟ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಗಣ್ಯರ ಹಾಗೂ ಚಿಂತಕರ ವೇಷ ಭೂಷಣವನ್ನು ಧರಿಸಿದ್ದರು. ಪುಟ್ಟ ಮಕ್ಕಳ ಪಾಲಕರು ಹಾಗೂ ಸಾರ್ವಜನಿಕರು ಇದನ್ನು ನೋಡಿ ಸಂತೋಷಪಟ್ಟರು.
ಮಹಾನ್ ವ್ಯಕ್ತಿಗಳ ಪಟ್ಟಿ ಈ ಕೆಳಗಿನಂತಿದೆ,
ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಭಾರತ ಮಾತೆ, ನೆಹರು, ಭಾರತೀಯ ಸೈನಿಕ, ಪೊಲೀಸ್, ಭಗತ್ ಸಿಂಗ್, ಚಂದ್ರ ಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್, ಸಂಗೊಳ್ಳಿ ರಾಯಣ್ಣ, ಈ ರೀತಿಯ ಅನೇಕ ವೇಷ ಭೂಷಣ ಧರಿಸಿದ್ದರು, ಆಚರಣೆಯಲ್ಲಿ ಶಾಲೆಯ ಅಧ್ಯಕ್ಷರು ಸಾಂಬಾಶಿವರಾವ್, ಪ್ರಾಂಶುಪಾಲರು ಸಲ್ವಿ ಜಾರ್ಜ್ , ಮುನಿರಾಬಾದ್ ಗ್ರಾಮ ಪಂಚಾಯಿತಿ ಸದಸ್ಯರು, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಬಾಲಚಂದ್ರನ್, ಶಾಲೆಯ ಶಿಕ್ಷಕರು, ಸಿಬ್ಬಂಧಿ ವರ್ಗದವರು, ವಿದ್ಯಾರ್ಥಿಗಳ ಪಾಲಕರು, ಸಾರ್ವಜನಿಕರು ಮತ್ತಿತರು ಭಾಗಿಯಾಗಿದ್ದರೂ.