ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು | Sudha Murty's First Speech in Rajya Sabha

  Рет қаралды 1,949

Udayavani

Udayavani

4 күн бұрын

#Udayavani #sudhamurthyspeech #sudhamurthyinspirationalspeech #sudhamurthystories #sudhamurthybooks #infosys #sudhamurthyrajyasabha
ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ.
#sudhamurthyspeech :- ಭಾರತದಲ್ಲಿ ಪ್ರವಾಸೋದ್ಯಮಕ್ಕೆ‌ ಇನ್ನಷ್ಟು ಆದ್ಯತೆ ನೀಡಬೇಕು. ದೇಶದಲ್ಲಿ ಅಜಂತಾ, ಎಲ್ಲೋರ, ಬೃಹದೀಶ್ವರ, ತಾಜ್‌ಮಹಲ್‌ ನೋಡಬೇಕು ಎಂಬ ಮಾತಿದೆ. ಆದರೆ, ಭಾರತದಲ್ಲಿ 42 ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. ಇನ್ನೂ 57 ತಾಣಗಳು ಪೆಂಡಿಂಗ್‌ ಲಿಸ್ಟ್‌ನಲ್ಲಿವೆ. ಇವುಗಳ ಕುರಿತು ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದರು.
ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಇನ್ಫೋಸಿಸ್‌ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾ ಮೂರ್ತಿ (Sudha Murty) ಅವರು ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದರು. “ನಾನು ರಾಜಕಾರಣಿ ಅಲ್ಲ. ನನಗೆ ಹೆಚ್ಚು ಮಾತನಾಡಲು ಬರುವುದಿಲ್ಲ” ಎನ್ನುತ್ತಲೇ ಭಾಷಣ ಆರಂಭಿಸಿದ ಅವರು ಗರ್ಭಕಂಠ ಕ್ಯಾನ್ಸರ್‌ಗೆ (Cervical Cancer) ಲಸಿಕೆ ಹಾಗೂ ಕರ್ನಾಟಕ (Karnataka) ಸೇರಿ ದೇಶದ ಪ್ರವಾಸೋದ್ಯಮದ ಏಳಿಗೆಯ ಕುರಿತು ಸದನದ ಗಮನಕ್ಕೆ ತಂದರು. ಕರ್ನಾಟಕ ಪ್ರವಾಸೋದ್ಯಮದ ಕುರಿತೂ ಅವರು ಹೆಚ್ಚು ಗಮನ ಸೆಳೆದರು.
“ಗರ್ಭಕಂಠದ ಕ್ಯಾನ್ಸರ್‌ ಈಗ ಮಾರಣಾಂತಿಕವಾಗಿದೆ. ಒಬ್ಬ ತಾಯಿ ಮೃತಪಟ್ಟರೆ ಮಕ್ಕಳು ಅನಾಥರಾಗುತ್ತಾರೆ. ಒಬ್ಬ ವ್ಯಕ್ತಿಗೆ ಹೆಂಡತಿ ತೀರಿಕೊಂಡರೆ ಮತ್ತೊಬ್ಬ ಪತ್ನಿ ಸಿಗುತ್ತಾಳೆ. ಆದರೆ, ಮಕ್ಕಳಿಗೆ ತಾಯಿ ತೀರಿಕೊಂಡರೆ, ಜೀವನಪೂರ್ತಿ ಅವರು ಅನಾಥರಾಗುತ್ತಾರೆ. ಹಾಗಾಗಿ, ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಈಗ ಲಸಿಕೆಗೆ 1,300-1,400 ರೂ. ಆಗುತ್ತದೆ. ಸರ್ಕಾರ ಮಧ್ಯಪ್ರವೇಶಿಸಿದರೆ ಅದನ್ನು 800 ರೂಪಾಯಿಗೆ ಹೆಣ್ಣುಮಕ್ಕಳಿಗೆ ಲಸಿಕೆ ಕೊಡಿಸಬಹುದು” ಎಂದರು. ಆಗ ಸಭಾಧ್ಯಕ್ಷರು, “ಈ ಕುರಿತು ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ ನಡ್ಡಾ ಅವರ ಗಮನಕ್ಕೆ ತನ್ನಿ” ಎಂದರು.
ಪ್ರವಾಸೋದ್ಯಮದ ಕುರಿತು ಹೇಳಿದ್ದಿಷ್ಟು…
“ಭಾರತದಲ್ಲಿ ಪ್ರವಾಸೋದ್ಯಮಕ್ಕೆ‌ ಇನ್ನಷ್ಟು ಆದ್ಯತೆ ನೀಡಬೇಕು. ದೇಶದಲ್ಲಿ ಅಜಂತಾ, ಎಲ್ಲೋರ, ಬೃಹದೀಶ್ವರ, ತಾಜ್‌ಮಹಲ್‌ ನೋಡಬೇಕು ಎಂಬ ಮಾತಿದೆ. ಆದರೆ, ಭಾರತದಲ್ಲಿ 42 ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. ಇನ್ನೂ 57 ತಾಣಗಳು ಪೆಂಡಿಂಗ್‌ ಲಿಸ್ಟ್‌ನಲ್ಲಿವೆ. ಇವುಗಳ ಕುರಿತು ಹೆಚ್ಚಿನ ಆದ್ಯತೆ ನೀಡಬೇಕು. ಕರ್ನಾಟಕದ ಶ್ರವಣಬೆಳಗೋಳದಲ್ಲಿರುವ ಬಾಹುಬಲಿಯ ಮೂರ್ತಿ, ಮಧ್ಯಪ್ರದೇಶದ ಮಾಂಡು, ದೇಶದ ಗುಹೆಗಳು, ಬಾದಾಮಿ, ಐಹೊಳೆ, ಲಿಂಗರಾಜ ದೇವಾಲಯಗಳು ದೇಶದ ಸಂಸ್ಕೃತಿಯ ತಾಣಗಳಾಗಿವೆ. ಇವುಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು” ಎಂದರು.
“ತ್ರಿಪುರದಲ್ಲಿರುವ ಉನಾಕೋಟಿ, ಮಿಜೋರಾಂನಲ್ಲಿ ನೈಸರ್ಗಿಕ ಸೇತುವೆಗಳಿವೆ. ಇವುಗಳನ್ನು ನೋಡಲು ವಿದೇಶಕ್ಕೆ ಹೋಗುವವರಿದ್ದಾರೆ. ತಂಜಾವೂರಿನ ಬೃಹದೇಶ್ವರ ದೇವಾಲಯ, ಶ್ರೀರಂಗಂ, ಕಾಶ್ಮೀರದಲ್ಲಿರುವ ಮೊಘಲ್‌ ಗಾರ್ಡನ್‌ಗಳು ಜಗತ್ತಿನ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಇಲ್ಲ. ಇವುಗಳನ್ನು ಪಟ್ಟಿಗೆ ಸೇರಿಸುವುದರಿಂದ ಆ ಸ್ಥಳಗಳಿಗೆ ಜನರನ್ನು ಸೆಳೆಯಲು ಪ್ಯಾಕೇಜ್‌ಗಳನ್ನು ಘೋಷಿಸಲಾಗುತ್ತದೆ. ಇದರಿಂದ ಪ್ರವಾಸೋದ್ಯಮದ ಆದಾಯ ಹೆಚ್ಚಾಗುತ್ತದೆ. ಹತ್ತಾರು ಅವಕಾಶಗಳು ಸೃಷ್ಟಿಯಾಗುತವೆ” ಎಂದು ಹೇಳಿದರು.
"Get Your Daily Dose of News, Entertainment, and Infotainment - All in One Place!"
Udayavani is a leading Kannada Daily Newspaper with editions from Manipal, Bangalore, Mumbai, Hubli, Gulbarga and Davanagere.
Launched in 1971 by Shri. Mohandas Pai and Shri. T.Satish U Pai, Udayavani with combined circulation exceeding 3,00,000 copies is the undisputed leader in Coastal Karnataka region. Over the years Udayavani has been acclaimed for its high quality content, unbiased journalism, extensive local coverage, neat layout and printing excellence.
Udayavani is published by Manipal Media Network Ltd. promoted by the highly acclaimed “The Manipal Group” - a diversified multi-business conglomerate headquartered at Manipal, Karnataka.
OWNERSHIP OF UDAYAVANI NEWSPAPER
Manipal Media Network Ltd also publishes Taranga (Leading Family Weekly Magazine),
Roopatara (Leading Cinema Monthly Magazine in Kannada),
Tunturu (Illustrated Children’s Magazine in Kannada) and
Tushara (Kannada Monthly Magazine).
www.udayavani.com (News Website)
For licensing this content, please write to udayavanionline@gmail.com
…………………………………………………………………………………….
#KarnatakaNews #SoftStory #Udayavani #Newsupdates
Download Udayavani App bit.ly/2Ho0YS4
For more..
Website:
www.udayavani.com
www.udayavani.com/english
samskruti.udayavani.com/
Udayavani E-paper :
epaper.udayavani.com/
Facebook:
/ udayavani.webnews
/ udayavanicinema
/ udayavanienglish
KZbin :
/ udayavanidigital
Twitter:
/ udayavani_web

Пікірлер: 3
@rohinipatil8016
@rohinipatil8016 3 күн бұрын
Best of luck ma'am for new journey Lucky to have u in Rajyasabha gem of India
@veenakumari4257
@veenakumari4257 7 сағат бұрын
🙏🙏🙏🙏🙏🙏👌👌👌
@user-ul7om6rx1r
@user-ul7om6rx1r 3 күн бұрын
Ankola to Hubli railway line work start madi sir
Жайдарман | Туған күн 2024 | Алматы
2:22:55
Jaidarman OFFICIAL / JCI
Рет қаралды 1,6 МЛН
LIVE: Rajya Sabha proceedings
2:25:08
ThePrint
Рет қаралды 6 М.
Жайдарман | Туған күн 2024 | Алматы
2:22:55
Jaidarman OFFICIAL / JCI
Рет қаралды 1,6 МЛН